ಬೆಳಗಾವಿ: 300ಕ್ಕೂ ಹೆಚ್ಚು ಗಣೇಶನ ವಿಗ್ರಹಗಳ ಪ್ರತಿಷ್ಠಾಪನೆ, ವೀರ ಸಾವರ್ಕರ್ ಭಾವಚಿತ್ರ ವಿತರಣೆ

| Updated By: Rakesh Nayak Manchi

Updated on: Aug 31, 2022 | 8:08 AM

ಬೆಳಗಾವಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾದ ಪೆಂಡಾಲ್​ಗೆ ಭೇಟಿಕೊಟ್ಟ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳು ವೀರ ಸಾವರ್ಕರ್ ಭಾವಚಿತ್ರವನ್ನು ವಿತರಣೆ ಮಾಡಿದ್ದಾರೆ.

ಬೆಳಗಾವಿ: 300ಕ್ಕೂ ಹೆಚ್ಚು ಗಣೇಶನ ವಿಗ್ರಹಗಳ ಪ್ರತಿಷ್ಠಾಪನೆ, ವೀರ ಸಾವರ್ಕರ್ ಭಾವಚಿತ್ರ ವಿತರಣೆ
ವೀರ ಸಾವರ್ಕರ್ ಭಾವಚಿತ್ರ ಹಂಚಿಕೆ
Follow us on

ಬೆಳಗಾವಿ: ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ 300ಕ್ಕೂ ಹೆಚ್ಚಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಪುನಸ್ಕಾರಗಳು ಆರಂಭಗೊಂಡಿವೆ. ಅಲ್ಲದೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ವಿವಿಧ ಗಣೇಶ ಮಂಟಪಗಳಿಗೆ ಭೇಟಿಕೊಟ್ಟ ಸ್ಥಳೀಯ ಬಿಜೆಪಿ ಕಾರ್ಯಕರ್ತರು ವೀರ ಸಾವರ್ಕರ್ ಅವರ ಭಾವಚಿತ್ರವನ್ನು ವಿತರಣೆ ಮಾಡಿದ್ದಾರೆ.

ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 378 ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಇದಕ್ಕೂ ಮುನ್ನ ಮಂಟಪಗಳಿಗೆ ತೆರಳಿ ಸಾವರ್ಕರ್ ಭಾವಚಿತ್ರಗಳನ್ನು ವಿತರಣೆ ಮಾಡಲಾಗಿದೆ. ಸ್ಥಳೀಯ ಬಿಜೆಪಿ ನಾಯಕ ಮುರುಘೇಂದ್ರಗೌಡ ಪಾಟೀಲ್ ನೇತೃತ್ವದಲ್ಲಿ ಸಾವರ್ಕರ್ ಭಾವಚಿತ್ರ ವಿತರಣೆ ಮಾಡಲಾಗಿದ್ದು, ಈ ಬಾರಿಯ ಗಣೇಶೋತ್ಸವವನ್ನು ಸಾವರ್ಕರ್ ಗಣೇಶೋತ್ಸವವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ.

ವಿಪಕ್ಷಗಳು ಸಾವರ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ಆಡಳಿತರೂಢ ಬಿಜೆಪಿ ಮತ್ತು ವಿವಿಧ ಹಿಂದೂ ಸಂಘಟನೆಗಳು ಈ ಬಾರಿಯ ಗಣೇಶೋತ್ಸವದಂದು ಸಾವರ್ಕರ್ ಭಾವಚಿತ್ರವನ್ನು ಹಾಕುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಸಾವರ್ಕರ್ ಗಣೇಶ ಉತ್ಸವವನ್ನಾಗಿ ಆಚರಿಸಲು ಹಿಂದೂಪರ ಸಂಘಟನೆಗಳ‌‌‌ ನಿರ್ಧಾರಿಸಿದ್ದು, ಸ್ಥಳೀಯ ಬಿಜೆಪಿ ಶಾಸಕರು, ನಾಯಕರ ಬೆಂಬಲ ವ್ಯಕ್ತವಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ