ED Raids: ಕಲಬುರಗಿಯಲ್ಲಿ ಕಾಂಗ್ರೆಸ್ ಮುಖಂಡನ ಮನೆ ಮೇಲೆ ಇಡಿ ದಾಳಿ
ಕರ್ನಾಟಕದಲ್ಲಿ ಮತ್ತೆ ಇಡಿ ದಾಳಿ ಮುಂದುವರೆದಿದೆ, ಮೊನ್ನೇ ಅಷ್ಟೇ ಬೆಂಗಳೂರಿನ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿಯಾಗಿತ್ತು. ಇಂದು(ಅಕ್ಟೋಬರ್ 19) ಕಲಬುರಗಿ ಕಾಂಗ್ರೆಸ್ ಮುಖಂಡನ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕಲಬುರಗಿ, (ಅಕ್ಟೋಬರ್ 19): ಕರ್ನಾಟಕದಲ್ಲಿ ಮತ್ತೆ ಇಡಿ ದಾಳಿ (ED raids) ಮುಂದುವರೆದಿದೆ, ಮೊನ್ನೇ ಅಷ್ಟೇ ಬೆಂಗಳೂರಿನ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿಯಾಗಿತ್ತು. ಇಂದು(ಅಕ್ಟೋಬರ್ 19) ಕಲಬುರಗಿ(Kalaburagi) ಕಾಂಗ್ರೆಸ್ ಮುಖಂಡನ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಿಂಚೋಳಿ ಸಕ್ಕರೆ ಕಾರ್ಖಾನೆ ಅಕ್ರಮ ಆರೋಪ ಹಾಗೂ ರೈತರಿಂದ ಜಮೀನು ಖರೀದಿಸಿ ಹಣ ನೀಡದೆ ವಂಚಿಸಿರುವ ಆರೋಪದ ಮೇಲೆ ದಾಳಿಯಾಗಿದ್ದು, ಚಿಂಚೋಳಿ ಪಟ್ಟಣದ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.