ಬೆಳಗಾವಿ: ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಸೋತಿದ್ದ ಹಣ ಕೊಡದಿದ್ದಕ್ಕೆ ಇಬ್ಬರಿಗೆ ಚಾಕು ಇರಿತ

| Updated By: ಆಯೇಷಾ ಬಾನು

Updated on: Aug 07, 2023 | 1:05 PM

ಅಲ್ತಾಮೇಶ್ ನಾಯ್ಕ್, ಇರ್ಫಾನ್ ಸುಬಾನಿ ಎಂಬುವವರು ಸೌದಿ ಅರೇಬಿಯಾದಲ್ಲಿ ಬೆಟ್ಟಿಂಗ್ ಆಡಿ ಹಣ ಗಳಿಸಿ ಗ್ರಾಮಕ್ಕೆ ಹಿಂದಿರುಗಿದ್ದರು. ಈ ವೇಳೆ ಬೆಳಗಾವಿ ನಗರ ನಿವಾಸಿ ಆಸೀಫ್ ಜಮಾದಾರ ಸೇರಿ ಮೂವರು ಲೋಂಡಾ ಗ್ರಾಮದಲ್ಲಿ ಅಲ್ತಾಮೇಶ್ ಮತ್ತು ಇರ್ಫಾನ್​ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.

ಬೆಳಗಾವಿ: ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಸೋತಿದ್ದ ಹಣ ಕೊಡದಿದ್ದಕ್ಕೆ ಇಬ್ಬರಿಗೆ ಚಾಕು ಇರಿತ
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ, ಆ.07: ಕ್ರಿಕೆಟ್ ಬೆಟ್ಟಿಂಗ್​ನಲ್ಲಿ(Cricket Betting) ಸೋತಿದ್ದ ಹಣ ಕೊಡದಿದ್ದಕ್ಕೆ ಇಬ್ಬರಿಗೆ ಚಾಕು ಇರಿದಿರುವ(Stab) ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಗ್ರಾಮದಲ್ಲಿ ನಡೆದಿದೆ. ಸೌದಿ ಅರೇಬಿಯಾದಲ್ಲಿ ಬೆಟ್ಟಿಂಗ್ ಆಡಿದವರು ಊರಿಗೆ ವಾಪಾಸ್ ಆದ ಬಳಿಕ ಗಲಾಟೆ ನಡೆದಿದೆ.

ಅಲ್ತಾಮೇಶ್ ನಾಯ್ಕ್, ಇರ್ಫಾನ್ ಸುಬಾನಿ ಎಂಬುವವರು ಸೌದಿ ಅರೇಬಿಯಾದಲ್ಲಿ ಬೆಟ್ಟಿಂಗ್ ಆಡಿ ಹಣ ಗಳಿಸಿ ಗ್ರಾಮಕ್ಕೆ ಹಿಂದಿರುಗಿದ್ದರು. ಈ ವೇಳೆ ಬೆಳಗಾವಿ ನಗರ ನಿವಾಸಿ ಆಸೀಫ್ ಜಮಾದಾರ ಸೇರಿ ಮೂವರು ಲೋಂಡಾ ಗ್ರಾಮದಲ್ಲಿ ಅಲ್ತಾಮೇಶ್ ಮತ್ತು ಇರ್ಫಾನ್​ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಬಳಿಕ ಇಬ್ಬರಿಗೂ ಚಾಕು ಇರಿದಿದ್ದಾರೆ. ಚಾಕು ಇರಿದು ಹಣ ವಾಪಾಸ್‌ ಮಾಡಲು ಡಿಮ್ಯಾಂಡ್‌ ಮಾಡಿದ್ದಾರೆ.

ಚಾಕು ಇರಿತಕ್ಕೆ ಒಳಗಾದ ಅಲ್ತಾಮೇಶ್ ನಾಯಕ್, ಆಸೀಫ್ ಜಮಾದಾರ ಎಂಬಾತನೊಟ್ಟಿಗೆ ಬೆಟ್ಟಿಂಗ್ ನಲ್ಲಿ ಹಣ ಸೋತಿದ್ದ. ನಿನ್ನೆ ಸಂಜೆ ಹಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಚಾಕು ಇರಿಯಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡು ಮೂರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಾಕು ಇರಿತಕ್ಕೊಳಗಾದ ಇಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: ನೆಲಮಂಗಲ: ಪತ್ನಿಯನ್ನು ಗ್ರಾಪ ಪಂಚಾಯಿತಿ ಅಧ್ಯಕ್ಷೆಯಾಗಿಸುವ ಕಸರತ್ತು ನಡೆಸಿದ್ದ ಪತಿ ಗುರಿ ಈಡೇರುವ ಮೊದಲೇ ರಸ್ತೆ ಅಪಘಾತಕ್ಕೆ ಬಲಿ!

ಆಸ್ತಿ ಉಳಿಸಲು ಹೋಗಿ ಸೊಸೆ ಮಗನಿಂದಲೆ ಅತ್ತೆಯ ಬರ್ಬರ ಕೊಲೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಹಣಕ್ಕಾಗಿ ಹೆತ್ತ ಮಗ ಮತ್ತು ಸೊಸೆಯೆ ತಾಯಿಯನ್ನ ಕೊಂದು ಹೆಣವಾಗಿ ಮಾಡಿದ್ದಾರೆ. ಹೆತ್ತ ಕರುಳನ್ನೆ ರಾಡ್ನಿಂದ ಹೊಡೆದು ಪರಲೋಕಕ್ಕೆ ಕಳಿಸಿದ್ದು ಇದೀಗ ಮಾಡಿದ ತಪ್ಪಿಗೆ ದಂಪತಿಗಳಿಬ್ಬರು ಜೈಲಿನಲ್ಲಿ ಕಂಬಿ ಎಣಿಸಲು ಮುಂದಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ 4 ಸಾವಿರ ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣವಾದ ನಂತರ ದೇವನಹಳ್ಳಿ ಸುತ್ತಾಮುತ್ತಲಿನ ಜಮೀನನ್ನ ಮಾತನಾಡಲು ಆಗದಂತಹ ಮಟ್ಟಿಗೆ ಬೆಲೆ ಏರಿಕೆಯಾಗಿದೆ. ಈ ನಡುವೆ ಏರ್ಪೋಟ್ ಅಕ್ಕ ಪಕ್ಕದಲ್ಲಿ ಜಮೀನುಗಳಿಗಾಗಿ ಸ್ವತಃಹ ವಂಚನೆ ಮೋಸದ ಜೊತೆಗೆ ಕೊಲೆಗಳು ಸಹ ನಡೆದು ಹೋಗ್ತಿದ್ದು. ಇಷ್ಟುದಿನ ದಾಯಾದಿಗಳು ಅಣ್ಣ ತಮ್ಮಂದಿರು ನೆರೆ ಹೊರೆಯವರ ನಡುವೆ ನಡೆಯುತ್ತಿದ್ದ ಕಿತ್ತಾಟ ಜಗಳ ಕೊಲೆ ಹೆತ್ತ ಕರುಳನ್ನೆ ಕತ್ತರಿಸುವ ಹಂತಕ್ಕೆ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿ ಅನ್ನೂ ಈ ಗ್ರಾಮ ಏರ್ಪೋಟ್ ರಸ್ತೆಯ ಪಕ್ಕದಲ್ಲೆ ಏರ್ಪೋಟ್ ನಿಂದ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿದೆ. ಹೀಗಾಗೆ ಈ ಗ್ರಾಮದ ಸುತ್ತಾಮುತ್ತಲಿನ ಬಹುತೇಕ ಜಮೀನುಗಳನ್ನ ಉಳ್ಳವರು ಖರೀದಿ ಮಾಡಿದ್ದು ಉಳಿದು ಕೊಂಡಿರುವ ಅಲ್ಪ ಸ್ವಲ್ಪ ಜಮೀನಿಗೂ ಸಾಕಷ್ಟು ಡಿಮ್ಯಾಂಡ್ ಇದ್ದು ಮಾರಾಟ ಮಾಡಿದ್ರೆ ಕೊಂಡುಕೊಳ್ಳಲು ತುದಿಗಾಲಲ್ಲಿ ನಿಲ್ಲುವವರೆ ಹೆಚ್ಚು. ಹೀಗಾಗೆ ಇದೇ ವಿಚಾರವೆ ಇದೀಗ ಭೂಮಿಗಾಗಿ ಹೆತ್ತ ತಾಯಿಯನ್ನೆ ಮಗ ಕೊಲ್ಲುವಂತಹ ನೀಚ ಬುದ್ದಿಗೆ ತಂದು ನಿಲ್ಲಿಸಿದೆ. ಮಗ, ಸೊಸೆ ಸೇರಿಕೊಂಡು ಯರ್ತಿಗಾನಹಳ್ಳಿ ಗ್ರಾಮದಲ್ಲಿ ತಾಯಿ ಚಿನ್ನಮ್ಮಳನ್ನು ಕೊಲೆ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ