ಮಾಜಿ ಸಚಿವರಿಗೆ ನೀಡಿದ್ದ ಭದ್ರತೆ ವಾಪಸ್​: ಡಿಕೆಶಿ ಸೇರಿ ಐವರಿಗೆ ಮಾತ್ರ ಮುಂದುವರಿಕೆ

|

Updated on: Jan 30, 2020 | 1:32 PM

ಬೆಂಗಳೂರು: ರಾಜ್ಯದ 27 ಮಾಜಿ ಸಚಿವರಿಗೆ ನೀಡಿದ್ದ ಗನ್ ಮ್ಯಾನ್ ಹಾಗೂ ಸೆಕ್ಯುರಿಟಿ ವಾಪಸ್ ಪಡೆಯುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ನೀಡಿದ್ದಾರೆ. ಎ ಮತ್ತು ಬಿ ಶ್ರೇಣಿ ಎಂದು ಡಿವೈಡ್ ಮಾಡಿ ಭದ್ರತೆ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಬಂಡೆಪ್ಪ ಕಾಶಪ್ಪನವರ್, ಡಿ.ಸಿ.ತಮ್ಮಣ್ಣ, ರಮೇಶ್ ಜಾರಕಿಹೊಳಿ, ಜಿ.ಟಿ.ದೇವೇಗೌಡ ಸೇರಿ 27 ಮಂದಿಗೆ ಗನ್ ಮ್ಯಾನ್ ನೀಡಲಾಗಿತ್ತು. ಭದ್ರತೆ ವಾಪಸ್ ಪಡೆಯುವಂತೆ ಜನವರಿ 22ರಂದೇ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶಿಸಿದ್ದಾರೆ. […]

ಮಾಜಿ ಸಚಿವರಿಗೆ ನೀಡಿದ್ದ ಭದ್ರತೆ ವಾಪಸ್​: ಡಿಕೆಶಿ ಸೇರಿ ಐವರಿಗೆ ಮಾತ್ರ ಮುಂದುವರಿಕೆ
Follow us on

ಬೆಂಗಳೂರು: ರಾಜ್ಯದ 27 ಮಾಜಿ ಸಚಿವರಿಗೆ ನೀಡಿದ್ದ ಗನ್ ಮ್ಯಾನ್ ಹಾಗೂ ಸೆಕ್ಯುರಿಟಿ ವಾಪಸ್ ಪಡೆಯುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ನೀಡಿದ್ದಾರೆ. ಎ ಮತ್ತು ಬಿ ಶ್ರೇಣಿ ಎಂದು ಡಿವೈಡ್ ಮಾಡಿ ಭದ್ರತೆ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ.

ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಬಂಡೆಪ್ಪ ಕಾಶಪ್ಪನವರ್, ಡಿ.ಸಿ.ತಮ್ಮಣ್ಣ, ರಮೇಶ್ ಜಾರಕಿಹೊಳಿ, ಜಿ.ಟಿ.ದೇವೇಗೌಡ ಸೇರಿ 27 ಮಂದಿಗೆ ಗನ್ ಮ್ಯಾನ್ ನೀಡಲಾಗಿತ್ತು. ಭದ್ರತೆ ವಾಪಸ್ ಪಡೆಯುವಂತೆ ಜನವರಿ 22ರಂದೇ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶಿಸಿದ್ದಾರೆ.

ಐವರಿಗೆ ಭದ್ರತೆ ಮುಂದುವರಿಕೆ:
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ವೇಳೆ ಸಚಿವರಿಗೆ ಗನ್ ಮ್ಯಾನ್ ಹಾಗೂ ಮನೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಂತರ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಭದ್ರತೆ ವಾಪಸ್ ಪಡೆಯಲು ಸೂಚಿಸಿದ್ದಾರೆ. A ಶ್ರೇಣಿಯಲ್ಲಿರುವ ಮಾಜಿ ಸಚಿವರಾದ ಡಾ. ಜಿ.ಪರಮೇಶ್ವರ್, ಎಂ.ಬಿ ಪಾಟೀಲ್ ಮತ್ತು ಹೆಚ್.ಡಿ.ರೇವಣ್ಣಗೆ Z ಶ್ರೇಣಿ ಭದ್ರತೆ ಮುಂದುವರಿಸಲಾಗಿದೆ. ಡಿ.ಕೆ.ಶಿವಕುಮಾರ್ ಮತ್ತು ಕೆ.ಜೆ.ಜಾರ್ಜ್  ಅವರಿಬ್ಬರಿಗೆ Y ಶ್ರೇಣಿ ಭದ್ರತೆ ಒದಗಿಸಲಾಗಿದೆ.



Published On - 1:08 pm, Thu, 30 January 20