ಇಂದು ಮತ್ತು ನಾಳೆ ಬ್ಯಾಂಕ್ ಸೇವೆ ಸಂಪೂರ್ಣ ಸ್ಥಗಿತ
ಬೆಂಗಳೂರು: ಹಣ.. ದುಡ್ಡು.. ಮನಿ.. ಎಲ್ಲದ್ದಕ್ಕೂ ಕ್ಯಾಶ್ ಇರಲೇಬೇಕು. ದುಡ್ಡಿರಲ್ಲ ಅಂದ್ರೆ ಯಾವ ಕೆಲಸವೂ ನಡೆಯಲ್ಲ. ಕೈ ಕಾಲೂ ಆಡಲ್ಲ. ಹೌದು, ಇವತ್ತು ಹಣ ಡ್ರಾ ಮಾಡೋದಕ್ಕೆ ಎಟಿಎಂಗಳಲ್ಲಿ ಹಣ ಇರಲ್ಲ. ಬ್ಯಾಂಕ್ಗೇ ಹೋಗಿ ಹಣ ಡ್ರಾ ಮಾಡೋಣ ಅಂದ್ರೆ ಬ್ಯಾಂಕ್ಗಳಿರಲ್ಲ. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ! ಹಲವು ಬೇಡಿಗೆ ಈಡೇರಿಕೆಗೆ ಒತ್ತಾಯಿಸಿ ಆಲ್ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಇಂದಿನಿಂದ ಎರಡು ದಿನಗಳ ಕಾಲ ಬಂದ್ಗೆ ಕರೆ ನೀಡಿದೆ. ಹೀಗಾಗಿ ಇವತ್ತು ಮತ್ತು ನಾಳೆ […]
ಬೆಂಗಳೂರು: ಹಣ.. ದುಡ್ಡು.. ಮನಿ.. ಎಲ್ಲದ್ದಕ್ಕೂ ಕ್ಯಾಶ್ ಇರಲೇಬೇಕು. ದುಡ್ಡಿರಲ್ಲ ಅಂದ್ರೆ ಯಾವ ಕೆಲಸವೂ ನಡೆಯಲ್ಲ. ಕೈ ಕಾಲೂ ಆಡಲ್ಲ. ಹೌದು, ಇವತ್ತು ಹಣ ಡ್ರಾ ಮಾಡೋದಕ್ಕೆ ಎಟಿಎಂಗಳಲ್ಲಿ ಹಣ ಇರಲ್ಲ. ಬ್ಯಾಂಕ್ಗೇ ಹೋಗಿ ಹಣ ಡ್ರಾ ಮಾಡೋಣ ಅಂದ್ರೆ ಬ್ಯಾಂಕ್ಗಳಿರಲ್ಲ.
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ! ಹಲವು ಬೇಡಿಗೆ ಈಡೇರಿಕೆಗೆ ಒತ್ತಾಯಿಸಿ ಆಲ್ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಇಂದಿನಿಂದ ಎರಡು ದಿನಗಳ ಕಾಲ ಬಂದ್ಗೆ ಕರೆ ನೀಡಿದೆ. ಹೀಗಾಗಿ ಇವತ್ತು ಮತ್ತು ನಾಳೆ ಬ್ಯಾಂಕಿಂಗ್ ವಹಿವಾಟು ಬಂದ್ ಆಗಲಿದೆ. ಬ್ಯಾಂಕ್ ನೌಕರರ ಬೇಡಿಕೆಗಳು: ಕಳೆದೆರಡು ವರ್ಷಗಳಿಂದ ವೇತನ ಪರಿಷ್ಕರಣೆಯಾಗಿಲ್ಲ, 2017ರಿಂದ ವೇತನ ಹೆಚ್ಚಳವಾಗಿಲ್ಲ ಅಂತಾ ಬ್ಯಾಂಕ್ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಬ್ಯಾಂಕ್ ನೌಕರರು 5 ದಿನಗಳ ಬ್ಯಾಂಕಿಂಗ್ ಸೇವೆ ನೀಡಬೇಕು. ಪಿಂಚಣಿ ಪರಿಷ್ಕರಣೆ ಮಾಡಬೇಕು. ಅಧಿಕಾರಿಗಳ ಕೆಲಸಕ್ಕೆ ನಿಗದಿತ ಅವಧಿ ನೀಡಬೇಕು ಎಂಬಿತ್ಯಾದಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಇಂದಿನ ಮುಷ್ಕರದಲ್ಲಿ AIBEA , NCBE, INBOC, BEFI, NOBW, ಸೇರಿದಂತೆ ಹಲವು ಬ್ಯಾಂಕ್ ನೌಕರರ ಸಂಘಟನೆಗಳು ಭಾಗಿಯಾಗಲಿವೆ.
ಪ್ರಮುಖ 12 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ಮತ್ತು ಫೆಬ್ರವರಿ 1 ರಂದು ಬ್ಯಾಂಕ್ ಬಂದ್ ಇರಲಿದೆ. ಇನ್ನು ಫೆ.2 ಭಾನುವಾರವಾಗಿರೋದ್ರಿಂದ ಮೂರು ದಿನ ಸರಣಿ ರಜೆ ಇದ್ದು, ಬ್ಯಾಂಕ್ ಸೇವೆ ಇರಲ್ಲ. ಆದ್ರೆ, ಕೆಲವೆಡೆ ಎಟಿಎಂ ಸೇವೆ ಮತ್ತು ಎಂದಿನಂತೆ ಆನ್ಲೈನ್ ಸೇವೆ ಇರಲಿದೆಯಂತೆ. ಆದ್ರೆ, 2ದಿನಗಳಲ್ಲೇ ಎಟಿಎಮ್ ಹಣ ಕೂಡಾ ಖಾಲಿಯಾಗೋದ್ರಿಂದ ರವಿವಾರ ಎಟಿಎಮ್ಗಳಲ್ಲೂ ಹಣದ ಸಮಸ್ಯೆ ಎದುರಾಗೋ ಸಾಧ್ಯತೆಗಳಿವೆ. ಬ್ಯಾಂಕ್ ಕರೆ ನೀಡಿರೋ ಮುಷ್ಕರದ ಬಗ್ಗೆ ಸಾರ್ವಜನಿಕರು ಬೇಸರ ಹೊರ ಹಾಕ್ತಾರೆ.
ಒಟ್ನಲ್ಲಿ ಬ್ಯಾಂಕಿಂಗ್ ಕ್ಷೇತ್ರದ ನೌಕರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ಇಂದು ಬ್ಯಾಂಕ್ ಸಂಪೂರ್ಣವಾಗಿ ಬಂದ್ ಆಗಲಿದೆ. ಹೀಗಾಗಿ, ಸಾರ್ವಜನಿಕರಿಗೆ ಬ್ಯಾಂಕ್ ಬಂದ್ ಬಿಸಿ ತಟ್ಟೋದು ಪಕ್ಕಾ.
Published On - 7:26 am, Fri, 31 January 20