Belagavi News: ಮೊಬೈಲ್​ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು, ಅಯ್ಯೋ ವಿಧಿಯೇ!

| Updated By: ಆಯೇಷಾ ಬಾನು

Updated on: Jul 27, 2023 | 1:12 PM

ಮೊಬೈಲ್ ಚಾರ್ಜಿಂಗ್ ಹಾಕಲು ಹೋಗಿ ವಿದ್ಯುತ್ ಪ್ರವಹಿಸಿ ವ್ಯಕ್ತಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶ್ರೀಪೇವಾಡಿ ಗ್ರಾಮದಲ್ಲಿ ನಡೆದಿದೆ.

Belagavi News: ಮೊಬೈಲ್​ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು, ಅಯ್ಯೋ ವಿಧಿಯೇ!
ಸಾಂದರ್ಭಿಕ ಚಿತ್ರ
Follow us on

ಚಿಕ್ಕೋಡಿ, ಜುಲೈ 27: ಮೊಬೈಲ್​ಗೆ ಚಾರ್ಜ್(Mobile Charge) ಹಾಕುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿ ಮೃತಪಟ್ಟ(Death) ಘಟನೆ ಬೆಳಗಾವಿ(Belagavi) ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶ್ರೀಪೇವಾಡಿ ಗ್ರಾಮದಲ್ಲಿ ನಡೆದಿದೆ. ಆಕಾಶ ಶಿವಸಾದ ಸಂಕಪಾಳ(27) ಮೃತ ದುರ್ದೈವಿ. ಇಂದು ಮುಂಜಾನೆ ಮನೆಯಲ್ಲಿ ಮೊಬೈಲ್ ಚಾರ್ಜಿಂಗ್ ಹಾಕಲು ಹೋದಾಗ ಅವಘಡ ಸಂಭವಿಸಿದೆ. ನಿಪ್ಪಾಣಿ ಬಸವೇಶ್ವರ ಚೌಕ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವೇಶ್ವರ‌ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಶದಿಂದ ಬಾಲಕ ಸಾವು

ರಾಮನಗರ ಜಿಲ್ಲೆಯಲ್ಲಿ 16 ವರ್ಷದ ಬಾಲಕನೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾನೆ. ಮಂಚೇಗೌಡನಪಾಳ್ಯ ಗ್ರಾಮದ 10ನೇ ತರಗತಿ ಓದುತ್ತಿರುವ ಸಿದ್ದರಾಜು (16) ಮೃತ ದುರ್ದೈವಿ. ವಿದ್ಯುತ್ ಸ್ಪರ್ಶದಿಂದ ಹಸು ಸಾವನ್ನಪ್ಪಿದ್ದನ್ನು ನೋಡಲು ಹೋದಾಗ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ತಾಯಿಯ ಜತೆ ಜಗಳವಾಡಿ ಹೋಟೆಲ್​ನ ಸೋಫಾಗೆ ಬೆಂಕಿ ಹಚ್ಚಿದ ಬಾಲಕಿಯ ಬಂಧನ

ಯಾರೋ ಅಪರಿಚಿತರು ಹಸುವನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದರು. ಇದರಿಂದ ಹಾಸು ಮೃತಪಟ್ಟಿತ್ತು. ಇದನ್ನು ನೋಡಲು ಬಂದ ಬಾಲಕ ಮೃತ ಹಸುವಿನ ಸಂಪರ್ಗಕ್ಕೆ ಬಂದು ಕ್ಷಣಾರ್ಧದಲ್ಲಿ ಮೃತಪಟ್ಟಿದ್ದಾನೆ. ಇನ್ನು ಸಿದ್ದರಾಜುನನ್ನು ರಕ್ಷಿಸಲು ಯತ್ನಿಸಿ ಸಹೋದರ ಮಾಳಪ್ಪ ಗಾಯಗೊಂಡಿದ್ದಾರೆ.

ನಂತರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳು ಮತ್ತು ಬಿಡದಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದರು. ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು, ಮೃತರ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:00 pm, Thu, 27 July 23