ಮೀರಜ್-ಬೆಳಗಾವಿ ವಿಶೇಷ ರೈಲುಗಳ ಸಮಯದಲ್ಲಿ ಬದಲಾವಣೆ: ಇಲ್ಲಿದೆ ಮಾಹಿತಿ

ಮೀರಜ್‌ನಿಂದ ಬೆಳಗಾವಿಗೆ ಆಗಮಿಸುವ ವಿಶೇಷ ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 07302 ಮತ್ತು 07304 ರ ಆಗಮನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಲ್ಲಂಪಲ್ಲಿಯಲ್ಲಿ ಕೆಲವು ರೈಲುಗಳ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ಮೀರಜ್-ಬೆಳಗಾವಿ ವಿಶೇಷ ರೈಲುಗಳ ಸಮಯದಲ್ಲಿ ಬದಲಾವಣೆ: ಇಲ್ಲಿದೆ ಮಾಹಿತಿ
ಮೀರಜ್-ಬೆಳಗಾವಿ ವಿಶೇಷ ರೈಲು

Updated on: Jun 20, 2025 | 10:41 AM

ಬೆಳಗಾವಿ, ಜೂನ್​ 20: ಮೀರಜ್​ನಿಂದ ಬೆಳಗಾವಿಗೆ (Miraj to Belagavi) ಆಗಮಿಸುವ ರೈಲು ಸಮಯವನ್ನು ಪರಿಷ್ಕರಿಸಲಾಗಿದ್ದು, ಜೂನ್​ 19ರಿಂದ ಜಾರಿಗೆ ಬಂದಿದೆ. ಈ ಬಗ್ಗೆ ನೈಋತ್ಯ ರೈಲ್ವೆ (South Western Railway) ಮಾಹಿತಿ ನೀಡಿದೆ. ರೈಲು ಸಂಖ್ಯೆ 07302 ಮತ್ತು 07304 ಮೀರಜ್​ ಟು ಬೆಳಗಾವಿ ವಿಶೇಷ ರೈಲುಗಳ ಬೆಳಗಾವಿ ನಿಲ್ದಾಣಕ್ಕೆ ಆಗಮನದ ಸಮಯವನ್ನು ಪರಿಷ್ಕರಿಸಿದೆ.

ಬೆಳಗಾವಿಗೆ 12:50ಕ್ಕೆ ಬರುತ್ತಿದ್ದ ಕಾಯ್ದಿರಿಸದ್ದ ಮೀರಜ್ ಟು ಬೆಳಗಾವಿ ವಿಶೇಷ ರೈಲು (ರೈಲು ಸಂಖ್ಯೆ 07302) ಇನ್ಮುಂದೆ ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದೆ. ಅದೇ ರೀತಿಯಾಗಿ ರಾತ್ರಿ 08:35ಕ್ಕೆ ಆಗಮಿಸುತ್ತಿದ್ದ ಮೀರಜ್ ಟು ಬೆಳಗಾವಿ (ರೈಲು ಸಂಖ್ಯೆ 073040) ವಿಶೇಷ ರೈಲು ರಾತ್ರಿ 21 ಗಂಟೆಗೆ ಆಗಮಿಸಲಿದೆ. ಈ ಎರಡೂ ರೈಲುಗಳು ಮೀರಜ್ ಮತ್ತು ಸಾಂಬ್ರೇ ನಿಲ್ದಾಣಗಳ ನಡುವಿನ ಸಮಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದನ್ನೂ ಓದಿ
ನರೇಗಾ ಬಿಲ್ ಪಡೆಯಲು ಸೀರೆ ಉಟ್ಟ ಗಂಡು: ಹಣಕ್ಕಾಗಿ ಅವನು ಅವಳಾದ ಕತೆ!
ಮೈಶುಗರ್ ಶಾಲೆ ಮೇಲೆ ಖಾಸಗಿ ಕಣ್ಣು: ಆಸ್ತಿ ಕಬಳಿಸಲು ಹುನ್ನಾರ ಆರೋಪ
ಡ್ರಂಕ್ ಆ್ಯಂಡ್ ಡ್ರೈವ್, ಅತಿವೇಗದ ಚಾಲನೆಯಿಂದ ಅಪಘಾತ: ಇಬ್ಬರ ಸಾವು
ಬೆಂಗಳೂರಿನ 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್​ಗಳ ಮೇಲೆ ಪೊಲೀಸರಿಂದ ದಾಳಿ

ಬೆಲ್ಲಂಪಲ್ಲಿಯಲ್ಲಿ ರೈಲುಗಳ ನಿಲುಗಡೆ ರದ್ದು

ಸಿಕಂದರಾಬಾದ್ ವಿಭಾಗದ ಬಲ್ಲರ್ಷಾ ಕಾಜಿಪೇಟೆ ವಿಭಾಗದಲ್ಲಿ ರೆಚಿನ ರೋಡ್ ಮತ್ತು ಬೆಲ್ಲಂಪಲ್ಲಿ ನಿಲ್ದಾಣಗಳ ನಡುವಿನ ಹೊಸ ಮೂರನೇ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ, ಬೆಲ್ಲಂಪಲ್ಲಿ ಯಾರ್ಡ್​ನಲ್ಲಿ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿವೆ. ಈ ಕಾರಣದಿಂದಾಗಿ ಎರಡು ರೈಲುಗಳಿಗೆ ಬೆಲ್ಲಂಪಲ್ಲಿಯಲ್ಲಿ ನಿಲುಗಡೆ ರದ್ದುಪಡಿಸಿರುವುದಾಗಿ ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.

ನೈಋತ್ಯ ರೈಲ್ವೆ ಟ್ವೀಟ್​

ಜೂನ್ 21 ರಂದು ಹುಬ್ಬಳ್ಳಿಯಿಂದ ಪ್ರಾರಂಭವಾಗುವ ಎಸ್‌ಎಸ್‌ಎಸ್ ಹುಬ್ಬಳ್ಳಿ ಟು ಬನಾರಸ್ (ರೈಲು ಸಂಖ್ಯೆ 07323) ವೀಕ್ಲಿ ಎಕ್ಸಪ್ರೆಸ್​ ವಿಶೇಪ ರೈಲು ಬೆಲ್ಲಂಪಲ್ಲಿಯಲ್ಲಿ ನಿಲ್ಲುವುದಿಲ್ಲ. ಪರ್ಯಾಯವಾಗಿ ಸಿರ್​​ಪುರ್​​ ಕಾಗಜ್​ ನಗರದಲ್ಲಿ ನಿಲುಗಡೆಯನ್ನು ಒದಗಿಸಲಾಗಿದೆ.

ಇದನ್ನೂ ಓದಿ: ಮಂಡ್ಯ ಮೈಶುಗರ್ ಶಾಲೆ ಮೇಲೆ ಖಾಸಗಿ ಕಣ್ಣು: ಕೋಟ್ಯಂತರ ರೂ ಆಸ್ತಿ ಕಬಳಿಸಲು ಹುನ್ನಾರ ಆರೋಪ

ಜೂನ್​21 ರಂದು ಮೈಸೂರಿನಿಂದ ಪ್ರಾರಂಭವಾಗುವ ಮೈಸೂರು ಟು ಜೈಪುರ ದ್ವಿಸಾಪ್ತಾಹಿಕ ಎಕ್ಸಪ್ರೆಸ್​ ರೈಲು (ರೈಲು ಸಂಖ್ಯೆ 12975) ಬೆಲ್ಲಂಪಲ್ಲಿಯಲ್ಲಿ ನಿಗದಿತ ನಿಲುಗಡೆಯನ್ನು ಸಹ ಇರುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us