ಕೊರೊನಾ ಲಾಕ್ಡೌನ್ನಿಂದಾಗಿ ಚಿಕಿತ್ಸೆ ಸಿಗದೆ ಉಸಿರು ನಿಲ್ಲಿಸಿದ ಹಸುಗೂಸು
ಮಡಿಕೇರಿ: ಎಷ್ಟು ಕಣ್ಣೀರು ಹಾಕಿದ್ರೂ ತಣಿಯದ ನೋವು. ಹೇಳಿಕೊಳ್ಳಲಾಗದ ಸಂಕಟ. ಅಂದು ಕಿಲ ಕಿಲ ಅಂತಿದ್ದ ಇಂದಿಲ್ಲವಲ್ಲ ಅನ್ನೋ ಕೊರಗು. ದುಃಖ ಹೇಳೋಕಾಗ್ತಿಲ್ಲ. ಅಕ್ಕಪಕ್ಕದಲ್ಲೂ ಯಾರಿಲ್ಲ. ಸಮಾಧಾನ ಹೇಳಿದ್ರು ಆರದ ಗಾಯ. ಇವರ ಈ ಸಂಕಷ್ಟಕ್ಕೆ, ಕಣ್ಣೀರ ಹೊಳೆಗೆ ಕಾರಣ ಬದುಕಿಗೆ ಕೊಳ್ಳಿ ಇಟ್ಟಿರೋ ಕೊರೊನಾ. ಅದೇ ಹೆಮ್ಮಾರಿ ಕೊರೊನಾ. ಯೆಸ್.. ಕೊರೊನಾ ಅನ್ನೋ ಹೆಮ್ಮಾರಿ ಕಂಡ ಕಂಡವರನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಅದೆಷ್ಟೋ ಅಮಾಯಕ ಜೀವಗಳು ಉಸಿರು ಚೆಲ್ತಿವೆ. ಲಾಕ್ಡೌನ್ ಬೆಂಕಿಗೆ ಸಿಲುಕಿ ಎಷ್ಟೋ ಜಿವಗಳು ಬೆಂದು […]
ಮಡಿಕೇರಿ: ಎಷ್ಟು ಕಣ್ಣೀರು ಹಾಕಿದ್ರೂ ತಣಿಯದ ನೋವು. ಹೇಳಿಕೊಳ್ಳಲಾಗದ ಸಂಕಟ. ಅಂದು ಕಿಲ ಕಿಲ ಅಂತಿದ್ದ ಇಂದಿಲ್ಲವಲ್ಲ ಅನ್ನೋ ಕೊರಗು. ದುಃಖ ಹೇಳೋಕಾಗ್ತಿಲ್ಲ. ಅಕ್ಕಪಕ್ಕದಲ್ಲೂ ಯಾರಿಲ್ಲ. ಸಮಾಧಾನ ಹೇಳಿದ್ರು ಆರದ ಗಾಯ. ಇವರ ಈ ಸಂಕಷ್ಟಕ್ಕೆ, ಕಣ್ಣೀರ ಹೊಳೆಗೆ ಕಾರಣ ಬದುಕಿಗೆ ಕೊಳ್ಳಿ ಇಟ್ಟಿರೋ ಕೊರೊನಾ. ಅದೇ ಹೆಮ್ಮಾರಿ ಕೊರೊನಾ.
ಯೆಸ್.. ಕೊರೊನಾ ಅನ್ನೋ ಹೆಮ್ಮಾರಿ ಕಂಡ ಕಂಡವರನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಅದೆಷ್ಟೋ ಅಮಾಯಕ ಜೀವಗಳು ಉಸಿರು ಚೆಲ್ತಿವೆ. ಲಾಕ್ಡೌನ್ ಬೆಂಕಿಗೆ ಸಿಲುಕಿ ಎಷ್ಟೋ ಜಿವಗಳು ಬೆಂದು ಹೋಗಿದ್ರೆ, ಈ ದಂಪತಿ ಕುಟುಂಬಕ್ಕೆ ಕೊರೊನಾ ದಿಗ್ಬಂಧನ ಯಮನಾಗಿ ಕಾಡಿದೆ. ಲಾಕ್ಡೌನ್ ಅನ್ನೋ ಲಾಕಪ್ ಪುಟ್ಟ ಕಂದಮ್ಮನನ್ನೇ ಇವರಿಂದ ಕಸಿದುಕೊಂಡಿದೆ.
ಸೂಕ್ತ ಟೈಂಗೆ ಚಿಕಿತ್ಸೆ ಕೊಡಿಸಲಾಗದೆ ಹಸುಗೂಸು ಬಲಿ! ಮಡಿಕೇರಿ ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯ ಸಮೀಪದಲ್ಲಿರೋ ಉದುಗೂರು ಗ್ರಾಮದ ನಿವಾಸಿಗಳಾದ ಪ್ರಜೀಶ್ ಹಾಗೂ ಲೋಕಾಕ್ಷಿ ದಂಪತಿಗೆ 2 ತಿಂಗಳ ಹಿಂದಷ್ಟೆ ಎರಡನೇ ಗಂಡು ಮಗು ಜನಿಸಿತ್ತು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಮಗುವಿಗೆ ದಿನೇ ದಿನೇ ಆರೋಗ್ಯದಲ್ಲಿ ಕೊಂಚ ಬದಲಾವಣೆ ಆಗ್ತಾ ಬಂತು. ಬಳಿಕ ಮಗುವಿಗೆ ದಿನೇ ದಿನೆ ಉಸಿರಾಟದ ಸಮಸ್ಯೆ ಕಾಣಿಸ್ಕೊಂಡಿತ್ತು.
ಆದ್ರೆ, ಲಾಕ್ಡೌನ್ನಿಂದಾಗಿ ಮಗುವನ್ನ ಆಸ್ಪತ್ರೆ ಸೂಕ್ತ ಸಮಯಕ್ಕೆ ಕರೆದೊಯ್ಯಲಾಗದೆ ಒದ್ದಾಡಿದ್ರು. ಹಸುಗೂಸಿಗೆ ಸೂಕ್ತ ಚಿಕಿತ್ಸೆ ಸಿಗದೆ ಉಸಿರು ಚೆಲ್ಲಿದೆ. ಮುದ್ದಾದ ಮಗುವನ್ನ ಕಳೆದುಕೊಂಡು ದಂಪತಿ ಕಂಗಾಲಾಗಿದ್ದಾರೆ. ಕರುಳ ಬಳ್ಳಿಯನ್ನ ಕಳೆದ್ಕೊಂಡು ಹೆತ್ತಮ್ಮ ಕಣ್ಣೀರಿಡ್ತಿದ್ದಾಳೆ.
ಇನ್ನು, ಆಟೋ, ಕಾರು ಇರೊ ಜನರನ್ನ ಎಷ್ಟು ಬೇಡಿದ್ರೂ ಯಾರೂ ನೆರವಿಗೆ ಬಂದಿಲ್ವಂತೆ. ಉಸಿರಾಟದ ತೊಂದ್ರೆಯಿಂದ ಬಳಲುತ್ತಿದ್ದ ಮಗುವನ್ನ ಸಂಬಂಧಿಕರ ಬೈಕ್ನಲ್ಲಿ ಶುಂಟಿಕೊಪ್ಪ, ಕುಶಾಲನಗರ, ಮಡಿಕೇರಿಯಲ್ಲಿರೋ ಆಸ್ಪತ್ರೆಗಳಿಗೆಲ್ಲಾ ಕರೆದೊಯ್ದಿದ್ದಾರೆ. ಆದ್ರೆ, ವೈದ್ಯರು ಮೈಸೂರಿಗೆ ಕರ್ಕೊಂಡು ಹೋಗುವಂತೆ ಹೇಳಿದ್ರಂತೆ.
ಹೇಗೋ ಕಾರಿನ ವ್ಯವಸ್ಥೆ ಮಾಡ್ಕೊಂಡು ಮೈಸೂರು ಸೇರಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಸುಗೂಸು ಉಸಿರು ನಿಲ್ಲಿಸಿದೆ. ಪುಟ್ಟ ಕಂದಮ್ಮನನ್ನ ಕಳೆದ್ಕೊಂಡು ದಂಪತಿ ಕಂಗಾಲಾಗಿದ್ದಾರೆ.
ಒಟ್ನಲ್ಲಿ ಒಂದ್ಕಡೆ ಕ್ರೂರಿ ಕೊರೊನಾದಿಂದ ಪ್ರಾಣ ಉಳಿಸೋಕೆ ಸರ್ಕಾರ ಲಾಕ್ ಡೌನ್ ಮಾಡಿದೆ. ತುರ್ತು ಸಂದರ್ಭದಲ್ಲಿ ಯಾರಾದ್ರೂ ನೆರವು ನೀಡ್ಬೋದು. ಚಿಕಿತ್ಸೆ ಕೊಡಿಸ್ಬೋದು ಅಂತಾನೂ ಹೇಳಿದೆ. ಆದ್ರಿಲ್ಲಿ ಲಾಕ್ಡೌನ್ ಸಂಕಷ್ಟ. ಜನರ ಅಸಹಾಯಕತೆ, ನಿರ್ಲಕ್ಷ್ಯ, ಭಯಕ್ಕೆ ಮಗುವಿನ ಪ್ರಾಣವೇ ಹೋಗಿದೆ. ಯಾರಾದ್ರೂ ಸಹಾಯಕ್ಕೆ ಬಂದಿದ್ರೆ ನಿಜಕ್ಕೂ ಹಸುಗೂಸಿನ ಪ್ರಾಣ ಉಳಿಸ್ಬೋದಿತ್ತೇನೋ.