AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ಮುಕ್ಕಾಲು ಪಾಲು ಶಾಸಕ ಮಹಾಶಯರು ಕ್ರಿಮಿನಲ್ ಹಿನ್ನೆಲೆಯುಳ್ಳವರು!

ಬಿಹಾರ: ಬಿಹಾರದ ವಿಧಾನಸಭೆ ಇನ್ಮುಂದೆ ಕ್ರಿಮಿನಲ್ ಹಿನ್ನೆಲೆಯವರಿಂದ ತುಂಬಲಿದೆ. ಹೌದು.. ಇದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯವಿದು. ಇತ್ತೀಚೆಗೆ ನಡೆದ ಬಿಹಾರ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಶೇ. 70 ಎಂಎಲ್ಎಗಳ ಮೇಲೆ ಕ್ರಿಮಿನಲ್ ಆರೋಪಗಳಿವೆ. ಹಿಂದಿನ ಚುನಾವಣೆಗಿಂತ ಕ್ರಿಮಿನಲ್ ಹಿನ್ನೆಲೆಯಿರುವ ಎಂಎಲ್ಎಗಳ ಸಂಖ್ಯೆ ಈ ಚುನಾವಣೆಯಲ್ಲಿ 10 ಪರ್ಸೆಂಟ್ ಹೆಚ್ಚಾಗಿದೆ! ಮಹಿಳೆಯರ ಮೇಲಿನ ದೌರ್ಜನ್ಯದ ಕೇಸ್​ಗಳು ಇವೆ.. ಸರ್ಕಾರೇತರ ಸಂಸ್ಥೆ ADR ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಆಯ್ಕೆಯಾದ 168 ಶಾಸಕರ ಮೇಲೆ ಅಪರಾಧದ ಪ್ರಕರಣಗಳಿವೆ. ಅದರಲ್ಲಿ […]

ಬಿಹಾರ: ಮುಕ್ಕಾಲು ಪಾಲು ಶಾಸಕ ಮಹಾಶಯರು ಕ್ರಿಮಿನಲ್ ಹಿನ್ನೆಲೆಯುಳ್ಳವರು!
ಪೃಥ್ವಿಶಂಕರ
|

Updated on:Nov 13, 2020 | 4:58 PM

Share

ಬಿಹಾರ: ಬಿಹಾರದ ವಿಧಾನಸಭೆ ಇನ್ಮುಂದೆ ಕ್ರಿಮಿನಲ್ ಹಿನ್ನೆಲೆಯವರಿಂದ ತುಂಬಲಿದೆ. ಹೌದು.. ಇದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯವಿದು. ಇತ್ತೀಚೆಗೆ ನಡೆದ ಬಿಹಾರ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಶೇ. 70 ಎಂಎಲ್ಎಗಳ ಮೇಲೆ ಕ್ರಿಮಿನಲ್ ಆರೋಪಗಳಿವೆ. ಹಿಂದಿನ ಚುನಾವಣೆಗಿಂತ ಕ್ರಿಮಿನಲ್ ಹಿನ್ನೆಲೆಯಿರುವ ಎಂಎಲ್ಎಗಳ ಸಂಖ್ಯೆ ಈ ಚುನಾವಣೆಯಲ್ಲಿ 10 ಪರ್ಸೆಂಟ್ ಹೆಚ್ಚಾಗಿದೆ!

ಮಹಿಳೆಯರ ಮೇಲಿನ ದೌರ್ಜನ್ಯದ ಕೇಸ್​ಗಳು ಇವೆ.. ಸರ್ಕಾರೇತರ ಸಂಸ್ಥೆ ADR ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಆಯ್ಕೆಯಾದ 168 ಶಾಸಕರ ಮೇಲೆ ಅಪರಾಧದ ಪ್ರಕರಣಗಳಿವೆ. ಅದರಲ್ಲಿ 123 ಎಂಎಲ್ಎಗಳ ಮೇಲೆ ಗಂಭೀರ ಕ್ರಿಮಿನಲ್ ಆರೋಪಗಳಿವೆ. ಇನ್ನು 19 ಎಂಎಲ್ಎಗಳ ಮೇಲೆ ಐಪಿಸಿ ಸೆಕ್ಷನ್ 302 ಪ್ರಕಾರ ಕೊಲೆ ಪ್ರಕರಣದ ಕೇಸ್​ಗಳಿದ್ದರೆ 32 ಶಾಸಕರ ಮೇಲೆ ಕೊಲೆ ಯತ್ನದ ಆರೋಪಗಳಿವೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಆರೋಪದಲ್ಲಿ 8 ಶಾಸಕರ ಮೇಲೆ ಪ್ರಕರಣಗಳಿವೆ ಎಂದು ವರದಿ ತಿಳಿಸಿದೆ.

ಸರ್ವೋಚ್ಛ ನ್ಯಾಯಾಲಯ ಇದರ ಬಗ್ಗೆ ಹೇಳುವುದಾದರೂ ಏನು? ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯನ್ನು ಪಕ್ಷಗಳು ತಿಳಿಸಬೇಕು. ಜೊತೆಗೆ ಯಾವ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಕಾರಣ ನೀಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿತ್ತು. ನ್ಯಾಯಾಲಯವೊಂದು ಚುನಾವಣೆಗೆ ಸಂಬಂಧಿಸಿ ಹೀಗೆ ಹೇಳಿದ್ದು ದೇಶದಲ್ಲೇ ಮೊದಲು.

Published On - 4:57 pm, Fri, 13 November 20