ಕೊನೆಗೂ ಉದ್ಘಾಟನೆ ಆಯ್ತು 10 ವರ್ಷದ ಪಂಪ್ವೆಲ್ ಫ್ಲೈಓವರ್
ಮಂಗಳೂರು: ಕೊನೆಗೂ ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ಬಳಿಯ ಫ್ಲೈಓವರ್ಗೆ ಉದ್ಘಾಟನೆಯ ಭಾಗ್ಯ ಸಿಕ್ಕಿದೆ. 10 ವರ್ಷದ ಬಳಿಕ ಕಾಮಗಾರಿ ಕಾರ್ಯ ಪೂರ್ಣಗೊಂಡಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಕೆಲ ಶಾಸಕರು ಸೇರಿ ಫ್ಲೈಓವರ್ ಉದ್ಘಾಟನೆ ಮಾಡಿದ್ದಾರೆ. ಇಂದಿನಿಂದ ಸಾರ್ವಜನಿಕರ ಸಂಚಾರಕ್ಕೆ ಫ್ಲೈಓವರ್ ಸಿದ್ಧವಾಗಿ ನಿಂತಿದೆ. 2010ರಲ್ಲಿ ಆರಂಭಗೊಂಡಿದ್ದ 600 ಮೀ. ಉದ್ದದ ಫ್ಲೈಓವರ್ ಕಾಮಗಾರಿ 2013ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ನವಯುಗ ಗುತ್ತಿಗೆ ಕಂಪನಿ 10 ವರ್ಷವಾದರೂ ಪೂರ್ಣಗೊಳ್ಳದೆ ಹತ್ತಾರು […]
ಮಂಗಳೂರು: ಕೊನೆಗೂ ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ಬಳಿಯ ಫ್ಲೈಓವರ್ಗೆ ಉದ್ಘಾಟನೆಯ ಭಾಗ್ಯ ಸಿಕ್ಕಿದೆ. 10 ವರ್ಷದ ಬಳಿಕ ಕಾಮಗಾರಿ ಕಾರ್ಯ ಪೂರ್ಣಗೊಂಡಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಕೆಲ ಶಾಸಕರು ಸೇರಿ ಫ್ಲೈಓವರ್ ಉದ್ಘಾಟನೆ ಮಾಡಿದ್ದಾರೆ.
ಇಂದಿನಿಂದ ಸಾರ್ವಜನಿಕರ ಸಂಚಾರಕ್ಕೆ ಫ್ಲೈಓವರ್ ಸಿದ್ಧವಾಗಿ ನಿಂತಿದೆ. 2010ರಲ್ಲಿ ಆರಂಭಗೊಂಡಿದ್ದ 600 ಮೀ. ಉದ್ದದ ಫ್ಲೈಓವರ್ ಕಾಮಗಾರಿ 2013ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ನವಯುಗ ಗುತ್ತಿಗೆ ಕಂಪನಿ 10 ವರ್ಷವಾದರೂ ಪೂರ್ಣಗೊಳ್ಳದೆ ಹತ್ತಾರು ಡೆಡ್ ಲೈನನ್ನ ಮೀರಿದೆ. ಈ ಫ್ಲೈ ಓವರ್ ನಿಧಾನಗತಿ ಕಾಮಗಾರಿಯಿಂದ ಹೆಚ್ಚಿನ ಕುಖ್ಯಾತಿಯನ್ನು ಪಡೆದಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಸದ ನಳಿನ್ ಕುಮಾರ್ ವಿರುದ್ಧ ಟ್ರೋಲ್ ಮಾಡಲಾಗಿತ್ತು.
ಫ್ಲೈಓವರ್ ವಿಳಂಬವಾಗಲು ಕಾಂಗ್ರೆಸ್ ಕಾರಣ: ಸಂಸದ ನಳಿನ್ ಕುಮಾರ್ ಪಂಪ್ವೆಲ್ ಫ್ಲೈಓವರ್ ಉದ್ಘಾಟನೆ ಮಾಡಿದ್ದು, ಪಂಪ್ವೆಲ್ ಕಾಮಗಾರಿ ವಿಳಂಭಕ್ಕೆ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ. ನಾನು ಬಂದ ಮೇಲೆ ಅನೇಕ ಕಡೆ ಹೆದ್ದಾರಿ ಕಾಮಗಾರಿ ವೇಗ ಪಡೆದಿದೆ. ನಾನು ಲೋಕಸಭಾ ಸದಸ್ಯನಾಗಿ ನನಗೆ ಬಹಳ ಜವಾಬ್ದಾರಿ ಇದೆ. ನಾವು ಚಿಲ್ಲರೆ ಪ್ರಚಾರಕ್ಕೆ ಕಾಂಗ್ರೆಸ್ನಂತೆ ರಾಜಕೀಯಕ್ಕೆ ಬಂದವರಲ್ಲ. 2010ಕ್ಕೆ ಪಂಪ್ ವೆಲ್ ಕಾಮಗಾರಿ ನಡೆಸಲು ಅನುಮತಿ ಸಿಕ್ಕಿತು. ಈ ಹಿಂದೆ ಇದ್ದ ಕಲಶ ತೆರವಿಗೆ ಅಂದು ಪಾಲಿಕೆ ಆಡಳಿತದಲ್ಲಿದ್ದವರು ಕಾರಣ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಕಲಶ ತೆರವಿಗೆ ವಿರೋಧ ಇತ್ತು. 2016ರಲ್ಲಿ ಕಲಶ ತೆರವುಗೊಂಡ ಬಳಿಕ ಕಾಮಗಾರಿ ಆರಂಭವಾಗಿತ್ತು. ನವಯುಗ್ ಸಂಸ್ಥೆಗೆ ಹಣಕಾಸಿನ ಮುಗ್ಗಟ್ಟಿನಿಂದ ಕಾಮಗಾರಿ ವಿಳಂಬವಾಗಿತ್ತು. ಉಳಿದಂತೆ ಕಾಮಗಾರಿ ವಿಳಂಬವಾಗಲು ನೇರವಾಗಿ ಕಾಂಗ್ರೆಸ್ ಕಾರಣ. ಟೋಲ್ ಗೇಟ್ಗೆ ಅನುಮತಿ ಕೊಟ್ಟಿದ್ದು ಮನಮೋಹನ್ ಸಿಂಗ್ ಸರ್ಕಾರ. ಈಗ ಕಾಂಗ್ರೆಸ್ನಿಂದ ಪಂಪ್ವೆಲ್ ಫ್ಲೈಒವರ್ ವಿಚಾರದಲ್ಲಿ ನಾಟಕ ಮಾಡುತ್ತಿದೆ. ಶಾಸಕ ಯು.ಟಿ.ಖಾದರ್,ಪರಿಷತ್ ಸದಸ್ಯ ಐವಾನ್ ಡಿಸೋಜಾ, ಮಾಜಿ ಶಾಸಕ ಲೋಬೋ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಮೇಲು ನಳಿನ್ ಕುಮಾರ್ ಹಲವು ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ನಾನು ಅತಿಯಾಗಿ ನಂಬುವ ದೇವರು ಕಟೀಲು ದುರ್ಗಾಪರಮೇಶ್ವರಿ. ಆ ದೇವರ ಬ್ರಹ್ಮಕಲಶದ ಮರುದಿನವೇ ಫ್ಲೈ ಓವರ್ ಉದ್ಘಾಟನೆ ಆಗಿದೆ. ಅದು ನಾನು ನಂಬಿರುವ ಆ ಕಟೀಲು ದೇವಿಯ ಇಚ್ಚೆಯಂತೆ ಆಗಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
Published On - 12:13 pm, Fri, 31 January 20