SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 1 ಸಾವಿರ ಮಾಸ್ಕ್ ನೀಡಲು ಮುಂದಾದ ವಿದ್ಯಾರ್ಥಿನಿ

| Updated By:

Updated on: Jun 01, 2020 | 8:17 PM

ಬೆಳಗಾವಿ: ಇಡೀ ದೇಶಾದ್ಯಂತ ಕೊರೊನಾ ಮಹಾಮಾರಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಇದನ್ನ ತಡೆಯಲು ದೇಶವನ್ನೇ ಲಾಕ್​ಡೌನ್ ಮಾಡಿ ಇದೀಗ ಮತ್ತೆ ಸಡಿಲಿಕೆ ಮಾಡಲಾಗಿದೆ. ಆದ್ರೇ ಕೊರೊನಾದಿಂದ ಸರ್ಕಾರದ ಬೊಕ್ಕಸಕ್ಕೂ ಹೊಡೆತ ಬಿದ್ದಿದ್ದು ಪರಿಹಾರ ನೀಡುವುದು ಸೇರಿದಂತೆ ಎಲ್ಲದಕ್ಕೂ ಹಣ ಕೊಡುತ್ತಿದ್ದು ಒಂದು ಹಂತದಲ್ಲಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. 1 ಸಾವಿರ ಮಾಸ್ಕ್ ನೀಡಲು ಮುಂದಾದ ವಿದ್ಯಾರ್ಥಿನಿ: ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರು ಸಹಾಯ ಮಾಡ ಬಯಸುವವರು ಪ್ರಧಾನಿ ಪರಿಹಾರ ನಿಧಿಗೆ ಹಣ ನೀಡಬಹುದು ಎಂದು ಕರೆ […]

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 1 ಸಾವಿರ ಮಾಸ್ಕ್ ನೀಡಲು ಮುಂದಾದ ವಿದ್ಯಾರ್ಥಿನಿ
Follow us on

ಬೆಳಗಾವಿ: ಇಡೀ ದೇಶಾದ್ಯಂತ ಕೊರೊನಾ ಮಹಾಮಾರಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಇದನ್ನ ತಡೆಯಲು ದೇಶವನ್ನೇ ಲಾಕ್​ಡೌನ್ ಮಾಡಿ ಇದೀಗ ಮತ್ತೆ ಸಡಿಲಿಕೆ ಮಾಡಲಾಗಿದೆ. ಆದ್ರೇ ಕೊರೊನಾದಿಂದ ಸರ್ಕಾರದ ಬೊಕ್ಕಸಕ್ಕೂ ಹೊಡೆತ ಬಿದ್ದಿದ್ದು ಪರಿಹಾರ ನೀಡುವುದು ಸೇರಿದಂತೆ ಎಲ್ಲದಕ್ಕೂ ಹಣ ಕೊಡುತ್ತಿದ್ದು ಒಂದು ಹಂತದಲ್ಲಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ.

1 ಸಾವಿರ ಮಾಸ್ಕ್ ನೀಡಲು ಮುಂದಾದ ವಿದ್ಯಾರ್ಥಿನಿ:
ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರು ಸಹಾಯ ಮಾಡ ಬಯಸುವವರು ಪ್ರಧಾನಿ ಪರಿಹಾರ ನಿಧಿಗೆ ಹಣ ನೀಡಬಹುದು ಎಂದು ಕರೆ ಕೊಟ್ಟಿದ್ದರು. ಇದರಿಂದ ಪ್ರೇರಣೆಗೊಂಡ ಬೆಳಗಾವಿ ನಗರದ ಖಾಸಗಿ ಶಾಲೆಯ ವಿದ್ಯಾರ್ಥಿನಿಯೊಬ್ಬರು ತನಗೆ ಬಹುಮಾನವಾಗಿ ಬಂದಿರುವ ಹಣದಲ್ಲಿಯೇ ಎಸ್ಎಸ್ಎಲ್​​​ಸಿ ಪರೀಕ್ಷೆ ಬರೆಯುವ ತನ್ನ ಸಹಪಾಠಿ ಬಡ ವಿದ್ಯಾರ್ಥಿಗಳಿಗೆ 1 ಸಾವಿರ ಮಾಸ್ಕ್ ನೀಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ತಾನೂ ಕೂಡಿಟ್ಟ ಹಣದಲ್ಲಿ 10 ಸಾವಿರ ರೂಪಾಯಿಯನ್ನ ಪ್ರಧಾನಿ ಪರಿಹಾರ ನಿಧಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಡ್ಯಾನ್ಸ್ ಸ್ಪರ್ಧೆಯಲ್ಲಿ ಬಂದಿದ್ದ ಹಣ:
ಹೌದು ಬೆಳಗಾವಿ ನಗರದ ವಡಗಾವಿಯ ವಜ್ಜೆ ಗಲ್ಲಿಯ ನಿವಾಸಿ ಶ್ರೇಯಾ ವಿಶ್ವನಾಥ ಸವ್ವಾಶೇರಿ ಎಂಬ ವಿದ್ಯಾರ್ಥಿನಿ 1 ಸಾವಿರ ಮಾಸ್ಕ್ ಹಾಗೂ 10 ಸಾವಿರ ಹಣವನ್ನು ನೀಡಿದ್ದಾರೆ. ಅಭಿನಯ ಎಂಬ ಡ್ಯಾನ್ಸ್ ಸ್ಪರ್ಧೆಯಲ್ಲಿ ಬಂದಿದ್ದ 8,000 ಸಾವಿರ ಹಣದಲ್ಲಿ ಮಾಸ್ಕ್ ಸಿದ್ಧಪಡಿಸಲು ಬೇಕಾದ ಸಾಮಾಗ್ರಿ ತೆಗೆದುಕೊಂಡು ತಾನೇ ಖುದ್ದು ಮಾಸ್ಕ್ ಗಳನ್ನ ಸಿದ್ಧಪಡಿಸಿದ್ದಾರೆ. ಪರೀಕ್ಷೆ ನಡೆಯುವ ದಿನದಲ್ಲೇ ಪರೀಕ್ಷಾ ಕೇಂದ್ರದಲ್ಲಿ ಪ್ರತಿಯೊಂದು ಮಕ್ಕಳಿಗೂ ಮಾಸ್ಕ್ ನೀಡಿ ಎಲ್ಲರೂ ಮಾಸ್ಕ್ ಹಾಕಿಕೊಂಡು ಪರೀಕ್ಷೆ ಬರೆಯುವಂತೆ ಜಾಗೃತಿ ಕೂಡ ಈ ಬಾಲಕಿ ಮೂಡಿಸಲಿದ್ದಾರೆ.

ಇನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ, ಬೆಳಗಾವಿ ಜಿಲ್ಲೆಯಲ್ಲಿ ಅಸಾಧಾರಣ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದ ಈ ವಿದ್ಯಾರ್ಥಿನಿಗೆ 10 ಸಾವಿರ ರೂ.ಗಳ ಬಹುಮಾನ ಬಂದಿತ್ತು. ಈ ಹಣವನ್ನ ಖರ್ಚು ಮಾಡದೆ ಇಟ್ಟುಕೊಂಡಿದ್ದ ಶ್ರೇಯಾ ಇದೀಗ ಹತ್ತು ಸಾವಿರ ರೂಪಾಯಿಯನ್ನ ಚೆಕ್​ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮೂಲಕ ಪ್ರಧಾನಿ ಪರಿಹಾರ ನಿಧಿಗೆ ನೀಡಿ ಮಾದರಿಯಾಗಿದ್ದಾರೆ.

ಇನ್ನೂ ವಿದ್ಯಾರ್ಥಿನಿಯ ಈ ಕಾರ್ಯವನ್ನು ಕೇಂದ್ರ ಸಚಿವ ಸುರೇಶ್ ಅಂಗಡಿ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿಯವರು ಮೆಚ್ಚಿ ಶುಭಹಾರೈಸಿ ಹರ್ಷ ವ್ಯಕ್ತಪಡಿಸಿದ್ದಾರೆ.

200ಕ್ಕೂ ಹೆಚ್ಚು ಬಹುಮಾನ ಗೆದ್ದಿರುವ ವಿದ್ಯಾರ್ಥಿನಿ:
ಪ್ರತಿಭಾವಂತ ವಿದ್ಯಾರ್ಥಿನಿಯಾದ ಶ್ರೇಯಾ, ನೃತ್ಯ, ಗಾಯನ, ಭಾಷಣ, ಜಾನಪದ ಗೀತೆಗಳ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ 200 ಕ್ಕಿಂತ ಹೆಚ್ಚು ಬಹುಮಾನ ಗೆದ್ದಿದ್ದಾರೆ. ಇನ್ನು ಗೆದ್ದಂತಹ ಸಂಪೂರ್ಣ ಬಹುಮಾನದ ಹಣವನ್ನು ವಿದ್ಯಾರ್ಥಿಗಳು ಹಾಗೂ ಬಡ ಜನರ ಸೇವೆಗಾಗಿ ಉಪಯೋಗಿಸುತ್ತಿದ್ದಾರೆ. ಈ ಮೊದಲು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ತಾನು ಗಳಿಸಿದ ಬಹುಮಾನ ಹಣದಿಂದಲೇ ಸ್ವಂತ ಖರ್ಚಿನಿಂದ ಮತದಾನದ ಕುರಿತು ಜಾಗೃತಿ ಮೂಡಿಸಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದರು.