ಬಳ್ಳಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ; ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಕರ್ಮಕಾಂಡ ಬಯಲು

ರೋಗಿಗಳು, ಸಂಬಂಧಿಕರು ಮಾಸ್ಕ್ ಹಾಕದೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದರೂ ಆಸ್ಪತ್ರೆಯಲ್ಲಿ ಪ್ರಶ್ನೆ ಮಾಡುವವರು ಯಾರು ಇಲ್ಲ. ಸಾಮಾನ್ಯ ವಾರ್ಡ್​ಗೆ ಮಾತ್ರವಲ್ಲ ಐಸಿಯುಗೂ ಹೋಗಬಹುದು. ಆದರೆ ಈ ಬಗ್ಗೆ ಕೆಳುವವರಿಲ್ಲ. ಕೊವಿಡ್ ಸೋ‌ಂಕಿತರ ವಾರ್ಡ್​ಗೆ ಮನೆಯವರು ಹೋಗಿ ಊಟ ಉಪಚಾರ ಮಾಡುತ್ತಿದ್ದಾರೆ.

ಬಳ್ಳಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ; ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಕರ್ಮಕಾಂಡ ಬಯಲು
ಹಗರಿಬೊಮ್ಮನಹಳ್ಳಿಯ ತಾಲೂಕು ಆಸ್ಪತ್ರೆ

Updated on: May 23, 2021 | 3:05 PM

ಬಳ್ಳಾರಿ: ಕೊರೊನಾ ಈ ಸಂದಿಗ್ಧ ಕಾಲದಲ್ಲಿ ಎಷ್ಟು ಜವಾಬ್ದಾರಿಯಾಗಿದ್ದರು ಸಾಲದು. ಆದರೆ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ತಾಲೂಕು ಆಸ್ಪತ್ರೆಯಲ್ಲಿ ಹೇಳೋರು ಇಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ. ಕೊವಿಡ್ ವಾರ್ಡ್​ಗಳಲ್ಲಿ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಯಾರು ಬೇಕಾದರೂ ಒಳಗೆ ಹೋಗಿ ಕೊರೊನಾ ಸೋಂಕಿತರನ್ನು ನೋಡಿಕೊಂಡು ಬರಬಹುದು. ಈ ಬಗ್ಗೆ ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಕರ್ಮಕಾಂಡ ಬಯಲಾಗಿದೆ.

ರೋಗಿಗಳು, ಸಂಬಂಧಿಕರು ಮಾಸ್ಕ್ ಹಾಕದೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದರೂ ಆಸ್ಪತ್ರೆಯಲ್ಲಿ ಪ್ರಶ್ನೆ ಮಾಡುವವರು ಯಾರು ಇಲ್ಲ. ಸಾಮಾನ್ಯ ವಾರ್ಡ್​ಗೆ ಮಾತ್ರವಲ್ಲ ಐಸಿಯುಗೂ ಹೋಗಬಹುದು. ಆದರೆ ಈ ಬಗ್ಗೆ ಕೆಳುವವರಿಲ್ಲ. ಕೊವಿಡ್ ಸೋ‌ಂಕಿತರ ವಾರ್ಡ್​ಗೆ ಮನೆಯವರು ಹೋಗಿ ಊಟ ಉಪಚಾರ ಮಾಡುತ್ತಿದ್ದಾರೆ. ರೋಗಿಯನ್ನು ಮಾತಾಡಿಸಿ ಊರೆಲ್ಲ ಓಡಾಡುತ್ತಿದ್ದಾರೆ. ಪಕ್ಕದಲ್ಲೇ ಗರ್ಭಿಣಿಯರ ವಾರ್ಡ್ ಇದ್ದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆಸ್ಪತ್ರೆ ಆವರಣದಲ್ಲಿ ಹಂದಿಗಳ ಓಡಾಡುತ್ತಿದ್ದರೂ ಓಡಿಸುವ ಪ್ರಯತ್ನವನ್ನು ಯಾರಿಂದಲೂ ಆಗುತ್ತಿಲ್ಲ ಎನ್ನುವುದು ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ತಿಳಿದುಬಂದಿದೆ.

ಆಸ್ಪತ್ರೆಯ ಎಲ್ಲಾ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಲು ಚೀಫ್ ಮೆಡಿಕಲ್ ಆಫೀಸರ್ ರಜೆಯಲ್ಲಿದ್ದಾರಂತೆ. ತಾಲೂಕು ವೈದ್ಯಾಧಿಕಾರಿ ಡಾ.ಶಿವರಾಜ್ ಬಳಿ ಕೇಳಿದರೆ ಮನೆಯವರಿಗೆ ಮಾತ್ರ ಒಳಗೆ ಹೋಗಲು ಅವಕಾಶ ಕೊಟ್ಟಿದ್ದೀವಿ. ಬೇರೆಯವರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಅಲ್ಲಿ ಸೆಕ್ಯುರಿಟಿ ಗಾರ್ಡ್ ಇದ್ದಾರೆ ಅಂತಿದ್ದಾರೆ. ನೂರು ಬೆಡ್ಗಳ ವ್ಯವಸ್ಥೆ ಇರುವ ಆಸ್ಪತ್ರೆಯಲ್ಲಿ ಸದ್ಯ ನಲವತ್ತು ಜನ ಕೊವಿಡ್ ರೋಗಿಗಳಿಗೆ ಅಡ್ಮಿಟ್ ಮಾಡಿಕೊಳ್ಳಲಾಗಿದೆ. ಐಸಿಯು ಮತ್ತು ನಾರ್ಮಲ್ ಬೆಡ್​ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸೋಂಕಿತ ಸಾವು
ದೇವನಹಳ್ಳಿ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ. ವಿದ್ಯುತ್ ಸಂಪರ್ಕ ಕಡಿತವಾದಾಗ ಜನರೇಟರ್ ಆನ್ ಮಾಡದಿದ್ದರಿಂದ ಆಕ್ಸಿಜನ್ ಸಿಗದೆ ಕೋಲಾರ ಜಿಲ್ಲೆ ಮಾಲೂರು ಮೂಲದ ಸುರೇಶ್(33) ಎಂಬುವವರು ಸಾವನ್ನಪ್ಪಿದ್ದಾರೆ.

ಬೆಳಗ್ಗೆ 10.30ರ ಸುಮಾರಿಗೆ ವಿದ್ಯುತ್ ಪೂರೈಕೆ ಕಡಿತವಾಗಿತ್ತು. ಆಕ್ಸಿಜನ್ ಸಿಗದೆ ಇದ್ದಾಗ ಮೃತ ವ್ಯಕ್ತಿ 20 ನಿಮಿಷ ಒದ್ದಾಡಿದ್ದರು. ಆಕ್ಸಿಜನ್ ಇಲ್ಲದೆ 20ಕ್ಕೂ ಹೆಚ್ಚು ಸೋಂಕಿತರು ಪರದಾಟ ಪಡುತ್ತಿದ್ದರು. ಓರ್ವ ಮೃತಪಟ್ಟ ಬಳಿಕ ಆಸ್ಪತ್ರೆ ಸಿಬ್ಬಂದಿ ಜನರೇಟರ್ ಆನ್ ಮಾಡಿದ್ದರು. 2 ವರ್ಷಗಳ ಹಿಂದೆ ಮದುವೆಯಾಗಿದ್ದ ಸುರೇಶ್ ಸಾವನ್ನು ನೋಡಿ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ

ರೆಮ್‌ಡಿಸಿವಿರ್ ಕಾಳಸಂತೆ ಮಾರಾಟಕ್ಕೆ ಬೀಳಲಿದೆ ಬ್ರೇಕ್, ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಬಗ್ಗೆ ಮಾಹಿತಿ ಹಂಚಿಕೊಂಡ ಸುಧಾಕರ್

ಕಡುಕಷ್ಟ ಕಾಲದಲ್ಲಿ ಹಿರಿಯ ಕಲಾವಿದರ ಕೈ ಹಿಡಿದ ಉಪೇಂದ್ರ; ಮನಸಾರೆ ಹರಸಿದ ಜೀವಗಳು

(Bellary hospital is in a mess and secret operation carried out by TV9 is known about mess)