ಬೆಂಗಳೂರು: ಹೈದರಾಬಾದ್ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ವಿಚಾರ ಸಂಬಂಧಿಸಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಹಿಳೆಯರಿಗೆ ಸುರಕ್ಷತೆಯ ಕರೆ ನೀಡಿದ್ದಾರೆ. ಮಹಿಳೆಯರು ಸಂಕಷ್ಟದಲ್ಲಿ ಇದ್ದಾಗ ಯಾವ ರೀತಿ ಸಹಾಯ ಪಡೆಯಬಹುದು ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಮಹಿಳೆಯರಿಗೆ ಯಾವುದೇ ಸಮಸ್ಯೆ ಇದ್ರು ತಕ್ಷಣ 100 ಕ್ಕೆ ದೂರವಾಣಿ ಕರೆ ಮಾಡಿ. ಕರೆ ಮಾಡಿದ 7 ಸೆಕೆಂಡ್ ನಲ್ಲಿ ಕರೆ ಸ್ವೀಕರಿಸಲಾಗುತ್ತೆ. ನಂತ್ರ ಕೆಲವೆ ನಿಮಿಷಗಳಲ್ಲಿ ಪೊಲೀಸರು ಸ್ಪಾಟ್ ಗೆ ಬರ್ತಾರೆ.
ಸುರಕ್ಷ ಆ್ಯಪ್ ಬಳಸಿ: 9 ನಿಮಿಷದಲ್ಲಿ ಸ್ಪಾಟ್ಗೆ ಬರ್ತೀವಿ
ಬೆಂಗಳೂರಿಗರು ಭಯ ಪಡುವ ಅವಶ್ಯಕತೆ ಇಲ್ಲಾ. ಸಾರ್ವಜನಿಕರ ಪ್ರತಿಯೊಂದು ಕರೆಯನ್ನೂ ನಾವು ಸ್ವೀಕರಿಸುತ್ತೇವೆ. ಸಾರ್ವಜನಿಕರು ಈ ಕ್ಷಣದಿಂದಲೆ ಕರೆ ಮಾಡಬಹುದು. ಕರೆ ಮಾಡಿದ 9 ನಿಮಿಷದಲ್ಲಿ ನಾವು ನಿಮ್ಮ ಸ್ಪಾಟ್ಗೆ ಬರ್ತೀವಿ ಎಂದು ಮಹಿಳೆಯರ ಸುರಕ್ಷತೆಗೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಹಿಳೆಯರು, ಯುವತಿಯರು ಮತ್ತು ಪುರುಷರು ಸುರಕ್ಷ ಆ್ಯಪ್ ಬಳಸಿ. ನಿಮಗೆ ಸಮಸ್ಯೆ ಎದುರಾದಾಗ ಆ್ಯಪ್ ನಿಮಗೆ ಸಹಾಯ ಮಾಡುತ್ತೆ. ಒಂದು ಬಟನ್ ಪ್ರೆಸ್ ಮಾಡುವುದರಿಂದ ಪೊಲೀಸರು ಬರ್ತಾರೆ. ಕ್ಯಾಮರಾ ಆನ್ ಆಗುತ್ತೆ. ಕಂಟ್ರೋಲ್ ರೂಮ್ನಲ್ಲಿ ನಿಮಗೆ ಏನಾಗಿದೆ ಅನ್ನೋದು ಗೊತ್ತಾಗುತ್ತೆ. ಎಲ್ಲರು ಇದನ್ನು ಬಳಸಿ ಸುರಕ್ಷತೆ ಕಾಪಾಡಬೇಕು ಎಂದು ಸುರಕ್ಷ ಆ್ಯಪ್ ಬಳಸುವಂತೆ ಅವರು ಕರೆ ನೀಡಿದ್ದಾರೆ.
Download_Install #Suraksha Mobile App and Stay Safe.
https://t.co/ym6EvdUg2a or /SurakshaiOS#WomenSafety @BlrCityPolice pic.twitter.com/40OLr9Shmv
— Dr. Sanjeev M Patil, IPS (@DCPWestBCP) December 2, 2019
Published On - 11:34 am, Mon, 2 December 19