ಬೆಂಗಳೂರು: ಒಂದೆರಡು ಗಂಟೆ ಕರೆಂಟ್ ಇಲ್ಲದಿದ್ದರೂ ಬೆಂಗಳೂರಿನಲ್ಲಿ ಅಲ್ಲೋಲಕಲ್ಲೋಲವಾಗಿಬಿಡುತ್ತದೆ. ಈಗಂತೂ ಕಾರ್ಖಾನೆಗಳು ಮತ್ತೆ ಆರಂಭವಾಗಿದ್ದು, ಲಾಕ್ಡೌನ್ಗೂ ಮೊದಲಿನಂತೆ ಕೆಲಸಗಳು ನಡೆಯುತ್ತಿವೆ. ಸಾಫ್ಟ್ವೇರ್ ಮುಂತಾದ ಬೇರೆ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಲಾಗಿದೆ. ಇದರಿಂದ ವಿದ್ಯುತ್ ಇಲ್ಲದಿದ್ದರೆ ಬೆಂಗಳೂರಿನ ಜನರಿಗೆ ಬಹಳ ಕಷ್ಟವಾಗುತ್ತದೆ. ಆದರೆ, ಈ ಏರಿಯಾಗಳಲ್ಲಿ ಇಂದು ಬೆಳಗ್ಗೆಯಿಂದ ಸಂಜೆಯವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾದರೆ, ಪವರ್ ಕಟ್ (Power Cut) ಇರುವ ಏರಿಯಾಗಳು ಯಾವುವು? ಪೂರ್ಣ ಪಟ್ಟಿ ಇಲ್ಲಿದೆ…
ಬೆಂಗಳೂರಿನ ಜಯನಗರ ಉಪವಿಭಾಗದ ಅಡಿಯಲ್ಲಿ ಬರುವ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ. ಜಯನಗರ, ಪದ್ಮನಾಭನಗರ, ಕತ್ರಿಗುಪ್ಪೆ, ಬನಶಂಕರಿ, ಮಾರತ್ತಹಳ್ಳಿ ಮುಂತಾದ ಕಡೆಗಳಲ್ಲಿ ಇಂದು ಸಂಜೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.
S2: ಸಬ್-ಡಿವಿಶನ್, ಬಿಎಂಟಿಸಿ, ಸುಧಾಮನಗರ, ಸಿದ್ದಯ್ಯ ರಸ್ತೆ ಭಾಗಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 6.30 ರವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.
S6: ಎಲಿಟಾ, ಅಷ್ಟಲಕ್ಷ್ಮಿ ಲೇಔಟ್, ಪುಟ್ಟೇನಹಳ್ಳಿ, ಕೆ.ಆರ್. ಲೇಔಟ್ ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ 6.30ರವರೆಗೆ ಕರೆಂಟ್ ಇರೋದಿಲ್ಲ.
S9: ಪದ್ಮನಾಭನಗರ, ಎಸ್9 ಕಚೇರಿ, ರಿಂಗ್ ರೋಡ್, 27ನೇ ಮುಖ್ಯರಸ್ತೆ, ಯಾರಬ್ನಗರ ಮುಖ್ಯ ರಸ್ತೆ, ಮಸ್ಜೀದ್ ರಸ್ತೆ, ಬಿಎಸ್ಎನ್ಎಲ್ ಕಚೇರಿ, ಸರ್ಕಾರಿ ಆಸ್ಪತ್ರೆ, ಎನ್ಪಿಟಿಐ ಸರ್ಕಲ್, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರೇ,
ಪೂರ್ವ ನಿಗದಿತ ವಿದ್ಯುತ್ ಅಡಚಣೆ
16 ನೇ ಇ ಕ್ರಾಸ್, ಪೈ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು
ಇರುವುದಿಲ್ಲ.ಅಂದಾಜು ಪುನಃಸ್ಥಾಪನೆ ಸಮಯ: 16:30 ಗಂಟೆ 19.07.2021
ಅನಾನುಕೂಲತೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಯನ್ನು ಸಂಪರ್ಕಿಸಿ.
— Namma BESCOM (ನಮ್ಮ ಬೆಸ್ಕಾಂ) (@NammaBESCOM) July 19, 2021
S15: ಬನಶಂಕರಿ, ಕತ್ರಿಗುಪ್ಪೆ ಮುಖ್ಯ ರಸ್ತೆ ಮತ್ತು ಕತ್ರಿಗುಪ್ಪೆ ಗ್ರಾಮ, 100 ಅಡಿ ರಿಂಗ್ ರೋಡ್ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ.
S18: ಅರೇಹಳ್ಳಿ MUSS, ಬೃಂದಾವನ ಲೇಔಟ್ ಪ್ರದೇಶಗಳಲ್ಲಿ ಬೆಳಗ್ಗೆ 9.10ರಿಂದ ಮಧ್ಯಾಹ್ನ 3 ಗಂಟೆವರೆಗೆ ಕರೆಂಟ್ ಇರುವುದಿಲ್ಲ.
ಗ್ರಾಹಕರೇ,
ಪೂರ್ವ ನಿಗದಿತ ವಿದ್ಯುತ್ ಅಡಚಣೆ
100 ಫೀಟ್ ರಿಂಗ್ ರೋಡ್, ಕತ್ರಿಗುಪ್ಪೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು
ಇರುವುದಿಲ್ಲ.ಅಂದಾಜು ಪುನಃಸ್ಥಾಪನೆ ಸಮಯ: 17:30 ಗಂಟೆ 19.07.2021
ಅನಾನುಕೂಲತೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಯನ್ನು ಸಂಪರ್ಕಿಸಿ.
— Namma BESCOM (ನಮ್ಮ ಬೆಸ್ಕಾಂ) (@NammaBESCOM) July 19, 2021
S18: ಸುಬ್ರಹ್ಮಣ್ಯಪುರ MUSS, ತುರಹಳ್ಳಿ ಪ್ರದೇಶಗಳಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಜಯನಗರ ಉಪವಿಭಾಗದಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಕಳೆದೊಂದು ವಾರದಿಂದ ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.
Dear Consumers,
No power supply in Kalidasa layout,Raghavendra Layout, Avalahalli and surrounding areas.
Approximate restoration: 10:00 Hrs 19.07.2021.
Inconvenience regretted.
Contact Bescom Helpline for more details.
— Namma BESCOM (ನಮ್ಮ ಬೆಸ್ಕಾಂ) (@NammaBESCOM) July 19, 2021
ಇದನ್ನೂ ಓದಿ: Bengaluru News: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಜುಲೈ 17ರವರೆಗೆ ಕರೆಂಟ್ ಇರೋದಿಲ್ಲ
ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಮುಂದುವರೆದ ಮಳೆಯ ಆರ್ಭಟ; ಹಲವೆಡೆ ಆರೆಂಜ್ ಅಲರ್ಟ್
(BESCOM announces No power Supply in these areas of Bangalore today Full List is here)
Published On - 11:12 am, Mon, 19 July 21