ಮೃತ ರೈತನ ಹೆಸರಲ್ಲಿ ಸಾಲಮನ್ನಾ! ಬ್ಯಾಂಕ್ ಅಧಿಕಾರಿಯಿಂದ ಹಣ ದುರುಪಯೋಗ?
ಮೈಸೂರು: ಮೃತ ರೈತನ ಹೆಸರಿನಲ್ಲಿ 2 ಬಾರಿ ಬೆಳೆ ಸಾಲ ಮತ್ತು 2 ಬಾರಿ ಸಾಲಮನ್ನಾ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿರುದ್ಧ ಬ್ಯಾಂಕ್‌ನ ಹಣ ದುರುಪಯೋಗಪಡಿಸಿಕೊಂಡ ಆರೋಪ ಕೇಳಿ ಬಂದಿದೆ. ಕಾರ್ಯನಿರ್ವಹಣಾಧಿಕಾರಿ ಸಿದ್ದೇಗೌಡ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಮೃತ ರೈತನ ಹೆಸರಿನಲ್ಲಿ ವಂಚನೆ ಮಾಡಿದ್ದಾನೆ. 2017-18ರ ಆಡಿಟ್ ರಿಪೋರ್ಟ್‌ನಲ್ಲಿ ಅವ್ಯವಹಾರ ಬೆಳಕಿಗೆ ಬಂದಿದೆ. ಸಂಘದ ಕೆಲ ನಿರ್ದೇಶಕರು ಮತ್ತು ಸ್ಥಳೀಯರಿಂದ ಸಿದ್ದೇಗೌಡನ […]
ಮೈಸೂರು: ಮೃತ ರೈತನ ಹೆಸರಿನಲ್ಲಿ 2 ಬಾರಿ ಬೆಳೆ ಸಾಲ ಮತ್ತು 2 ಬಾರಿ ಸಾಲಮನ್ನಾ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿರುದ್ಧ ಬ್ಯಾಂಕ್‌ನ ಹಣ ದುರುಪಯೋಗಪಡಿಸಿಕೊಂಡ ಆರೋಪ ಕೇಳಿ ಬಂದಿದೆ.
ಕಾರ್ಯನಿರ್ವಹಣಾಧಿಕಾರಿ ಸಿದ್ದೇಗೌಡ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಮೃತ ರೈತನ ಹೆಸರಿನಲ್ಲಿ ವಂಚನೆ ಮಾಡಿದ್ದಾನೆ. 2017-18ರ ಆಡಿಟ್ ರಿಪೋರ್ಟ್‌ನಲ್ಲಿ ಅವ್ಯವಹಾರ ಬೆಳಕಿಗೆ ಬಂದಿದೆ. ಸಂಘದ ಕೆಲ ನಿರ್ದೇಶಕರು ಮತ್ತು ಸ್ಥಳೀಯರಿಂದ ಸಿದ್ದೇಗೌಡನ ಅವ್ಯವಹಾರದ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಬ್ಯಾಂಕ್‌ನಿಂದ ರೈತರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ, 1,258 ರೈತರಿಗೆ ಹಣ ನೀಡಿರುವುದಾಗಿ ಉಲ್ಲೇಖ ಮಾಡಲಾಗಿತ್ತು. 130 ರೈತರಿಗೆ 2 ಬಾರಿ ಸಾಲ ನೀಡಿದ್ದಾರೆ ಎಂಬ ಆರೋಪ ಮತ್ತು ಮೃತ ರೈತನ ಹೆಸರಿನಲ್ಲೂ ಸಾಲ ಮಂಜೂರು ಮಾಡಿರುವ ಆರೋಪ ಸಿದ್ದೇಗೌಡನ ಮೇಲಿದೆ. ದೊಡ್ಡೇಗೌಡ ಬಿನ್ ಸಿದ್ದೇಗೌಡ ಹೆಸರಿನಲ್ಲಿ ದಾಖಲೆ ಸೃಷ್ಟಿ ಮಾಡಲಾಗಿದೆ.
ದೊಡ್ಡೇಗೌಡ 2017ರ ಫೆಬ್ರವರಿಯಲ್ಲಿ ಮೃತಪಟ್ಟಿದ್ದಾರೆ. ದೊಡ್ಡೇಗೌಡನಿಗೆ 2017ರ ಜೂನ್‌ನಲ್ಲಿ ಸಾಲ ಮಂಜೂರು ಮಾಡಿ ಬಳಿಕ 2018ರ ಮೇ ತಿಂಗಳಿನಲ್ಲಿ ದೊಡ್ಡೇಗೌಡನ ಸಾಲಮನ್ನಾ ಮಾಡಲಾಗಿದೆ. ಸ್ಥಳೀಯ ವ್ಯಕ್ತಿ ತೇಜಸ್ವಿ ವಿ.ಹೆಚ್ ಗೌಡ ದಾಖಲೆಗಳ ಸಮೇತ ಸಿದ್ದೇಗೌಡನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ದೂರು ಆಧರಿಸಿ ತನಿಖೆ ನಡೆಸಿ ವರದಿ ನೀಡುವಂತೆ ಅಪೆಕ್ಸ್ ಬ್ಯಾಂಕ್, ನಬಾರ್ಡ್‌ನಿಂದ ಡಿಸಿಸಿ ಬ್ಯಾಂಕ್‌ಗೆ ಸೂಚನೆ ನೀಡಲಾಗಿದೆ.
Published On - 10:21 am, Fri, 31 January 20