ಪ್ರಗತಿ ಪರಿಶೀಲನಾ ಸಭೆ ನಡೆಸದ ಸಚಿವ ಪ್ರಿಯಾಂಕ್ ಖರ್ಗೆ: ಸಂಸದ ಉಮೇಶ್ ಜಾಧವ್ ಆಕ್ರೋಶ
ಸಚಿವ ಪ್ರಿಯಾಂಕ್ ಖರ್ಗೆಗೆ ವಿದೇಶಕ್ಕೆ ಹೋಗಿ ಬರಲು ಸಮಯವಿದೆ. ಕಲಬುರಗಿಯಲ್ಲಿ ಒಂದು ಕೆಡಿಪಿ ಮೀಟಿಂಗ್ ಮಾಡಲು ಸಮಯವಿಲ್ವಾ ಎಂದು ಸಂಸದ ಉಮೇಶ್ ಜಾಧವ್ ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕ್ ಖರ್ಗೆ ಇರೋದೆಲ್ಲಾ ಬೆಂಗಳೂರಿನಲ್ಲಿಯೇ. ಅವರು ಹೆಸರಿಗಷ್ಟೇ ಕಲಬುರಗಿಯವರು ಎಂದು ಜಾಧವ್ ಕಿಡಿ ಕಾರಿದ್ದಾರೆ.
ಕಲಬುರಗಿ, ಅಕ್ಟೋಬರ್ 18: ಸಚಿವ ಪ್ರಿಯಾಂಕ್ ಖರ್ಗೆ (Priyank Kharge) 5 ತಿಂಗಳಿನಿಂದ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ ಎಂದು ಸಂಸದ ಉಮೇಶ್ ಜಾಧವ್ (Umesh Jadhav) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಕಲಬುರಗಿಯ ಸಂಸದರು ಮತ್ತು ಸಚಿವರ ಮಧ್ಯೆ ರಾಜಕೀಯ ಜಿದ್ದಾಜಿದ್ದಿ ಹೆಚ್ಚಾಗುವ ಎಲ್ಲ ಲಕ್ಷಣ ಕಾಣಿಸಿದೆ. ಕಲಬುರಗಿಯಲ್ಲಿರುವ ಉಸ್ತುವಾರಿ ಸಚಿವರು ಹೊರಗಿನವರಾಗಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಹೆಸರಿಗೆ ಮಾತ್ರ ಕಲಬುರಗಿಯವರು. ಪ್ರಿಯಾಂಕ್ ಖರ್ಗೆ ಎಲ್ಲಿದ್ದಾರೆ? 5 ತಿಂಗಳಿಂದ ಕೆಡಿಪಿ ಸಭೆ ಮಾಡಿಲ್ಲ ಎಂದು ಉಮೇಶ ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆಗೆ ವಿದೇಶಕ್ಕೆ ಹೋಗಿ ಬರಲು ಸಮಯವಿದೆ. ಕಲಬುರಗಿಯಲ್ಲಿ ಒಂದು ಕೆಡಿಪಿ ಮೀಟಿಂಗ್ ಮಾಡಲು ಸಮಯವಿಲ್ವಾ ಎಂದು ಸಂಸದ ಉಮೇಶ್ ಜಾಧವ್ ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕ್ ಖರ್ಗೆ ಇರೋದೆಲ್ಲಾ ಬೆಂಗಳೂರಿನಲ್ಲಿಯೇ. ಅವರು ಹೆಸರಿಗಷ್ಟೇ ಕಲಬುರಗಿಯವರು ಎಂದು ಜಾಧವ್ ಕಿಡಿ ಕಾರಿದ್ದಾರೆ.
ರಾಜಕೀಯ ಸ್ವರೂಪ ಪಡೆದ ಒತ್ತುವರಿ ತೆರವು ಕಾರ್ಯಾಚರಣೆ
ಈ ಮಧ್ಯೆ, ಕಲಬುರಗಿಯಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕಲಬುರಗಿ ಪಾಲಿಕೆ ಜಾಗದಲ್ಲಿ ನಿರ್ಮಿಸಿದ್ದ 30ಕ್ಕೂ ಹೆಚ್ಚು ಮನೆಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದರು. ಪಾಲಿಕೆ ಜಾಗದಲ್ಲಿ ಕೂಲಿ ಕಾರ್ಮಿಕರು ಮನೆ ನಿರ್ಮಿಸಿಕೊಂಡಿದ್ದರು. ಕಳೆದ ಶುಕ್ರವಾರ ಜೆಸಿಬಿಯಿಂದ ಒತ್ತುವರಿ ತೆರವು ಮಾಡಲಾಗಿತ್ತು.
ಇದನ್ನೂ ಓದಿ: ಕಲಬುರಗಿ: ವ್ಯಾಪಾರದಲ್ಲಿ ಹೆಚ್ಚಿನ ಲಾಭದ ಆಸೆ ಆಮಿಷ, ನಿವೃತ್ತ ನೌಕರನಿಗೆ ಬರೋಬ್ಬರಿ 34 ಲಕ್ಷ ವಂಚನೆ
ಕೂಲಿ ಕಾರ್ಮಿಕರ ಮನೆಗಳನ್ನು ತೆರವುಗೊಳಿಸಿದ್ದಕ್ಕೆ ಸಂಸದ ಉಮೇಶ್ ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒತ್ತುವರಿ ತೆರವು ಮಾಡಿರುವ ಸ್ಥಳಕ್ಕೆ ಉಮೇಶ್ ಜಾಧವ್ ಭೇಟಿ ನೀಡಿದ್ದು, ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವರೆಗೆ ಜಾಗ ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
ಉಮೇಶ್ ಜಾಧವ್ ಅಹೋರಾತ್ರಿ ಧರಣಿ
ಅ.14ರಂದು ಪಾಲಿಕೆಯಿಂದ 40 ಮನೆಗಳ ತೆರವು ಖಂಡಿಸಿ ಕಲಬುರಗಿ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಮಹಾನಗರ ಪಾಲಿಕೆ ಜಾಗದಲ್ಲಿ ನಿರ್ಮಾಣವಾಗಿದ್ದ 40 ಮನೆಗಳ ತೆರವು ಮಾಡಲಾಗಿದ್ದು, ನಿರಾಶ್ರಿತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಾಧವ್ ಒತ್ತಾಯಿಸಿದ್ದಾರೆ.
ಇತ್ತೀಚೆಗಷ್ಟೇ ಕಲಬುರಗಿಯ ಅಫಜಲಪುರ ತಾಲೂಕಿನ ಜೇವರ್ಗಿ ಗ್ರಾಮ ವ್ಯಾಪ್ತಿಯಲ್ಲಿ ವಕ್ಫ್ ಮಂಡಳಿಗೆ ಸೇರಿದ್ದ ಸುಮಾರು 6 ಕೋಟಿ ರೂ. ಮೌಲ್ಯದ ಜಮೀನು ಒತ್ತುವರಿಯನ್ನೂ ಸಹ ತೆರವುಗೊಳಿಸಲಾಗಿತ್ತು. ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Wed, 18 October 23