ಬೆಳಗಾವಿ, ಡಿ.23: ಹಿಜಾಬ್ ವಾಪಾಸ್ ಪಡೆಯುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ(Siddaramaiah)ನವರ ಹೇಳಿಕೆ ವಿಚಾರ ‘ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಒಂದು ಕಾನೂನು ಮಾಡುವುದರಿಂದ ಸಮಾಜದಲ್ಲಿ ದೊಡ್ಡ ಕ್ಷೋಭೆ(ಅಲ್ಲೋಲ-ಕಲ್ಲೋಲ) ಉಂಟಾಗುತ್ತದೆ ಎಂದು ವಿಶ್ವ ಪ್ರಸನ್ನ ತೀರ್ಥ ಪೇಜಾವರ ಶ್ರೀಗಳು(Vishwa Prasanna Theertha Swamij) ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು ‘ಕಾನೂನು ಮಾಡಲಿ ಅದು ಸಮಾಜದಲ್ಲಿ ಒಂದು ಪಂಗಡವನ್ನ ಗುರಿಯಾಗಿರಿಸಿಕೊಂಡು ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕರ್ನಾಟಕದ ಎಲ್ಲರ ಮುಖ್ಯಮಂತ್ರಿ ಅವರು ಆಗಿದ್ದಾರೆ ಹೊರತು ಯಾವುದೇ ಒಂದು ಪಂಗಡದ ಸಿಎಂ ಅಲ್ಲ. ಇಂತಹ ನಡುವಳಿಕೆ ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಮೊನ್ನೆ ಪರೀಕ್ಷೆ ಬರೆಯುವಾಗ ಹಿಂದೂಗಳಾದವರು ಕಾಲುಂಗರ, ತಾಳಿ ತಗೆಯಬೇಕು ಒಂದು ಕಡೆ ಹೀಗೆ, ಮತ್ತೊಂದು ಪಂಗಡದವರಿಗೆ ಮುಸುಕು ದಾರಿಗಳು ಆಗಿ ಹೋಗಬಹುದು ಎನ್ನುತ್ತಾರೆ. ಇದನ್ನ ಯಾರು ಮಾಡಬಾರದು, ಇವರಂತೂ ಖಂಡಿತವಾಗಿ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Hijab Row: ಕರ್ನಾಟಕದಲ್ಲಿ ಹಿಜಾಬ್ ನಿಷೇಧ ವಾಪಸ್, ಸಿದ್ದರಾಮಯ್ಯ ಸ್ಪಷ್ಟನೆ
ಕಲಬುರಗಿ: ಹಿಜಾಬ್ ನಿಷೇಧ ಆದೇಶ ವಾಪಸ್ ಬಗ್ಗೆ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕಿ ಖನೀಜ್ ಫಾತಿಮಾ ‘ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ಗೆ ನಿರ್ಬಂಧ ಹೇರಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂಪಡೆಯುವುದಾಗಿ ಹೇಳಿದ್ದೆವು. ಕೊಟ್ಟ ಮಾತಿನಂತೆ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆದಿದ್ದೇವೆ ಎಂದು ಹೇಳಿದರು. ಇನ್ಮುಂದೆ ಎಲ್ಲಿ ಬೇಕಾದರೂ ಹಿಜಾಬ್ ಹಾಕೊಂಡು ಹೋಗಬಹುದು, ಸಿದ್ದರಾಮಯ್ಯ, ಖರ್ಗೆ, ಸೋನಿಯಾ, ರಾಹುಲ್ಗೆ ಧನ್ಯವಾದ ತಿಳಿಸುವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Sat, 23 December 23