ಬೆಂಗಳೂರು: ಮಗು ಜನಿಸಿದ ಖುಷಿಗೆ ವಿಮಾನದಲ್ಲೇ ಸಿಹಿ ಹಂಚಿ ಸಂಭ್ರಮಿಸಿದ ಪ್ರಯಾಣಿಕ

ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ನೆಟ್​​ವರ್ಕ್ ಇರುವುದಿಲ್ಲ. ಆದರೆ, ಲಂಡನ್​ನಿಂದ ಬೆಂಗಳೂರಿಗೆ ಆಗಮಿಸಿದ ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ನೆಟ್​ವರ್ಕ್ ಸಿಗುತ್ತಿತ್ತು. ಅದರಂತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ಮೂಲದ ಪ್ರಯಾಣಿಕರೊಬ್ಬರಿಗೆ ಮಗು ಜನಿಸಿದ ಸಂದೇಶ ಬಂದಿದ್ದು, ಇದೇ ಖುಷಿಗೆ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮಾಚರಿಸಿದ್ದಾರೆ.

ದೇವನಹಳ್ಳಿ, ಅ.7: ಲಂಡನ್​ನಿಂದ ಬೆಂಗಳೂರಿಗೆ (Bangalore) ಆಗಮಿಸುತ್ತಿದ್ದಾಗ ಮಗುವಿನ ಜನನದ ಸುದ್ದಿ ತಿಳಿದು ಚೆನ್ನೈ ಮೂಲದ ಪ್ರಯಾಣಿಕರೊಬ್ಬರು ವಿಮಾನದಲ್ಲೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ನೆಟ್​​ವರ್ಕ್ ಇರುವುದಿಲ್ಲ. ಆದರೆ, ಬ್ರಿಟಿಷ್ ಏರ್ ವೇಸ್​ನಲ್ಲಿ ನೆಟ್​ವರ್ಕ್ ಲಭ್ಯವಾಗಿದ್ದರಿಂದ ಸಂತಸದ ಕ್ಷಣ ತಿಳಿದು ಸಂಭ್ರಮಾಚರಿಸಿದರು.

ಚೆನೈ ಮೂಲದ ಪ್ರಯಾಣಿಕ ಅನು ಬಾಲಾಜಿ‌ ಅವರು ಬ್ರಿಟಿಷ್ ಏರ್ ವೇಸ್​ನ BA119 ವಿಮಾನದಲ್ಲಿ ಲಂಡನ್​ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದರು. ವಿಮಾನದಲ್ಲಿ ಇರುವಾಗಲೇ ತಾನು ತಂದೆಯಾದ ಸುದ್ದಿ ತಿಳಿದು ಅನು ಬಾಲಾಜಿ ಅವರು ಸಹ ಪ್ರಯಾಣಿಕರಿಗೆ ಹಾಗೂ ವಿಮಾನದ ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣ, ಮಾಹಿತಿ ಇಲ್ಲಿದೆ

ಅಷ್ಟು ಮಾತ್ರವಲ್ಲದೆ, ಮಗು ಜನನದ ವಿಷಯವನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ (ಟ್ವಿಟರ್) ಹಂಚಿಕೊಂಡ ಅನು ಬಾಲಾಜಿ ಅವರು, ವಿಮಾನದಲ್ಲಿ ಇಂಟರ್ ನೆಟ್ ಸಿಕ್ಕಿದ್ದಕ್ಕಾಗಿ ಬ್ರಿಟಿಷ್ ಏರ್ವೇಸ್​ಗೆ ಧನ್ಯವಾದ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 am, Sat, 7 October 23

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us