Kannada News Karnataka ಲಾಕ್ಡೌನ್ ನಡುವಿನ ಬೆಂಗಳೂರನ್ನು ಕಂಡಿರಾ? ನೋಡಿ ನಗರದ ಪ್ರಮುಖ ಸ್ಥಳಗಳ ಚಿತ್ರಗಳು
ಲಾಕ್ಡೌನ್ ನಡುವಿನ ಬೆಂಗಳೂರನ್ನು ಕಂಡಿರಾ? ನೋಡಿ ನಗರದ ಪ್ರಮುಖ ಸ್ಥಳಗಳ ಚಿತ್ರಗಳು
Bengaluru Lockdown photos: ಪ್ರತಿದಿನ, ಪ್ರತಿಕ್ಷಣ..ಒಂದು ಸೆಕೆಂಡೂ ಬಿಡುವಿಲ್ಲದೇ ಲೋಕದ ಆಗುಹೋಗುಗಳಿಗೆ ತೆರೆದುಕೊಳ್ಳುತ್ತಿದ್ದ ಬೆಂಗಳೂರಿನ ರಸ್ತೆಗಳು ಅಕ್ಷರಶಃ ಭಣಗುಡುತ್ತಿವೆ. ( ಚಿತ್ರಗಳು: ಅಪೂರ್ವ ಕುಮಾರ್ ಬಾಳೆಗೆರೆ)
ಇದೇ ನೋಡಿ..ಪ್ರಸಿದ್ಧ ಟೌನ್ ಹಾಲ್. ಲಾಕ್ಡೌನ್ ಜಾರಿಯಾದಾಗಿನಿಂದ ಟೌನ್ಹಾಲ್ ಸುತ್ತಮುತ್ತ ಮೌನದ್ದೇ ಸದ್ದು..
ಕರ್ನಾಟಕ ಲಾಕ್ಡೌನ್ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಸ್ಥಳಗಳು ಹೇಗಿವೆ ಎಂಬ ಚಿತ್ರಣವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರಿಗಾಗಿ ತೆರೆದಿಡುತ್ತಿದೆ.
ಇಂತಹ ಸಾವಿರಾರು ರಸ್ತೆಗಳು, ಮಾರುಕಟ್ಟೆಗಳು, ಪೇಟೆಗಳು, ಬೀದಿಗಳು ಮತ್ತೆ ಜನರ ಬರುವಿಕೆಗೆ ಕಾದುಕುಳಿತಿವೆ. ಅಂದರೆ ಕೊವಿಡ್ ಸೋಂಕು ಸಂಪೂರ್ಣ ಕಡಿಮೆಯಾಗಲು ಕಾಯ್ದುಕುಳಿತಿವೆ. ಆದಷ್ಟು ಬೇಗ ಕೊವಿಡ್ ಕಳೆಯಲು ಪ್ರಾರ್ಥಿಸುತ್ತಿವೆ.
ಆದರೆ ಕೊವಿಡ್ ಮುಗಿಯುವುದು ಎಂದು? ಯಾವಾಗ? ಮತ್ತು ಹೇಗೆ? ಬೆಂಗಳೂರಿನಲ್ಲಿ ಕಡಿಮೆಯಾದರೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೊವಿಡ್ ಹರಡುತ್ತಿರುವ ವೇಗ ಗಾಬರಿ ಹುಟ್ಟಿಸುವಂತಿದೆ.
ಕೆಆರ್ ಮಾರುಕಟ್ಟೆ ಎಂದರೆ ಬೆಂಗಳೂರು ನಗರದ ಜೀವಕೇಂದ್ರ. ಅಲ್ಲಿಯ ಚಲನವಲನ, ಚಟುವಟಿಕೆ, ಧ್ವನಿ- ಪ್ರತಿಧ್ವನಿ ಲಾಕ್ಡೌನ್ನಲ್ಲಿ ಕಳೆದುಹೋಗಿದೆ. ಕೊವಿಡ್ ಸೋಂಕು ಮರೆಯಾದ ಬಳಿಕವಷ್ಟೇ ಇಂತಹ ಎಷ್ಟೋ ಮಾರುಕಟ್ಟೆಗಳು ಮತ್ತೆ ಮೈದಳೆಯಲಿವೆ.
ಇದೇ ನೋಡಿ..ಪ್ರಸಿದ್ಧ ಟೌನ್ ಹಾಲ್. ಲಾಕ್ಡೌನ್ ಜಾರಿಯಾದಾಗಿನಿಂದ ಟೌನ್ಹಾಲ್ ಸುತ್ತಮುತ್ತ ಮೌನದ್ದೇ ಸದ್ದು..
ಬೆಂಗಳೂರಿನ ಟೌನ್ಹಾಲ್ ಸರ್ಕಲ್ ಇಡೀ ರಾಜ್ಯಕ್ಕೆ ಚಿರಪರಿಚಿತ ಸ್ಥಳ. ಕೊವಿಡ್ ತಡೆಯಲು ಹರಸಾಹಸ ಪಡುತ್ತಿರುವ ಕರ್ನಾಟಕ ಸರ್ಕಾರ ವಿಧಿಸಿರುವ ಲಾಕ್ಡೌನ್ನಿಂದ ಈ ಜಾಗದಲ್ಲೂ ಜನಸಂಚಾರವಿರಲಿಲ್ಲ.
ಸಾಂದರ್ಭಿಕ ಚಿತ್ರ
ಪ್ರತಿದಿನ, ಪ್ರತಿಕ್ಷಣ..ಒಂದು ಸೆಕೆಂಡೂ ಬಿಡುವಿಲ್ಲದೇ ಲೋಕದ ಆಗುಹೋಗುಗಳಿಗೆ ತೆರೆದುಕೊಳ್ಳುತ್ತಿದ್ದ ಬೆಂಗಳೂರಿನ ರಸ್ತೆಗಳು ಅಕ್ಷರಶಃ ಭಣಗುಡುತ್ತಿವೆ.