AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Howrah Ram Navami clashes: ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿ ಆಚರಣೆ ವೇಳೆ ಹಿಂಸಾಚಾರ; ವಾಹನಗಳಿಗೆ ಬೆಂಕಿ

ರಾಮನವಮಿ ಮೆರವಣಿಗೆ ಕಾಜಿಪಾರಾ ಪ್ರದೇಶವನ್ನು ದಾಟುತ್ತಿದ್ದಾಗ ಹಿಂಸಾಚಾರ ಸಂಭವಿಸಿದೆ. ಹಿಂಸಾಚಾರದ ಸಮಯದಲ್ಲಿ ಕೆಲವು ಪೊಲೀಸ್ ವಾಹನಗಳು ಸೇರಿದಂತೆ ಹಲವಾರು ಕಾರುಗಳು ಹಾನಿಗೊಳಗಾಗಿವೆ

Howrah Ram Navami clashes: ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿ ಆಚರಣೆ ವೇಳೆ ಹಿಂಸಾಚಾರ; ವಾಹನಗಳಿಗೆ ಬೆಂಕಿ
ಹೌರಾದಲ್ಲಿ ಸಂಘರ್ಷ
ರಶ್ಮಿ ಕಲ್ಲಕಟ್ಟ
|

Updated on:Mar 30, 2023 | 9:28 PM

Share

ರಾಮನವಮಿ (Ram Navami)ಆಚರಣೆಯ ನಡುವೆ ಪಶ್ಚಿಮ ಬಂಗಾಳದ (West Bengal) ಹೌರಾದಲ್ಲಿ (Howrah) ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಗಲಭೆ ನಡುವೆ ಕಲ್ಲು ತೂರಾಟ ನಡೆದಿದ್ದು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಪ್ರಸ್ತುತ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಮನವಮಿ ಮೆರವಣಿಗೆ ಕಾಜಿಪಾರಾ ಪ್ರದೇಶವನ್ನು ದಾಟುತ್ತಿದ್ದಾಗ ಹಿಂಸಾಚಾರ ಸಂಭವಿಸಿದೆ. ಹಿಂಸಾಚಾರದ ಸಮಯದಲ್ಲಿ ಕೆಲವು ಪೊಲೀಸ್ ವಾಹನಗಳು ಸೇರಿದಂತೆ ಹಲವಾರು ಕಾರುಗಳು ಹಾನಿಗೊಳಗಾಗಿವೆ. ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದೆ.

ಕೇಂದ್ರದ ನೀತಿಗಳ ವಿರುದ್ಧ ಕೋಲ್ಕತ್ತಾದಲ್ಲಿ ಎರಡು ದಿನಗಳ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಲಭೆಕೋರರನ್ನು ದೇಶದ ಶತ್ರು ಎಂದು ಕರೆದಿದ್ದು ಇಂದಿನ ಹಿಂಸಾಚಾರದ ಹಿಂದೆ ಇರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇಂದಿನ ಹಿಂಸಾಚಾರದಲ್ಲಿ ಭಾಗಿಯಾದವರನ್ನು ಬಿಡುವುದಿಲ್ಲ, ನಾನು ಗಲಭೆಕೋರರನ್ನು ಬೆಂಬಲಿಸುವುದಿಲ್ಲ ಅವರನ್ನು ದೇಶದ ಶತ್ರು ಎಂದು ಪರಿಗಣಿಸುತ್ತೇವೆ. ಬಿಜೆಪಿ ಯಾವಾಗಲೂ ಹೌರಾವನ್ನು ಗುರಿಯಾಗಿಸುತ್ತದೆ. ಅವರ ಇತರ ಗುರಿಗಳು ಪಾರ್ಕ್ ಸರ್ಕಸ್ ಮತ್ತು ಇಸ್ಲಾಂಪುರ, ಎಲ್ಲರೂ ಎಚ್ಚರವಾಗಿರಬೇಕು ಎಂದು ಮಮತಾ ಹೇಳಿದ್ದಾರೆ.

ಆದರೆ ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ, ಆಕೆಯ ಆರೋಪವನ್ನು ನಿರಾಕರಿಸಿದ್ದು ಹಿಂಸಾಚಾರಕ್ಕೆ ತೃಣಮೂಲ ಸರ್ಕಾರವನ್ನು ದೂಷಿಸಿದರು. ಹಿಂಸಾಚಾರಕ್ಕೆ ಮುಖ್ಯಮಂತ್ರಿ ಮತ್ತು ರಾಜ್ಯ ಆಡಳಿತವೇ ಹೊಣೆ ಎಂದು ಅಧಿಕಾರಿ ಹೇಳಿದ್ದಾರೆ.

ರಾಮನವಮಿ ಆಚರಣೆಯ ದಿನವಾದ ಮಾರ್ಚ್ 30 ರಂದು ಪ್ರತಿಭಟನೆಯನ್ನು ಘೋಷಿಸಿದ್ದಕ್ಕಾಗಿ, ಬಿಜೆಪಿ ತೃಣಮೂಲ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿತು. ಸನಾತನ ಸಂಸ್ಕೃತಿಯಲ್ಲಿ ನಂಬಿಕೆ ಇರುವವರು ರಾಮನ ಜನ್ಮದಿನವನ್ನು ಆಚರಿಸುತ್ತಾರೆ ಎಂದು ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಹೇಳಿದ್ದಾರೆ. ಆ ದಿನದಂದು ರಜೆ ಘೋಷಿಸುವ ಬದಲು ತಿರುಚಿದ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ ನಂತರ ಅವರು ಪ್ರತಿಭಟನೆಗಳನ್ನು ಘೋಷಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ಊಳಿಗಮಾನ್ಯ ವ್ಯವಸ್ಥೆಯ ಜಮೀನುದಾರನಂತೆ ವರ್ತಿಸುತ್ತಿದೆ: ಕೇಂದ್ರ ವಿರುದ್ಧ ಮಮತಾ ವಾಗ್ದಾಳಿ

ಮಮತಾ ಬ್ಯಾನರ್ಜಿ ಅವರು “ಶಾಂತಿಯುತವಾಗಿ” ಮೆರವಣಿಗೆಗಳನ್ನು ಕೈಗೊಳ್ಳುವಂತೆ ಜನರಲ್ಲಿ ಒತ್ತಾಯಿಸಿದ್ದರು. ರಾಮನವಮಿಯಂದು ಮೆರವಣಿಗೆ ನಡೆಸುತ್ತಿರುವವರು ದಯವಿಟ್ಟು ಮಾಡಿ ಆದರೆ ಶಾಂತಿಯುತವಾಗಿ ಮಾಡಿ ಎಂದು ನಾನು ವಿನಂತಿಸಲು ಬಯಸುತ್ತೇನೆ. ಶಾಂತಿಯುತವಾಗಿ ಆಚರಿಸಿ ಮತ್ತು ಹಿಂಸಾಚಾರವನ್ನು ಸೃಷ್ಟಿಸಲು ಪ್ರಯತ್ನಿಸಬೇಡಿ. ಪ್ರಚೋದನೆಗೆ ಒಳಗಾಗಬೇಡಿ” ಎಂದು ಬ್ಯಾನರ್ಜಿ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Thu, 30 March 23