ಬೆಳಗಾವಿ: ನಿನ್ನೆ(ಮಾ.30) ದೇಶದಾದ್ಯಂತ ರಾಮನವಮಿಯನ್ನ ಅದ್ದೂರಿಯಾಗಿ ಆಚರಿಸಲಾಗಿದೆ. ಅದೇ ರೀತಿ ನಿನ್ನೆ ಬೆಳಗಾವಿಯಲ್ಲಿಯೂ ಕೂಡ ಅದ್ದೂರಿಯಾಗಿ ರಾಮನವಮಿ(Ramnavami) ಆಚರಿಸಲಾಗಿದ್ದು. ಇದೇ ವೇಳೆ ಮೆರವಣಿಗೆಯಲ್ಲಿ ಕನ್ನಡ ಧ್ವಜಹಾರಿಸಿದ್ದಕ್ಕೆ ಮಂಜುನಾಥ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಟಿಳಕ ಚೌಕ ಬಳಿಯಿರುವ ಶಿವಸೇನಾ ಕಚೇರಿಯ ಮುಂದೆ ನಡೆದಿದೆ. ಹೌದು ಚುನಾವಣೆ ಹೊಸ್ತಿಲಲ್ಲಿರುವಾಗ ಮತ್ತೆ ಮರಾಠಿಗರು ಪುಂಡಾಟಿಕೆ ಶುರು ಮಾಡಿದ್ದಾರೆ. ಇದೀಗ ಹಲ್ಲೆ ಮಾಡಿದ ಕಿಡಿಗೇಡಿಗಳ ಮೇಲೆ ಕನ್ನಡಪರ ಹೋರಾಟಗಾರರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನೀತಿ ಸಂಹಿತೆ ಜಾರಿ ಇದ್ದರೂ ಡಿಜೆಗೆ ಅವಕಾಶ ಕೊಟ್ಟು ಎಡವಟ್ಟು ಮಾಡಿದ್ರಾ ಪೊಲೀಸರು
ಹೌದು ಇದೀಗ ಚುನಾವಣೆ ದಿನಾಂಕವನ್ನ ಚುನಾವಣಾ ಆಯೋಗ ನಿಗದಿ ಮಾಡಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಇದರ ಬೆನ್ನಲ್ಲೇ ರಾಮನವಮಿಯಂದು ಡಿಜೆಗೆ ಅವಕಾಶ ಕೊಟ್ಟು ಪೊಲೀಸರು ಎಡವಟ್ಟು ಮಾಡಿದ್ರಾ ಎಂಬ ಮಾತು ಕೇಳಿ ಬರುತ್ತಿದೆ. ಇದರ ಜೊತೆಗೆ ಗಲಾಟೆಯಾಗುತ್ತಿದ್ದರೂ ಅದನ್ನ ನಿಭಾಯಿಸುವಲ್ಲಿ ನಗರ ಪೊಲೀಸರು ವಿಫಲವಾದ ಕಾರಣ ಅವರ ವಿರುದ್ಧ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಡೆಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಾಮನವಮಿ ಆಚರಣೆ ವೇಳೆ 2 ಗುಂಪುಗಳ ನಡುವೆ ಮಾರಾಮಾರಿ; ಅಪ್ರಾಪ್ತ ಬಾಲಕರಿಗೆ ಚಾಕು ಇರಿತ
ಹಾಸನ: ದೇಶದಾದ್ಯಂತ ರಾಮನವಮಿ ಅದ್ದೂರಿಯಾಗಿ ಜರುಗಿದೆ. ಅದರಂತೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ರಾಮನವಮಿ ಹಿನ್ನೆಲೆ ಮೆರವಣೆಗೆ ಹಮ್ಮಿಕೊಳ್ಳಲಾಗಿದ್ದು. ಇದೇ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ಶುರುವಾಗಿದೆ. ಈ ಸಂದರ್ಭದಲ್ಲಿ ಅನ್ಯಕೋಮಿನ ಯುವಕರ ಗುಂಪೊಂದು ಇಬ್ಬರು ಅಪ್ರಾಪ್ತ ಬಾಲಕರಿಗೆ ಚಾಕುವಿನಿಂದ ಇರಿದಿರುವ ಘಟನೆ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಡೆದಿದೆ. ಗಾಯಗೊಂಡ ಮುರಳಿ, ಹರ್ಷಗೆ ಎಂಬ ಬಾಲಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 am, Fri, 31 March 23