ವಿಧಾನಸಭೆಯಲ್ಲಿ 3574.76 ಕೋಟಿ ರೂ. ಗಾತ್ರದ ಪೂರಕ ಅಂದಾಜು ಮಂಡನೆ

ಆರೋಗ್ಯ ಕ್ಷೇತ್ರದಲ್ಲಿನ ಬಾಕಿ ವೇತನ, ಬಿಲ್​ಗೆ ಅನುದಾನ, ಅಬಕಾರಿ ಇಲಾಖೆಯ ಉಪ ನಿರೀಕ್ಷಕರಿಗೆ 316 ಬೈಕ್‌, 316 ಬೈಕ್‌ ಖರೀದಿಗಾಗಿ 2 ಕೋಟಿ 41 ಲಕ್ಷ ರೂಪಾಯಿ, ವಿಧಾನಪರಿಷತ್‌ ಚುನಾವಣೆಗಾಗಿ 50 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

ವಿಧಾನಸಭೆಯಲ್ಲಿ 3574.76 ಕೋಟಿ ರೂ. ಗಾತ್ರದ ಪೂರಕ ಅಂದಾಜು ಮಂಡನೆ
ಸಾಂದರ್ಭಿಕ ಚಿತ್ರ
Edited By:

Updated on: Dec 17, 2021 | 9:39 PM

ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಪೂರಕ ಅಂದಾಜು ಮಂಡನೆ ಮಾಡಲಾಗಿದೆ. 3574.76 ಕೋಟಿ ರೂಪಾಯಿ ಗಾತ್ರದ ಪೂರಕ ಅಂದಾಜು ಮಂಡಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿನ ಬಾಕಿ ವೇತನ, ಬಿಲ್​ಗೆ ಅನುದಾನ, ಅಬಕಾರಿ ಇಲಾಖೆಯ ಉಪ ನಿರೀಕ್ಷಕರಿಗೆ 316 ಬೈಕ್‌, 316 ಬೈಕ್‌ ಖರೀದಿಗಾಗಿ 2 ಕೋಟಿ 41 ಲಕ್ಷ ರೂಪಾಯಿ, ವಿಧಾನಪರಿಷತ್‌ ಚುನಾವಣೆಗಾಗಿ 50 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

ಮಹದಾಯಿ ಕ್ಲೇಮ್‌ ಕಮಿಷನ್‌ ಕಚೇರಿಗೆ 33 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಕ್ಲೇಮ್‌ ಕಮಿಷನ್‌ ಕಚೇರಿಗೆ 50 ಲಕ್ಷ ರೂಪಾಯಿ, ಕಾರಾಗೃಹಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 5.55 ಕೋಟಿ ರೂಪಾಯಿ, ವಕ್ಪ್‌ ಆಸ್ತಿಗಳ ವಿಶೇಷ ಸರ್ವೆ ಮಾಡಲು 50 ಲಕ್ಷ ರೂಪಾಯಿ, ಅಮೃತ ಯೋಜನೆಗಳಿಗೆ ಅನುದಾನ ನೀಡಲು 75 ಕೋಟಿ ರೂಪಾಯಿ, ವಿಜಯನಗರ ಜಿಲ್ಲೆಯ ಜಿಲ್ಲಾ ಕಚೇರಿಗಳಿಗೆ 3.73 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ನಿಯೋಗದ ಪ್ರವಾಸ, ದಾವೋಸ್‌ ಪ್ರವಾಸದ ವೆಚ್ಚದ ಮೊತ್ತ 4 ಕೋಟಿ ರೂಪಾಯಿ, ಆರೋಗ್ಯ ಇಲಾಖೆಯ ವಿವಿಧ ವೆಚ್ಚಗಳಿಗಾಗಿ 217 ಕೋಟಿ ರೂಪಾಯಿ, ಮಿನಿ ಒಲಿಂಪಿಕ್‌ ಕ್ರೀಡಾಕೂಟ ನಡೆಸಲು 2.5 ಕೋಟಿ ರೂಪಾಯಿ, ಜಲಸಂಪನ್ಮೂಲ ಇಲಾಖೆಯ ಪಶ್ಚಿಮ ವಾಹಿನಿ ಯೋಜನೆ ಬಿಲ್‌ ಪಾವತಿಗೆ 200 ಕೋಟಿ ರೂಪಾಯಿ, ಕೊವಿಡ್‌ ವೇಳೆ ವಿದ್ಯುತ್‌ ಬಿಲ್‌ ಮನ್ನಾ ಮಾಡಿದ್ದಕ್ಕೆ 68 ಕೋಟಿ ರೂಪಾಯಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 100 ಕೋಟಿ ರೂಪಾಯಿ, ಸಭಾಪತಿ ಹೊರಟ್ಟಿ ಪ್ರಯಾಣ ವೆಚ್ಚಕ್ಕೆ ಹೆಚ್ಚುವರಿಯಾಗಿ 20 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಎಸ್​ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ; ಬೆಳಗಾವಿ ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದ ಧರಣಿ ನಿರತರು

ಇದನ್ನೂ ಓದಿ: ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆ ಬಗ್ಗೆಯೂ ಚರ್ಚೆ? ಮತಾಂತರ ನಿಷೇಧ ವಿಧೇಯಕದಲ್ಲಿ ಪ್ರಸ್ತಾಪಿತ ಅಂಶಗಳು ಏನು?

Web contact

TV9 Kannada

Read More
Follow Us