Bengaluru Air: ಲಾಕ್​ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ಗಾಳಿಯ ಶುದ್ಧತೆ ಹೆಚ್ಚಳ

ಕೊವಿಡ್ ಲಾಕ್​ಡೌನ್​ನ ಪ್ರಭಾವದಿಂದ ವಾಹನಗಳ ಸಂಚಾರ ವಿರಳವಾಗಿರುವುದು ವಾಯುಮಾಲಿನ್ಯದ ಪ್ರಮಾಣ ಇಳಿಮುಖವಾಗಲು ಕಾರಣ ಎನ್ನಲಾಗಿದೆ.

Bengaluru Air: ಲಾಕ್​ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ಗಾಳಿಯ ಶುದ್ಧತೆ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
guruganesh bhat
|

Updated on: May 23, 2021 | 3:14 PM

ಬೆಂಗಳೂರು: ಕಳೆದ ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಕೊವಿಡ್ ಲಾಕ್​ಡೌನ್​ನ ಪ್ರಭಾವದಿಂದ ವಾಹನಗಳ ಸಂಚಾರ ವಿರಳವಾಗಿರುವುದು ವಾಯುಮಾಲಿನ್ಯದ ಪ್ರಮಾಣ ಇಳಿಮುಖವಾಗಲು ಕಾರಣ ಎನ್ನಲಾಗಿದೆ. ಮೇ ತಿಂಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶುದ್ಧ ಗಾಳಿಯ ಗುಣಮಟ್ಟದಲ್ಲಿ‌ ಶೇ.35.26ರಷ್ಟು ಏರಿಕೆಯಾಗಿದೆ.

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳ ವಾಯುಮಾಲಿನ್ಯದಲ್ಲಿ ಕಡಿಮೆಯಾದ ಪರಿಣಾಮ ಗಾಳಿಯ ಗುಣಮಟ್ಟ ಏರಿಕೆಯಾಗಿದೆ.

ಗಾಳಿಯ ಗುಣಮಟ್ಟವನ್ನು AQI (AIR QUALITY INDEX) ಮೂಲಕ ನಿರ್ಧರಿಸಲಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನ ಬೆಂಗಳೂರಿನ ವಿವಿಧ ಪ್ರದೇಶಗಳ AQI ಗನಿಸುವುದಾದರೆ, ಹೆಬ್ಬಾಳದಲ್ಲಿ ಏಪ್ರಿಲ್​ನಲ್ಲಿ AQI=77 ಇದ್ದು, ಮೇ ತಿಂಗಳಲ್ಲಿ AQI=45 ಕ್ಕೆ ಏರಿಕೆಯಾಗಿದೆ. ಅಂದರೆ ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇ.41.76ರಷ್ಟು ಏರಿಕೆಯಾಗಿದೆ. ಜಯನಗರದಲ್ಲಿ ಏಪ್ರಿಲ್​ನಲ್ಲಿ AQI=87 ಇದ್ದು, ಮೇ ತಿಂಗಳಲ್ಲಿ AQI=55 ಸೂಚಿಸಿದೆ, ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇ.37.43ರಷ್ಟು ಏರಿಕೆಯಾಗಿದೆ.

ಮೈಸೂರು ರಸ್ತೆಯ ಆಸುಪಾಸಿನ ಪ್ರದೇಶಗಳಲ್ಲಿ ಏಪ್ರಿಲ್​ನಲ್ಲಿ AQI=113 ಇದ್ದು, ಮೇ ತಿಂಗಳಲ್ಲಿ AQI=52 ಆಗಿದೆ. ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇ.54.0ರಷ್ಟು ಏರಿಕೆಯಾಗಿದೆ. ಸದಾ ಜನನಿಬಿಡ ಪ್ರದೇಶ ಸಿಲ್ಕ್ ಬೋರ್ಡ್​ನ್ನು ಗಮನಿಸಿದರೆ ಏಪ್ರಿಲ್​ನಲ್ಲಿ AQI=84 ಇದ್ದು, ಮೇ ತಿಂಗಳಲ್ಲಿ AQI=57ರಷ್ಟಾಗಿದೆ. ಹೀಗಾಗಿ ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇಕಡಾ 32.44ರಷ್ಟು ಏರಿಕೆಯಾದಂತಾಗಿದೆ.

ಇನ್ನು ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಏಪ್ರಿಲ್​ನಲ್ಲಿ AQI=78 ಇದ್ದು, ಮೇ ತಿಂಗಳಲ್ಲಿ AQI=55 ಆಗಿದೆ. ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇ.30.29ರಷ್ಟು ಏರಿಕೆಯಾಗಿದೆ. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಶುದ್ದ ಗಾಳಿಯ ಗುಣಮಟ್ಟದಲ್ಲಿ ಶೇಕಡಾ 35.26ರಷ್ಟು ಏರಿಯಾಗಿದ್ದು, ಲಾಕ್​ಡೌನ್ ಪ್ರಭಾವ ಎಂದು ಖಚಿತವಾಗಿ ಹೇಳಬಹುದಾಗಿದೆ.

ಇದನ್ನೂ ಓದಿ: ಕೊವಿಡ್​ 19 ಲಸಿಕೆ ಪ್ರಮಾಣಪತ್ರದ ಮೇಲೆ ಪ್ರಧಾನಿ ಬದಲು ಮುಖ್ಯಮಂತ್ರಿ ಫೋಟೋ; ನೋಂದಣಿ ಆ್ಯಪ್​ ಕೂಡ ಬದಲಿಸಿದ ಛತ್ತೀಸ್​ಗಡ್​

ಕೋರ್ಟ್​ಗಳು ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಆದೇಶ ನೀಡಬಾರದು; ಸುಪ್ರೀಂಕೋರ್ಟ್

(Karnataka Lockdown 2021 Effect Increases Air Purity in Bangalore here is the statistics)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್