ಮೈಮೇಲೆ ದೇವರು ಬಂದಿದೆ ಎಂದ ಮಹಿಳೆಯಿಂದ ಹೈಡ್ರಾಮಾ, ಬಿತ್ತು ಲಾಕ್‌ಡೌನ್ ಕೇಸ್

ಮೈಮೇಲೆ ದೇವರು ಬಂದಿದೆ ಎಂದ ಮಹಿಳೆಯಿಂದ ಹೈಡ್ರಾಮಾ, ಬಿತ್ತು ಲಾಕ್‌ಡೌನ್ ಕೇಸ್

ಯಾದಗಿರಿ: ಮಹಿಳೆಯೊಬ್ಬಳು ಮೈಮೇಲೆ ದೇವರು ಬಂದಿದೆ ಎಂದು ಜನರನ್ನ ಸೇರಿಸಿ ಲಾಕ್‌ಡೌನ್ ಆದೇಶ ಉಲ್ಲಂಘನೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ನಸಲವಾಯಿ ಗ್ರಾಮದಲ್ಲಿ ನಡೆದಿದೆ. ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಇಡೀ ದೇಶವನ್ನು ಲಾಕ್‌ಡೌನ್‌ ಮಾಡಲಾಗಿದೆ.

ಹೀಗಾಗಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುವಂತಹ ಯಾವುದೇ ಕಾರ್ಯಕ್ರಮವನ್ನು ಮಾಡಬಾರದು ಎಂಬ ಆದೇಶವಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಈರಮ್ಮದೇವಿ ಜಾತ್ರೆ ರದ್ದು ಮಾಡಲಾಗಿತ್ತು. ಹೀಗಾಗಿ ಡ್ರಾಮ ಶುರು ಮಾಡಿದ ನಾಗಮ್ಮ. ಗ್ರಾಮಸ್ಥರು ಜಾತ್ರೆ ಮಾಡದಿದ್ದರಿಂದ ಈರಮ್ಮದೇವಿ ಬಂದಿದ್ದಾಳೆ.

ದೇವಿ ಮೈಮೇಲೆ ಬಂದಿದ್ದಾಳೆಂದು ಜನರನ್ನು ಸೇರಿಸಿದ್ದಾಳೆ. ನಿನ್ನೆ ರಾತ್ರಿ ದೇಗುಲದ ಪಕ್ಕದಲ್ಲಿ ಜನರನ್ನು ಸೇರಿಸಿ ಹೈಡ್ರಾಮಾ ಮಾಡಿದ್ದಾಳೆ. ಮಣ್ಣಲ್ಲಿ ಮೊದಲೇ ಪುಸ್ತಕ, ಮೂರ್ತಿ ಹೂತಿಟ್ಟು, ಪವಾಡವೆಂಬಂತೆ ಜನರ ಬಳಿಯಿಂದಲೇ ಮೂರ್ತಿ, ಪುಸ್ತಕ ಅಗೆದು ತೆಗೆಸಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಗುರುಮಠಕಲ್ ಠಾಣೆಯಲ್ಲಿ ನಾಗಮ್ಮ ಸೇರಿ ಗ್ರಾಮದ 20 ಜನರ ವಿರುದ್ಧ ಲಾಕ್‌ಡೌನ್ ಉಲ್ಲಂಘನೆ ಕೇಸ್ ದಾಖಲಾಗಿದೆ.

Published On - 10:28 am, Wed, 22 April 20

Click on your DTH Provider to Add TV9 Kannada