ಚಿಕ್ಕ ತಿರುಪತಿ ದೇವಾಲಯದ ಅಧಿಕಾರಿಗಳೇ ಹುಂಡಿ ಹಣ ಎಗರಿಸಿದರಾ?
ಕೋಲಾರ: ಜಿಲ್ಲೆಯ ಪ್ರಸಿದ್ಧ ಚಿಕ್ಕತಿರುಪತಿ ದೇವಾಲಯದಲ್ಲಿ ಹುಂಡಿ ಎಣಿಕೆ ವೇಳೆ ಹಣದ ಬಂಡಲ್ ಎಗರಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಮಾಲೂರು ತಾಲೂಕಿನ ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯದ ಸಿಬ್ಬಂದಿಯೇ ಹಣ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಜುಲೈ 2019 ರಂದು ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿತ್ತು. ಆಗ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನರಸಿಂಹಯ್ಯ ಮತ್ತು ಆತನ ಸಹಾಯಕರು ಹುಂಡಿ ಎಣಿಕೆ ವೇಳೆ ಎರಡು ಬಂಡಲ್ ಹಣ ತೆಗೆದುಕೊಂಡು ಹೋಗಿದ್ದಾರೆ. ಹಣ ತೆಗೆದುಕೊಂಡು ಹೋಗುವ ಮುನ್ನ ವಿಡಿಯೋ ಕ್ಯಾಮರಾ ಮರೆಮಾಚಿರುವ […]
ಕೋಲಾರ: ಜಿಲ್ಲೆಯ ಪ್ರಸಿದ್ಧ ಚಿಕ್ಕತಿರುಪತಿ ದೇವಾಲಯದಲ್ಲಿ ಹುಂಡಿ ಎಣಿಕೆ ವೇಳೆ ಹಣದ ಬಂಡಲ್ ಎಗರಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಮಾಲೂರು ತಾಲೂಕಿನ ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯದ ಸಿಬ್ಬಂದಿಯೇ ಹಣ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಜುಲೈ 2019 ರಂದು ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿತ್ತು. ಆಗ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನರಸಿಂಹಯ್ಯ ಮತ್ತು ಆತನ ಸಹಾಯಕರು ಹುಂಡಿ ಎಣಿಕೆ ವೇಳೆ ಎರಡು ಬಂಡಲ್ ಹಣ ತೆಗೆದುಕೊಂಡು ಹೋಗಿದ್ದಾರೆ. ಹಣ ತೆಗೆದುಕೊಂಡು ಹೋಗುವ ಮುನ್ನ ವಿಡಿಯೋ ಕ್ಯಾಮರಾ ಮರೆಮಾಚಿರುವ ದೃಶ್ಯ ಸೆರೆಯಾಗಿದೆ. ಈ ಬಗ್ಗೆ ಅರ್ಚಕರು ಹಾಗೂ ಸಾರ್ವಜನಿಕರು ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಟಿವಿ9ಗೆ ಎಸಿ ಸೋಮಶೇಖರ್ ತಿಳಿಸಿದ್ದಾರೆ.