Bengaluru-Mysuru Expressway: ಇಂದಿನಿಂದ ಟೋಲ್​ ಸಂಗ್ರಹ ಆರಂಭ; ಇಲ್ಲಿದೆ ಟೋಲ್​ ದರ ಪಟ್ಟಿ

|

Updated on: Feb 27, 2023 | 11:16 AM

ಬೆಂಗಳೂರು-ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯ ಟೋಲ್​ ಸಂಗ್ರಹ ಇಂದಿನಿಂದ (ಫೆ.27) ಪ್ರಾರಂಭವಾಗಿದ್ದು, ಇಲ್ಲಿದೆ ದರ ವಿವರ

Bengaluru-Mysuru Expressway: ಇಂದಿನಿಂದ ಟೋಲ್​ ಸಂಗ್ರಹ ಆರಂಭ; ಇಲ್ಲಿದೆ ಟೋಲ್​ ದರ ಪಟ್ಟಿ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇ
Follow us on

ಬೆಂಗಳೂರು: ಸುಮಾರು 8 ಸಾವಿರ ಕೋಟಿಯಲ್ಲಿ ಸಿದ್ದವಾದ ರಾಮನಗರ, ಬೆಂಗಳೂರು-ಮೈಸೂರು (Bengaluru-Myosore) ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು (Bengaluru-Mysuru 10 line Expressway) ಮಾರ್ಚ್​​ 11ರಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಮಂಡ್ಯ ಜಿಲ್ಲೆಯ ಮದ್ದೂ​ರಿ​ನಲ್ಲಿ ಲೋಕಾ​ರ್ಪಣೆ ಮಾಡ​ಲಿ​ದ್ದಾ​ರೆ. ಇದು ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ ಹೆದ್ದಾರಿಯಾಗಿದ್ದು, ಇದರ ಟೋಲ್​ ಸಂಗ್ರಹ ಇಂದಿನಿಂದ (ಫೆ.27) ಪ್ರಾರಂಭವಾಗಿದೆ. ಬೆಂಗಳೂರು ಬಳಿಯ ಕಣಿಮಿಣಿಕೆ ಮತ್ತು ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಬಳಿ ಟೋಲ್​ ಸಂಗ್ರಹಿಸಲಾಗುತ್ತಿದೆ. ಮಂಡ್ಯ ಜಿಲ್ಲೆ ನಿಡಘಟ್ಟವರೆಗೆ 55.63 ಕಿಮೀ ಉದ್ದದ ರಸ್ತೆಗೆ ಶುಲ್ಕ ನಿಗದಿ ಮಾಡಲಾಗಿದ್ದು ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಟೋಲ್​ ಸಂಗ್ರಹ ಆರಂಭವಾಗಿದೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಟೋಲ್​ ದರ

ಸರ್ವಿಸ್​ ರಸ್ತೆ ಹೊರತುಪಡಿಸಿ, ಉಳಿದ ಆರು ಪಥಗಳಲ್ಲಿ ಏಕಮುಖ ಸಂಚಾರಕ್ಕೆ ದರ ನಿಗದಿ ಮಾಡಲಾಗಿದೆ.

ವಾಹನ ಏಕಮುಖ ಸಂಚಾರ ಅದೇ ದಿನ ಮರು ಸಂಚಾರ ಸ್ಥಳೀಯ ವಾಹನ 1 ತಿಂಗಳ 50 ಸಂಚಾರದ ಪಾಸ್
ಕಾರು, ಜೀಪು, ವ್ಯಾನ್​ 135 205 70 4525
ಲಘು ವಾಣಿಜ್ಯ/ ಸರಕು ವಾಹನ/ ಮಿನಿ ಬಸ್​ 220 320 110 7315
ಬಸ್​/ಟ್ರಕ್​ (ಡಬಲ್​​ ಆಕ್ಸೆಲ್​) 460 690 230 15325
ವಾಣಿಜ್ಯ ವಾಹನ (ಮೂರು ಆಕ್ಸೆಲ್​) 500 750 250 16715
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನಗಳು, ಬಹು ಆಕ್ಸೆಲ್​ (6 ರಿಂದ 8) 720 1080 360 24030
ಭಾರೀ ಗಾತ್ರದ ವಾಹನ (7ಕ್ಕೂ ಹೆಚ್ಚಿನ ಆಕ್ಸೆಲ್​​ 880 1315 440 29255

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:15 am, Mon, 27 February 23