ಪಾದರಾಯನಪುರ ಶಂಕಿತರು ಶಾಸಕ ಜಮೀರ್ ಮುಂದಿಟ್ಟ ಬೇಡಿಕೆ ಏನು ಗೊತ್ತಾ?

ಪಾದರಾಯನಪುರ ಶಂಕಿತರು ಶಾಸಕ ಜಮೀರ್  ಮುಂದಿಟ್ಟ ಬೇಡಿಕೆ ಏನು ಗೊತ್ತಾ?

ಬೆಂಗಳೂರು: ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಹೋಟೆಲ್​ ಕ್ವಾರಂಟೈನ್​​ನಲ್ಲಿರುವ ಪಾದರಾಯನಪುರದ ಸೆಕೆಂಡರಿ ಕಾಂಟ್ಯಾಕ್ಟ್​​ಗಳು ಹೋಟೆಲ್​ ಕ್ವಾರಂಟೈನ್​ನಿಂದ ಹಜ್ ಭವನಕ್ಕೆ ಶಿಫ್ಟ್​ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಪಾದರಾಯನಪುರದ 58 ಸೆಕೆಂಡರಿ ಕಾಂಟ್ಯಾಕ್ಟ್​​ಗಳು ನಮಗೆ ಹೋಟೆಲ್ ಬೇಡ ಹಜ್​​ಭವನಕ್ಕೆ ಶಿಫ್ಟ್ ಮಾಡಿ ಎಂದು ಶಾಸಕ ಜಮೀರ್ ಅಹ್ಮದ್ ಬಳಿ ಮನವಿ ಮಾಡಿಕೊಂಡಿದ್ದಾರೆ.

ಹೋಟೆಲ್ ಕ್ವಾರಂಟೈನ್​​ನಲ್ಲಿರುವವರನ್ನು ಜಮೀರ್ ಅಹ್ಮದ್ ಭೇಟಿಯಾಗಿದ್ದರು ಈ ವೇಳೆ ಈ ರೀತಿಯ ಬೇಡಿಕೆಯನ್ನಿಟ್ಟಿದ್ದಾರೆ. ಈ ಬೇಡಿಕೆಯ ಕುರಿತು ಆಲೋಚನೆ ಮಾಡುವಂತೆ ಅಧಿಕಾರಿಗಳಿಗೆ ಜಮೀರ್‌ ಸೂಚನೆ ನೀಡಿದ್ದಾರೆ.

ಇವರಿಗೆ ವೆಜ್ ಊಟ ಬೇಡ್ವಂತೆ.. ನಾನ್​ವೆಜ್ ಊಟವೇ ಬೇಕಂತೆ..! ಕ್ವಾರಂಟೈನ್​​ನಲ್ಲಿರುವವರೆಗೂ ಕೇವಲ ಸಸ್ಯಾಹಾರಿ ಊಟ ಮಾತ್ರ ಸಿಗುತ್ತದೆ. ಆದರೆ ಪಾದರಾಯನಪುರದ ಶಂಕಿತರು ಮಾಂಸಹಾರಿ ಪ್ರಿಯರು ಅವರಿಗೆ ಬಿರಿಯಾನಿನೇ ಬೇಕಂತೆ. ಹೀಗಾಗಿ ಹಜ್‌ಭವನಕ್ಕೆ ಸ್ಥಳಾಂತರಿಸಿದರೆ ಅಲ್ಲಿ ಬೇಕಾದ ಊಟ ಸಿಗುತ್ತದೆ. ಹೋಟೆಲ್ ಕ್ವಾರಂಟೈನ್​ನಲ್ಲಿ ಸ್ವಾತಂತ್ರ್ಯವಿಲ್ಲ. ಹಜ್‌ಭವನದಲ್ಲಿ ತಮ್ಮದೇ ಸಮುದಾಯದ ಜನ ಇರ್ತಾರೆ. ಹೀಗಾಗಿ ಹೋಟೆಲ್​​ನಿಂದ ಹಜ್​ಭವನಕ್ಕೆ ಶಿಫ್ಟ್​ ಆಗಲು ಶಂಕಿತರು ನೌಟಂಕಿ ಆಟ ಶುರು ಮಾಡಿಕೊಂಡಿದ್ದಾರೆ. https://www.facebook.com/Tv9Kannada/videos/660998017804911/

Published On - 9:15 am, Wed, 22 April 20

Click on your DTH Provider to Add TV9 Kannada