ರಾಮಮೂರ್ತಿ ನಗರ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ವೈರಲ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ಆರೋಪಿಗಳ ಬಳಿ ಆಧಾರ ಕಾರ್ಡ್ ಪತ್ತೆಯಾಗಿದೆ. ಆದರೆ ಬಂಧಿತ ಬಾಂಗ್ಲಾ ಪ್ರಜೆಗಳಿಗೆ ಆಧಾರ ಕಾರ್ಡ್ ಸಿಕ್ಕಿದ್ದು ಹೇಗೆ? ಎಂಬದನ್ನು ಬೆಂಗಳೂರು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಅಕ್ರಮವಾಗಿ ಆಧಾರ ಕಾರ್ಡ್ ಮಾಡಿಕೊಟ್ಟವರಿಗಾಗಿ ವಿಶೇಷ ತಂಡ ರಚಿಸಿ ಶೋಧ ಆರಂಭಿಸಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಅಕ್ರಮ ಜಾಲ ಕೆಲಸ ಮಾಡಿದ್ದರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅಕ್ರಮವಾಗಿ ಬಾಂಗ್ಲಾ ದೇಶದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿಗಳಿಗೆ ಆಧಾರ್ ಕಾರ್ಡ್ ಸಿಕ್ಕಿದ್ದು ಹೇಗೆ ಎಂಬುದೇ ಈಗ ಕುತೂಹಲದ ಕೇಂದ್ರಬಿಂದುವಾಗಿದೆ.
ಸದ್ಯ ವೈರಲ್ ಆಗಿರುವ ವಿಡಿಯೋ 8 ದಿನಗಳ ಹಿಂದೆ ಅಂದರೆ ಮೇ 22 ರ ತಡರಾತ್ರಿ ರೆಕಾರ್ಡ್ ಆಗಿದ್ದು ಎಂದು ತಿಳಿದುಬಂದಿದೆ. ಅಕ್ಕಪಕ್ಕದವರಿಗೆ ತಿಳಿಯದಂತೆ ದೊಡ್ಡದಾಗಿ ಮ್ಯೂಸಿಕ್ ಹಾಕಿಕೊಂಡು ಕುಕೃತ್ಯ ನಡೆಸಿದ್ದಾರೆ. ಬಂಧಿತ ರಿಧಾಯ್ ಬಾಬು ಮತ್ತು ಮಿಸ್ಸಿಂಗ್ ರುಪ್ಸಾನ್ ಕೃತ್ಯ ನಡೆಸಲು ಉಳಿದವರಿಗೆ ಪ್ರೇರಣೆ ನೀಡಿದ್ದಾಗಿ ವಿಚಾರಣೆ ವೇಳೆ ತಿಳಿದಿದ್ದು, ಈ ಇಬ್ಬರೂ ನಗರದಲ್ಲಿ ಪಿಂಪ್ ಆಗಿ ಕೆಲಸ ಮಾಡುತ್ತಿದ್ದರು. ಬಾಂಗ್ಲಾದಿಂದ ಯುವತಿಯರನ್ನ ಅಕ್ರಮವಾಗಿ ಕರೆತಂದು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ.
ಈ ಪ್ರಕರಣದ ಬೆನ್ನುಬಿದ್ದಿದ್ದ ಬಾಂಗ್ಲಾದೇಶದ ಡಾಕಾ ಪೊಲೀಸರು ಲಭ್ಯವಾದ ಸ್ಥಳೀಯ ಎಲ್ಲಾ ಮಾಹಿತಿಗಳನ್ನು ಕಳಿಸಿ ಅಸ್ಸಾಂ ಪೊಲೀಸರ ಸಹಾಯ ಕೇಳಿದ್ದರು. ಈ ಮಾಹಿತಿ ಪಡೆದ ಅಸ್ಸಾಂ ಪೊಲೀಸರು ಮೇ 27 ರಂದು ಟ್ವೀಟ್ ಮೂಲಕ ಆರೋಪಿಗಳ ಬಗ್ಗೆ ತಿಳಿದಿದ್ದರೆ ಮಾಹಿತಿ ಕೋರಿ ಮನವಿ ಮಾಡಿದ್ದರು.
ಇದೇ ವೇಳೆ ಐಪಿ ಆಡ್ರಸ್ ಮತ್ತು ಕೊಟ್ಟಿದ್ದ ಮೊಬೈಲ್ ನಂಬರ್ ಬಗ್ಗೆ ಪರಿಶೀಲನೆ ನಡೆಸಿದಾಗ ಆ ನಂಬರ್ ಸ್ವೀಚ್ ಆಫ್ ಆಗಿರುವುದು ಪತ್ತೆಯಾಗಿತ್ತು. ರಿಧಾಯ್ ಎಂಬಾತ ಯೂಟ್ಯೂಬರ್ ಮತ್ತು ಟಿಕ್ಟಾಕ್ ಸ್ಟಾರ್ ಆಗಿದ್ದು, ಆತನ ಪೋಟೊಗಳು ಮತ್ತು ನಂಬರ್ನ್ನು ಸಂಗ್ರಹಿಸಲಾಗಿತ್ತು. ಜತೆಗೆ ಬಾಂಗ್ಲಾದೇಶದಲ್ಲಿ ಕೃತ್ಯ ನಡೆದಿಲ್ಲ ಎಂಬುದು ಡಾಕಾ ಪೊಲೀಸರಿಗೆ ಖಚಿತವಾಗಿತ್ತು.
ಪೊಲೀಸರಿಗೆ ಕ್ಲೂ ನೀಡಿದ್ದು ಆರೋಪಿ ರಿದಾತ್ ಪೋನ್ ಐಎಂಇಐ ನಂಬರ್ನ್ನು ಪರಿಶೀಲಿಸಿದಾಗ ಭಾರತದ ಮೊಬೈಲ್ ನಂಬರ್ ಕಾಲ್ ಡಿಟೇಲ್ಸ್ ಪತ್ತೆಯಾಗಿತ್ತು. ಈ ಮಾಹಿತಿ ಆದರಿಸಿ ತನಿಖೆ ನಡೆಸಿದಾಗ ಆರೋಪಿಗಳು ಬೆಂಗಳೂರಲ್ಲಿ ಇರೋದು ಖಚಿತವಾಗಿತ್ತು. ಆಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕಮಲ್ ಪಂತ್ರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ಆ ಬಳಿಕ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಗೆ ಮಾಹಿತಿ ರವಾನಿಸಲಾಗಿತ್ತು. ಕೂಡಲೇ ಸಿಸಿಬಿ ಎಸಿಪಿ ಗೌತಮ್ ವಿಶೇಷ ತಂಡ ಆರೋಪಿಗಳ ಪತ್ತೆಗಿಳಿದಿತ್ತು.
ಇನ್ಸಪೆಕ್ಟರ್ ಲಕ್ಷ್ಮಿಕಾಂತಯ್ಯ, ಪಿಸಿಗಳಾದ ಶಶಿ ಹಾಗೂ ರವಿಶಂಕರ್ ಸಿಸಿಬಿ ಪೊಲೀಸರಿಗೆ ಪೂರ್ವ ವಿಭಾಗದ ಪೊಲೀಸರ ಸಹ ಸಾಥ್ ಕೊಟ್ಟಿದ್ದರು. ಮೊದಲು ಆರೋಪಿಗಳ ನಂಬರ್ ಟವರ್ ಡಂಪ್ ಪಡೆದಾಗ ಮಾರ್ಗೊಂಡನಹಳ್ಳಿಯ ಗ್ರೀನ್ ವೀವ್ ಲೇಔಟ್ ಲಿಂಕ್ ಆಗಿತ್ತು. ಅಲ್ಲಿಗೆ ತೆರಳಿದ ಪೊಲೀಸರಿಗೆ ಅನೇಕ ಮಂದಿ ಬಾಂಗ್ಲಾದೇಶದವರು ಇದ್ದಿದ್ದರು. ಈ ವೇಳೆ ಸ್ಥಳೀಯ ಬಾತ್ಮೀದಾರರ ಸಹಾಯ ಪಡೆದು ವೈರಲ್ ಆಗಿದ್ದ ವಿಡಿಯೋದ ಆರೋಪಿಗಳನ್ನು ಪತ್ತೆಹಚ್ಚಲಾಯಿತು.
ಇದನ್ನೂ ಓದಿ: ಬೆಂಗಳೂರು ಗ್ಯಾಂಗ್‌ರೇಪ್ ಆರೋಪಿಗಳನ್ನು ಬಂಧಿಸಿದ್ದ ಪೊಲೀಸ್ ಸಿಬ್ಬಂದಿಗೆ ಕೊವಿಡ್ ಭೀತಿ
(Bengaluru police behind Bangladeshi gangrape and and harrased viral video accused have Aadhar Card)