ಕೊವಿಡ್-19 ಹಣ ದುರ್ಬಳಕೆ ಆರೋಪದಡಿ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರನ್ನು ಸಸ್ಪೆಂಡ್ ಮಾಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಕೊವಿಡ್ ನಿರ್ವಹಣೆ ಸಂದರ್ಭದಲ್ಲಿ ಟಾಸ್ಕ್ಫೋರ್ಸ್ ಅನುಮೋದನೆ ಪಡೆಯದೆ ಹಣ ಬಳಸಿರುವ ಆರೋಪವನ್ನು ಅಮಾನತುಗೊಂಡಿರುವ ಅಧಿಕಾರಿ ಎದುರಿಸುತ್ತಿದ್ದರು.
ಬೆಳಗಾವಿ ಜಿಲ್ಲೆ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಅವರು ಚಂದ್ರಕಾಂತ ಭಜಂತ್ರಿ ಲಕ್ಷಾಂತರ ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದರು.
ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಚಿಕ್ಕೋಡಿ ಎಸಿ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಭಜಂತ್ರಿ ಅವರ ಮೇಲಿರುವ ಆರೋಪಗಳನ್ನು ತನಿಖೆ ನಡೆಸುವಂತೆ ಆದೇಶಿಸಿದ್ದರು.