ಓವರ್‌ಟೇಕ್ ವೇಳೆ ಲಾರಿಗೆ ಡಿಕ್ಕಿ: ಬೈಕ್ನಲ್ಲಿದ್ದ ಅಕ್ಕ-ತಮ್ಮ ಸ್ಥಳದಲ್ಲಿಯೇ ದುರ್ಮರಣ
ಬೆಳಗಾವಿ: ಬೆಳಗಾವಿ ತಾಲೂಕಿನ ದೇಸೂರು ಬಳಿ ಓವರ್‌ಟೇಕ್ ಮಾಡಲು ಹೋಗಿ ಲಾರಿಗೆ ಬೈಕ್ ಡಿಕ್ಕಿಯಾಗಿ ಸಂಭವಿಸಿದ ಅವಘಡದಲ್ಲಿ ಅಕ್ಕ-ತಮ್ಮ ಸ್ಥಳದಲ್ಲಿಯೇ ದುರ್ಮರಣ ಹೊಂದಿದ ದಾರುಣ ಘಟನೆ ನಡೆದಿದೆ. ರೇಣುಕಾ ತೇಗೂರು(25) ಮತ್ತು ಕಲ್ಮೇಶ್ ಕೊಳವಿ (19) ಸಾವನ್ನಪ್ಪಿದ್ದಾರೆ. ಲಾರಿ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಅಕ್ಕ-ತಮ್ಮ ಸಾವಿಗೀಡಾಗಿದ್ದಾರೆ. ಬೈಕ್ನಲ್ಲಿ ದೇಸೂರ್‌ನಿಂದ ಕಮಲ್ ನಗರದತ್ತ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ. ಬೆಳಗಾವಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.
ಬೆಳಗಾವಿ: ಬೆಳಗಾವಿ ತಾಲೂಕಿನ ದೇಸೂರು ಬಳಿ ಓವರ್‌ಟೇಕ್ ಮಾಡಲು ಹೋಗಿ ಲಾರಿಗೆ ಬೈಕ್ ಡಿಕ್ಕಿಯಾಗಿ ಸಂಭವಿಸಿದ ಅವಘಡದಲ್ಲಿ ಅಕ್ಕ-ತಮ್ಮ ಸ್ಥಳದಲ್ಲಿಯೇ ದುರ್ಮರಣ ಹೊಂದಿದ ದಾರುಣ ಘಟನೆ ನಡೆದಿದೆ. ರೇಣುಕಾ ತೇಗೂರು(25) ಮತ್ತು ಕಲ್ಮೇಶ್ ಕೊಳವಿ (19) ಸಾವನ್ನಪ್ಪಿದ್ದಾರೆ.
ಲಾರಿ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಅಕ್ಕ-ತಮ್ಮ ಸಾವಿಗೀಡಾಗಿದ್ದಾರೆ. ಬೈಕ್ನಲ್ಲಿ ದೇಸೂರ್‌ನಿಂದ ಕಮಲ್ ನಗರದತ್ತ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ. ಬೆಳಗಾವಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.