ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೆ.8 ರಂದು ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ

| Updated By: Rakesh Nayak Manchi

Updated on: Sep 03, 2023 | 2:38 PM

ಕರ್ನಾಟಕ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 8 ರಂದು ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ವಿದ್ಯುತ್ ಅಭಾವ ಉಂಟಾಗಿ ಪಂಪ್‌ಸೆಟ್​ಗಳಿಗೆ ತೊಂದರೆಯಾಗುತ್ತಿದ್ದು, ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೆ.8 ರಂದು ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೆ.8ರಂದು ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಗುವುದು ಎಂದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
Follow us on

ಬೆಳಗಾವಿ, ಸೆ.3: ಕರ್ನಾಟಕ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 8 ರಂದು ಬೆಳಗಾವಿಯಲ್ಲಿ (Belagavi) ಬಿಜೆಪಿ ರೈತ ಮೋರ್ಚಾದಿಂದ (BJP Kisan Morcha) ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ವಿದ್ಯುತ್ ಅಭಾವ ಉಂಟಾಗಿ ಪಂಪ್‌ಸೆಟ್​ಗಳಿಗೆ ತೊಂದರೆಯಾಗುತ್ತಿದ್ದು, ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ (Eranna Kadadi) ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಈರಣ್ಣ ಕಡಾಡಿ, ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗಿ ರೈತರ ಪಂಪ್‌ಸೆಟ್​ಗಳಿಗೆ ತೊಂದರೆ ಆಗುತ್ತಿದೆ. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ, ಜನ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು. ಸೆ.8 ರಂದು ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದರು.

ಈಗಾಗಲೇ ಪ್ರತಿಭಟನೆಗೆ ಕರೆ ಕೊಟ್ಟಿದ್ದು ಈ ನಿಟ್ಟಿನಲ್ಲಿ ಸಿದ್ಧತೆ ಕೂಡ ಆಗಿವೆ. ನಿಮಗೆ ರಾಜಕೀಯ ಬಿಜೆಪಿ ಹಣಿಯಬೇಕು ಅಂತಾ ಉದ್ದೇಶ ಇರಬೇಕು. ಆದರೆ ಅದನ್ನ ರೈತ ವಿರೋಧಿಯಾಗಿ ಯಾಕೆ ಬಳಸಿಕೊಳ್ಳುತ್ತಿದ್ದೀರಿ? ನೀವು ಯಾಕೆ ರೈತ ವಿರೋಧಿ ಚಟುವಟಿಕೆ ಮುಂದುವರೆಸಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರವನ್ನು ಈರಣ್ಣ ಕಡಾಡಿ ಪ್ರಶ್ನಿಸಿದರು.

ಇದನ್ನೂ ಓದಿ: ಕಾವೇರಿ ನಮ್ಮದು ಅಂತ ಬಿಎಮ್ ಟಿಸಿ ಬಸ್ ನಿಲ್ದಾಣದಲ್ಲಿ ವಿನೂತನ ಮಾದರಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್

ರಾಜ್ಯದ ಹದಿನಾಲ್ಕು ಡ್ಯಾಂಗಳಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇದೆ. ಇರುವ ನೀರನ್ನ ಹೇಗೆ ಉಪಯೋಗಿಸಬೇಕು ಅಂತಾ ಕ್ರಮ ತೆಗೆದುಕೊಂಡಿಲ್ಲ. ರೈತರ ಬಾವಿಗಳಲ್ಲಿನ ನೀರನ್ನ ಸರಿಯಾಗಿ ಉಪಯೋಗ ಮಾಡಲು ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ವಿದ್ಯುತ್ ಪೂರೈಕೆ ವ್ಯತ್ಯಯ ಆಗಿದ್ದನ್ನ ಸರಿ ಪಡಿಸುತ್ತಿಲ್ಲ ಎಂದು ಆರೋಪಿಸಿದರು.

ನೀವು ಅಧಿಕಾರಕ್ಕೆ ಬಂದ ನೂರೇ ದಿನದಲ್ಲಿ ಐವತ್ತು ಜನ ರೈತರ ಆತ್ಮಹತ್ಯೆ ಆಗಿದೆ. ಇದು ಅತ್ಯಂತ ಆತಂಕಕಾರಿಯಾಗಿದೆ. ಐದು ಗ್ಯಾರಂಟಿ ಉಳಿಸಿಕೊಳ್ಳುವ ಉದ್ದೇಶದಿಂದ ರೈತರ ಹಲವು ಯೋಜನೆ ತಡೆ ಹಿಡಿದಿದ್ದೀರಿ. ಕಿಸಾನ್ ಸಮ್ಮಾನ್ ಯೋಜನೆ, ರೈತ ವಿದ್ಯಾ ನಿಧಿ, ಭೂಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ಕ್ಷೀರ ಬ್ಯಾಂಕ್ ಸ್ಥಾಪಿಸಲು ಒಂದು ಸಾವಿರ ಕೋಟಿ ಹಣ ತಡೆ ಹಿಡಿದ್ದೀದಿರಿ ಎಂದು ಆರೋಪಿಸಿದರು.

ಎಪಿಎಂಸಿ ಕಾಯ್ದೆ ರದ್ದು ಪಡಿಸಲು ಮುಂದಾಗಿದ್ದೀರಿ. ರೈತರ ಯೋಜನೆ ನಿಲ್ಲಿಸಿ ರೈತರ ವಿರೋಧಿ ಆಗುತ್ತಿದ್ದೀರಿ. ಬರಗಾಲದ ಕಾರ್ಯಕ್ರಮ ನೀವು ಹಾಕಿಕೊಳ್ಳುತ್ತಿಲ್ಲ. ರೈತರ ವಿಷಯ ತೆಗೆದುಕೊಂಡು ನಾವು ಪ್ರತಿಭಟನೆ ಮಡುತ್ತಿದ್ದೇವೆ. ಬಿಜೆಪಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಪಕ್ಷದ ಮುಖಂಡರು ಭಾಗಿಯಾಗುತ್ತಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ