ಬಾರ್ ಮಾಲೀಕನಿಂದಲೇ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ, ಇಬ್ಬರು ಪೊಲೀಸ್ ಬಲೆಗೆ

|

Updated on: Apr 28, 2020 | 10:13 AM

ಆನೇಕಲ್: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದ್ದು, ಅಕ್ರಮವಾಗಿ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೊಮ್ಮಸಂದ್ರದಲ್ಲಿ ನಡೆದಿದೆ. ತನ್ನ ಬಾರ್​ನಲ್ಲಿಯೇ ಮದ್ಯ ಕದ್ದು ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಾರ್ ಮಾಲೀಕ ಶ್ರೀನಿವಾಸ್ ಹಾಗೂ ಅವನ ಸ್ನೇಹಿತ ಶಾಮುಲುನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಲಕ್ಷೀಶ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ತನ್ನ ಬಾರ್​ನಲ್ಲೇ ಮದ್ಯ ಕದ್ದು, ತನ್ನ ಸ್ನೇಹಿತ ಶಾಮುಲು ಜೊತೆ ಸೇರಿ ಮುನಿರೆಡ್ಡಿ ಲೇಔಟ್​ನಲ್ಲಿರುವ […]

ಬಾರ್ ಮಾಲೀಕನಿಂದಲೇ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ, ಇಬ್ಬರು ಪೊಲೀಸ್ ಬಲೆಗೆ
Follow us on

ಆನೇಕಲ್: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದ್ದು, ಅಕ್ರಮವಾಗಿ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೊಮ್ಮಸಂದ್ರದಲ್ಲಿ ನಡೆದಿದೆ.

ತನ್ನ ಬಾರ್​ನಲ್ಲಿಯೇ ಮದ್ಯ ಕದ್ದು ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಾರ್ ಮಾಲೀಕ ಶ್ರೀನಿವಾಸ್ ಹಾಗೂ ಅವನ ಸ್ನೇಹಿತ ಶಾಮುಲುನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಲಕ್ಷೀಶ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ತನ್ನ ಬಾರ್​ನಲ್ಲೇ ಮದ್ಯ ಕದ್ದು, ತನ್ನ ಸ್ನೇಹಿತ ಶಾಮುಲು ಜೊತೆ ಸೇರಿ ಮುನಿರೆಡ್ಡಿ ಲೇಔಟ್​ನಲ್ಲಿರುವ ತನ್ನ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ. ಹಗಲು ರಾತ್ರಿ‌ ಎನ್ನದೆ ಡಬಲ್ ರೇಟ್​ಗೆ ಮದ್ಯ ಮಾರಾಟ ಮಾಡಿ ಸುಲಿಗೆ ಮಾಡುತ್ತಿದ್ದ.

ಇಂದು ಬೆಳಗಿನ ಜಾವ‌ ನಾಲ್ಕು ಘಂಟೆಯ ಸುಮಾರಿಗೆ ಮದ್ಯ ಮಾರಾಟ‌ ಮಾಡುತ್ತಿದ್ದ ವೇಳೆ ಶ್ರೀನಿವಾಸ್ ಮತ್ತು ಆತನ ಸ್ನೇಹಿತ ಶಾಮುಲು ಪೊಲೀಸರ ಬಲೆಗೆ‌ ಬಿದ್ದಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 20 ಕೇಸ್​ನಷ್ಟು ಮದ್ಯ ವಶಕ್ಕೆ ಪಡೆದಿದ್ದಾರೆ.