ದೇವನಹಳ್ಳಿ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಮದುವೆಗೆ ಸಿದ್ಧತೆ ನಡೆಸಿದ್ದಾರೆಂದು ಆರೋಪಿಸಿ ಯಲಹಂಕ ಬಳಿಯ ರಮಡಾ ರೆಸಾರ್ಟ್‌ಗೆ ಮಧ್ಯರಾತ್ರಿ ಸ್ಥಳೀಯರು ಮತ್ತಿಗೆ ಹಾಕಿರುವ ಘಟನೆ ನಡೆದಿದೆ. ಮದುವೆಗಾಗಿ ರೆಸಾರ್ಟ್‌ಗೆ ಕಾರುಗಳಲ್ಲಿ ಜನರು ಆಗಮಿಸಿದ್ದರು. ವಿಚಾರ ತಿಳಿದ ತಕ್ಷಣ ಸ್ಥಳೀಯರು ಮತ್ತಿಗೆ ಹಾಕಿ ಮದುವೆ ನಿಲ್ಲಿಸಿದ್ದಾರೆ.
ಈ ವೇಳೆ ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬರು ಗ್ರಾಮಸ್ಥರ ಮೇಲೆ ಕಾರು ಹತ್ತಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಆಗ ಕಾರಿನ ಗ್ಲಾಸ್ ಅನ್ನು ಗ್ರಾಮಸ್ಥರು ಪುಡಿ ಪುಡಿ ಮಾಡಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
Published On - 12:04 pm, Wed, 22 April 20