ನಮ್ಮನ್ನ ಸೋಲಿಸಲು ಎಲ್ಲಿಂದ‌ ಡೈರೆಕ್ಷನ್‌ ಬಂದಿದೆ ಎಂದು ಗೊತ್ತು: ಸ್ವಪಕ್ಷದ MLA ವಿರುದ್ಧ ಜಾರಕಿಹೊಳಿ ಬಾಂಬ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 30, 2024 | 6:28 PM

ಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ ನೂತನ ಸಂಸದರ ಅಭಿನಂದನಾ‌ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಮಾತನಾಡಿದ ಸಚಿವ ಸತೀಶ್​ ಜಾರಕಿಹೊಳಿ, ‘ನಮ್ಮನ್ನ ಸೋಲಿಸಲು ಎಲ್ಲಿಂದ‌ ಡೈರೆಕ್ಷನ್‌ ಬಂದಿದೆ ಎಂದು ನನಗೆ ಗೊತ್ತಿತ್ತು ಎಂದು ಸ್ವಪಕ್ಷದ ಶಾಸಕ‌ ಮಹೇಂದ್ರ ತಮ್ಮನ್ನವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ, ಜೂ.30: ನಮ್ಮನ್ನ ಸೋಲಿಸಲು ಎಲ್ಲಿಂದ‌ ಡೈರೆಕ್ಷನ್‌ ಬಂದಿದೆ ಗೊತ್ತು ಎಂದು ಸ್ವಪಕ್ಷದ ಶಾಸಕ‌ ಮಹೇಂದ್ರ ತಮ್ಮನ್ನವರ್ ವಿರುದ್ಧ ಸಚಿವ ಸತೀಶ್‌ ಜಾರಕಿಹೊಳಿ(Satish Jarkiholi) ಮತ್ತೆ ‌ಹರಿಹಾಯ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ ನಡೆದ‌‌ ನೂತನ ಸಂಸದರ ಅಭಿನಂದನಾ‌ ಸಮಾವೇಶದಲ್ಲಿ ಮಾತನಾಡಿದ ಅವರು, ‘22 ಸಾವಿರ ಲೀಡ್ ಕೊಟ್ಟಿದ್ದೇನೆ ಎಂದಿದ್ದ ಮಹೇಂದ್ರ ತಮ್ಮನ್ನವರ್​ರಿಗೆ ‘ಕುಡಚಿ ಒಂದೇ ಊರಲ್ಲಿ 18ಸಾವಿರ ಮತಗಳು ಬಂದಿವೆ. ಇನ್ನು ನಾಲ್ಕು ಸಾವಿರ ಮತಗಳು ಮಾತ್ರ ಉಳಿದವು. ಕಳೆದ ಬಾರಿ ನಿಮಗೆ ಬಿದ್ದ ಮತಗಳು ಕೂಡ ಬಿಜೆಪಿಗೆ ಹೋಗಿವೆ ಎಂದರು.

ಇನ್ನು ಈ ಕುರಿತು ಸುಮ್ಮನೆ ಆರೋಪ‌ ಮಾಡಲು ನಾನು ಖಾಲಿ ಇಲ್ಲ. ಯಾರು‌ ಕೆಲಸ‌ ಮಾಡಿಲ್ಲ‌ ಅವರ ವಿರುದ್ಧ ಆರೋಪ‌ ಮಾಡಿದ್ದೇನೆ. ಎಲ್ಲಾ ಕಡೆ ಮೋಸ ಆಗಿದ್ದರೆ ನಾವು ಗೆಲ್ಲುವುದು ಕಠಿಣ ಆಗುತ್ತಿತ್ತು. ರಾಜಕೀಯದಲ್ಲಿ ಹೊಂದಾಣಿಕೆ‌ ಇರಬೇಕು, ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು ಒಳ್ಳೇದು ಎಂದರು.

ಇದನ್ನೂ ಓದಿ:ಹೆಬ್ಬಾಳ್ಕರ್, ಸಾಹುಕಾರ ಮಧ್ಯೆ ಮತ್ತೆ ಶುರುವಾಯ್ತು ಸಮರ: ಜಾರಕಿಹೊಳಿಯ ಒಂದೊಂದು ಆರೋಪಕ್ಕೆ ತಿರುಗೇಟು

ನಮ್ಮನ್ನ ಸೋಲಿಸಲು ಎಲ್ಲಿಂದ‌ ಡೈರೆಕ್ಷನ್‌ ಬಂದಿದೆ ಗೊತ್ತು

ನಮ್ಮನ್ನ ಸೋಲಿಸಲು ಎಲ್ಲಿಂದ‌ ಡೈರೆಕ್ಷನ್‌ ಬಂದಿದೆ ಎಂದು ನನಗೆ ಗೊತ್ತಿತ್ತು. ಜೊತೆಗೆ ಮಾಜಿ ಶಾಸಕ‌ ಶ್ಯಾಮ್ ಘಾಟಗೆಯವರ ಚಾಡಿ ಮಾತು ಕೇಳುತ್ತಾರೆ ಅಂತ ಹೇಳಿದ್ದರು. ಅದಕ್ಕೆ ತಿರುಗೇಟು ನೀಡಿದ ಜಾರಕಿಹೊಳಿ, ‘ನಾನು ಘಾಟಗೆ ಅಲ್ಲ, ನನ್ನ ಹೆಂಡತಿ ಮಕ್ಕಳ ಮಾತೂ ಕೇಳಲ್ಲ ಎಂದಿದ್ದಾರೆ. ಘಾಟಗೆ ಹಾಗೂ ನೀವು ಕುಸ್ತಿ ಹಿಡಿರಿ ಈಗ ಚುನಾವಣೆಗೆ ನಿಂತಿದ್ದು ನಾವು. ಶ್ಯಾಮ್ ಘಾಟಗೆ ನೀವು ಕುಸ್ತಿ ಹಿಡಿರಿ. ನಮ್ಮ ಚುನಾವಣೆಗೆ ಯಾಕೆ ತೊಂದ್ರೆ ಮಾಡಿದ್ರಿ, ನಿಮಗೆ ಟಿಕೆಟ್ ಕೊಡಿಸಿ ಸಪೋರ್ಟ್ ಮಾಡಿದ್ದೇವು, ಆದರೆ, ನೀವ್ಯಾಕೆ‌ ಹೀಗೆ ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೇವಲ ತಮ್ಮನ್ನವರ್ ಮಾತ್ರ ಅಲ್ಲ‌, ನಮ್ಮ ವಿರುದ್ದ‌ ಹೇಳಿಕೆ ಕೊಡುವವರು ರಾಜ್ಯದ ತುಂಬ ಇದ್ದಾರೆ. ದೇವೆಗೌಡ, ಸಿದ್ದರಾಮಯ್ಯ,‌ ಯಡಿಯೂರಪ್ಪ ಎಷ್ಟು ಜನರನ್ನ‌‌‌ ಬೆಳೆಸಿದರು ಅವರನ್ನೂ ಬೈತಾರೆ. ನಾವು ಇದನ್ನ ಗಂಭೀರವಾಗಿ ಪರಿಗಣಿಸಲ್ಲ. ಆದರೆ, ಬೇಟೆ ಸಿಗೋದನ್ನ ಕಾಯುತ್ತಾ ಕೂತಿರುತ್ತೇವೆ. ರಾಜಕಾರಣ ಯಾರ ಮನೆಯ ಆಸ್ತಿಯೂ ಅಲ್ಲ. ಜನ ಯಾರನ್ನ ಬೇಕಾದ್ರೂ ಗೆಲ್ಲಿಸ್ತಾರೆ, ಯಾರನ್ನ‌‌‌‌‌ ಬೇಕಾದ್ರೂ ಸೋಲಿಸ್ತಾರೆ. ಬೇರೆ ಪಕ್ಷಗಳಿಗೆ ಭವಿಷ್ಯ ಇಲ್ಲ‌ ಎಂದು ಎಲ್ಲರೂ ಬಿಜೆಪಿಗೆ ಹೊರಟಿದ್ರು. ಆದರೆ, ಒಂದೇ‌ ಚುನಾವಣೆ ಜನ ಎಲ್ಲಾ ಸಾಧ್ಯ ಇದೆ ಎನ್ನುವುದು ತೋರಿಸಿದರು. ಯಾರನ್ನಾದ್ರೂ ಗೆಲ್ಲಿಸ್ತಿವಿ ಸೋಲಿಸ್ತಿವಿ ಎಂದು ತೋರಿಸಿಕೊಟ್ಟಿದ್ದಾರೆ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಲು ಕಲಿಯಬೇಕು ಎಂದು ತಮ್ಮನ್ನವರ್​ ವಿರುದ್ದ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on