ಆಟೋದಲ್ಲೇ ನೇಣುಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ, ಅಚ್ಚರಿ ಎನ್ನಿಸಿದರೂ ಸತ್ಯ

ಸಾಮಾನ್ಯವಾಗಿ ಫ್ಯಾನ್, ಮರ, ಕಿಟಕಿ, ಮನೆಯ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನ ನೋಡಿದ್ದೇವೇ. ಕೇಳಿದ್ದೇವೆ ಕೂಡ. ಆದ್ರೆ, ಇಲ್ಲೊಂದು ಜೋಡಿ ಮೂರು ಗಾಲಿ ಆಟೋದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಅರೇ ಇದೇನಿದು ಸಣ್ಣ ಆಟೋದಲ್ಲಿ ಅದ್ಹೇಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ ಎಂದು ಅಚ್ಚರಿ ಎನ್ನಿಸಿದರೂ ಸತ್ಯ.

ಆಟೋದಲ್ಲೇ ನೇಣುಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ, ಅಚ್ಚರಿ ಎನ್ನಿಸಿದರೂ ಸತ್ಯ
ರಾಘವೇಂದ್ರ ಜಾಧವ್(28), ರಂಜೀತಾ ಚೋಬರಿ(26)
Edited By:

Updated on: Jul 01, 2025 | 2:58 PM

ಬೆಳಗಾವಿ, (ಜುಲೈ 01): ಪ್ರೇಮಿಗಳು (Lovers) ಆಟೋದಲ್ಲೇ (Auto Rickshaw ) ನೇಣುಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ನಡೆದಿದೆ. ರಾಘವೇಂದ್ರ ಜಾಧವ್(28), ರಂಜೀತಾ ಚೋಬರಿ(26) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಗಳಾದ ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, 15 ದಿನದ ಹಿಂದೆಯಷ್ಟೇ ಮೃತ ರಂಜೀತಾಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಿತಾರ್ಥವಾಗಿತ್ತು. ಇದರಿಂದ ರಾಘವೇಂದ್ರ ಹಾಗೂ ರಂಜೀತಾ ಇಂದು (ಜುಲೈ 01) ಆಟೋದಲ್ಲಿ ಒಟ್ಟಿಗೆ ನೇಣಿಗೆ ಶರಣಾಗಿದ್ದಾರೆ.

ಮುನವಳ್ಳಿ ಪಟ್ಟಣದ ರಾಘವೇಂದ್ರ, ರಂಜೀತಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಮದುವೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದರು. ಆದರೆ, ಮನೆಯಲ್ಲಿ ರಂಜೀತಾ 15 ದಿನಗಳ ಹಿಂದೆ ಅಷ್ಟೇ ಬೇರೊಬ್ಬ ಹುಡುಗನ ಜೊತೆ ಮದುವೆ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ. ಇದರಿಂದ ಮನನೊಂದ ರಂಜೀತ, ಈ ವಿಚಾರವನ್ನು ಆಟೋ ಓಡಿಸಿಕೊಂಡಿದ್ದ ಪ್ರಿಯಕರ ರಾಘವೇಂದ್ರಗೆ ತಿಳಿಸಿದ್ದಾಳೆ.

ಇದನ್ನೂ ಓದಿ: ಅಣ್ಣನ ಕೊಂದು ನಾಟಕವಾಡಿದ್ದ ತಮ್ಮ: ಮಾಲೀಕನ ಕೊಲೆ ಸುಳಿವು ಕೊಟ್ಟ ನಾಯಿ, ಕುರಿಗಳು

ಇದರಿಂದ ಮನನೊಂದು ಇಬ್ಬರು ಒಟ್ಟಿಗೆ ಸಾಯಲು ತೀರ್ಮಾನಿಸಿ, ಇಂದು ಬೆಳಗ್ಗೆ ಇಬ್ಬರೂ ಆಟೋದಲ್ಲಿ ಚಿಕ್ಕನಂದಿ ಗ್ರಾಮದ ಹೊರ ವಲಯದ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಬಳಿಕ ಪ್ರಿಯಕರ ಓಡಿಸುತ್ತಿದ್ದ ಆಟೋದಲ್ಲೇ ಇಬ್ಬರು ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಆಟೋದ ಹಿಂದಿನ ಸೀಟಿನ ಮೇಲಿನ ಕಬ್ಬಿಣದ ರಾಡ್​ ಗೆ ಅಗ್ಗ ಕಟ್ಟಿ ನೇಣಿಗೆ ಶರಣಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Tue, 1 July 25