ಬೆಳಗಾವಿ: ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಸು, ಫೇಲಾಗೋದು ಸಹಜ. ಯಾರು ಚೆನ್ನಾಗಿ ಓದಿರ್ತಾರೊ ಅವರು ಒಳ್ಳೆ ಅಂಕ ಪಡೆದು ಉತ್ತೀರ್ಣರಾಗ್ತಾರೆ. ಆದ್ರೆ ಇಲ್ಲೊಬ್ಬ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿವಿಗೆ ನುಗ್ಗಿ ಅಂಕಪಟ್ಟಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಪದವಿ ಓದುತ್ತಿದ್ದ ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ವಿದ್ಯಾರ್ಥಿ ಬಸಪ್ಪ ಹೊನವಾಡ ಹಲವು ಸೆಮಿಸ್ಟರ್ನಲ್ಲಿ ಫೇಲ್ ಆಗಿದ್ದ. ಹೀಗಾಗಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಗೆ ಆಗಮಿಸಿದ್ದ. ವಿವಿಯ ಹಾಸ್ಟೆಲ್ನಲ್ಲಿ ಉಳಿದುಕೊಂಡು ಅಂಕಪಟ್ಟಿ, ಸ್ಕ್ಯಾನರ್ ಕಳ್ಳತನಕ್ಕೆ ಯತ್ನಿಸಿದ್ದಾನೆ. ಬಳಿಕ ಮೌಲ್ಯಮಾಪನ ವಿಭಾಗದ ಕಿಟಕಿ ಗಾಜು ಒಡೆದು ಒಳನುಗ್ಗಿ ಅಂಕಪಟ್ಟಿ ಕಳ್ಳತನಕ್ಕೆ ಯತ್ನಿಸಿದ್ದಾನೆ.
ವಿವಿಯಲ್ಲಿ ಸುಮಾರು 300 ಪ್ರಮಾಣ ಪತ್ರ ಮತ್ತು 2 ಸ್ಕ್ಯಾನರ್ ಕಳ್ಳತನವಾಗಿದೆ. ಕಳ್ಳತನ ಮಾಡಿ ಪರಾರಿಯಾಗುವಾಗ ಸೆಕ್ಯೂರಿಟಿ ಗಾರ್ಡ್ ಕೈಯಲ್ಲಿ ಖದೀಮ ಸಿಕ್ಕಿಬಿದ್ದಿದ್ದಾನೆ. ಆರೋಪಿ ಬಸಪ್ಪ ಹೊನವಾಡರನ್ನ ಹಿಡಿದು ವಿವಿ ಸಿಬ್ಬಂದಿ ಕಾಕತಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Published On - 12:55 pm, Mon, 13 January 20