ನನಗೂ, ನೊಣವಿನಕೆರೆಶ್ರೀಗಳಿಗೂ ಭಕ್ತಿಯ ಸಂಬಂಧವಿದೆ: ಡಿಸಿಎಂ ಡಿಕೆ ಶಿವಕುಮಾರ್​

| Updated By: ಗಂಗಾಧರ​ ಬ. ಸಾಬೋಜಿ

Updated on: Oct 18, 2023 | 10:05 PM

ಬಹಳ ವರ್ಷಗಳಿಂದ ನನ್ನ ಹಾಗೂ ಶ್ರೀಗಳ ನಡುವೆ ಒಡನಾಟ ಇದೆ. ನನಗೂ, ನೊಣವಿನಕೆರೆಶ್ರೀಗಳಿಗೂ ಒಂದು ದೊಡ್ಡ ಭಕ್ತಿಯ ಸಂಬಂಧವಿದೆ. ನನಗೆ ಆಹ್ವಾನಿಸಿದ್ದರು, ಕಾರ್ಯಕರ್ತರನ್ನೂ ಭೇಟಿ ಮಾಡಬೇಕೆನಿಸಿತು. ಹೀಗಾಗಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ನನಗೂ, ನೊಣವಿನಕೆರೆಶ್ರೀಗಳಿಗೂ ಭಕ್ತಿಯ ಸಂಬಂಧವಿದೆ: ಡಿಸಿಎಂ ಡಿಕೆ ಶಿವಕುಮಾರ್​
ಡಿಸಿಎಂ ಡಿಕೆ ಶಿವಕುಮಾರ್​
Follow us on

ಬೆಳಗಾವಿ, ಅಕ್ಟೋಬರ್​​ 18: ಬಹಳ ವರ್ಷಗಳಿಂದ ನನ್ನ ಹಾಗೂ ಶ್ರೀಗಳ ನಡುವೆ ಒಡನಾಟ ಇದೆ. ನನಗೂ, ನೊಣವಿನಕೆರೆಶ್ರೀಗಳಿಗೂ ಒಂದು ದೊಡ್ಡ ಭಕ್ತಿಯ ಸಂಬಂಧವಿದೆ. ನನಗೆ ಆಹ್ವಾನಿಸಿದ್ದರು, ಕಾರ್ಯಕರ್ತರನ್ನೂ ಭೇಟಿ ಮಾಡಬೇಕೆನಿಸಿತು. ಹೀಗಾಗಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ (DK Shivakumar) ಹೇಳಿದ್ದಾರೆ. ಜಿಲ್ಲೆಯ ಹುಕ್ಕೇರಿ ಹಿರೇಮಠದಲ್ಲಿ ನವರಾತ್ರಿ ನಿಮಿತ್ತ ಮಠದಲ್ಲಿ ಹಮ್ಮಿಕೊಂಡ ಚಂಡಿಕಾಯಾಗದಲ್ಲಿ ಭಾಗಿ ಆಗಿ ಬಳಿಕ ಮಾತನಾಡಿದ ಅವರು, ಎ.ಬಿ.ಪಾಟೀಲ್, ಶಶಿಕಾಂತ್ ನಾಯಕ್ ಕೆಲವು ಸಮಸ್ಯೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

ವೀರ ಗಂಗಾಧರ ಅಜ್ಜನ ಶಿಷ್ಯರನ್ನು ಭೇಟಿ ಮಾಡುವ ಭಾಗ್ಯ ಸಿಕ್ಕಿದೆ. ರೇಣುಕಶ್ರೀ ಪ್ರಶಸ್ತಿ ಪ್ರದಾನ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೆ ಇದು ಪವಿತ್ರವಾದ ಸೇವೆ, ಅಧಿಕಾರ ಅಂತಾ ಹೇಳುವುದಿಲ್ಲ. ನಾನು ಡಿಸಿಎಂ ಆಗಿರಬಹುದು, ಕೆಪಿಸಿಸಿ ಅಧ್ಯಕ್ಷ ಆಗಿರಬಹುದು. ಆದರೆ ಗುರುವಿನ ಗುಲಾಮನಾಗುವ ತನಕ ಯಾವುದೂ ಸಿಗುವುದಿಲ್ಲ. ಗುರುವಿನ ಗುಲಾಮನಾಗಿ ಇಲ್ಲಿಗೆ ಆಗಮಿಸಿದ್ದೇನೆ ಎಂದರು.

ಅಧಿಕಾರ ಬರುತ್ತೆ, ಹೋಗುತ್ತೆ ಆದರೆ ನಿಮ್ಮ ಆಶೀರ್ವಾದ ಇರಲಿ

ಡಿಕೆ ಒಕ್ಕಲಿಗ ನೊಣವಿನಕೆರೆ ಮಠವನ್ನು ಅನುಸರಿಸುತ್ತಾನೆ ಅಂತಾರೆ. ಈ ಬಗ್ಗೆ ಚರ್ಚೆ, ವ್ಯಾಖ್ಯಾನಗಳು ನಡೆದಿವೆ. ಇದೇ ಸಮಾಜದಲ್ಲಿ ಹುಟ್ಟಿಸು ಅಂತ ಯಾರೂ ಅರ್ಜಿ ಹಾಕಿ ಜನಿಸಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿ ಯಾರೂ ಮಠಕ್ಕೆ ಬರಬೇಡಿ ಅಂದಿಲ್ಲ.

ಇದನ್ನೂ ಓದಿ: ಹುಕ್ಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: ನಿಮ್ಮ ಆಶೀರ್ವಾದದಿಂದ 136 ಸೀಟ್ ಗೆದ್ದಿದ್ದೇವೆ ಎಂದ ಡಿಕೆ ಶಿವಕುಮಾರ್

ಮಾನವೀಯತೆಯೇ ಮಾನವನ ಧರ್ಮ. ಮಾನವೀಯತೆ ಉಳಿಸಿ, ಸಮಾಜಸೇವೆ ಮಾಡಿಕೊಂಡು ಹೋಗೋಣ. ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೇನೆ, ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅಧಿಕಾರ ಬರುತ್ತೆ, ಹೋಗುತ್ತೆ ಆದರೆ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಭಾಷಣ

ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್​ ಮಾತನಾಡಿ, ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್​​ಗೆ ಪ್ರಶಸ್ತಿ ಕೊಟ್ಟಿದ್ದು ಉತ್ತರ ಕರ್ನಾಟಕದಲ್ಲೇ ಹೆಸರಾಗೋಕೆ ಸಾಧ್ಯವಾಯಿತು. ಡಿಕೆ ಶಿವಕುಮಾರ್​ ಸಾಹೇಬ್ರು ಮುಂದಿನ ದಿನಗಳಲ್ಲಿ ಖಂಡಿತವಾಗಿ ಮುಖ್ಯಮಂತ್ರಿ ಆಗಿ ಹೊರಹೊಮ್ಮೇ ಹೊಮ್ಮುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಗತಿ ಪರಿಶೀಲನಾ ಸಭೆ ನಡೆಸದ ಸಚಿವ ಪ್ರಿಯಾಂಕ್ ಖರ್ಗೆ: ಸಂಸದ ಉಮೇಶ್ ಜಾಧವ್ ಆಕ್ರೋಶ

ದಸರಾ ಉತ್ಸವ ಕಾರ್ಯಕ್ರಮದಲ್ಲಿ ನೊಣವಿನಕೆರೆ ಶ್ರೀಗಳಿಗೆ ‘ರೇಣುಕಶ್ರೀ’ ಪ್ರಶಸ್ತಿ ಪ್ರದಾನ ಹಾಗೂ ಚಲನಚಿತ್ರ ಗೀತಸಾಹಿಸಿ ಡಾ.ವಿ.ನಾಗೇಂದ್ರ ಪ್ರಸಾದ್‌ ಮತ್ತು ಡಾ.ಸ.ಜ.ನಾಗಲೋಟಿಮಠ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, MLC ಪ್ರಕಾಶ್ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಿಖಿಲ್ ಕತ್ತಿ, ಹುನಗುಂದ ಶಾಸಕ ವಿಜಯಾನಂದ, ಮಾಜಿ ಸಚಿವ ಎ.ಬಿ.ಪಾಟೀಲ್, ನೊಣವಿನಕೆರೆಶ್ರೀ, ನಿಡಸೋಸಿ ಸ್ವಾಮೀಜಿ ಸೇರಿ ಹಲವರು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.