
ಹೊಸಕೋಟೆ: ಗೂಂಡಾಗಿರಿ ಮಾಡುವವರ ಹುಟ್ಟು ಅಡಗಿಸಬೇಕಾಗುತ್ತೆ ಎಂದು ಬಿಜೆಪಿ ಕಾರ್ಯಕರ್ತ ಮಂಜುನಾಥ್ ಮೇಲೆ ನಡೆದ ಹಲ್ಲೆ ಖಂಡಿಸಿ ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಹೊಸಕೋಟೆ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಗೂಂಡಾಗಿರಿ ಮಾಡುವವರಿಗೆ ಖಡಖ್ ವಾರ್ನಿಂಗ್ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದವರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಅವರು ಕೇವಲ BSYಗೆ ಬಹುಮತ ಬರಬಾರದೆಂದು ಮಾತಾಡ್ತಿದ್ದಾರೆ. ಯಾವುದೇ ಶಕ್ತಿಯೂ ಎಂಟಿಬಿಯನ್ನು ಸೋಲಿಸಲು ಸಾಧ್ಯವಿಲ್ಲ. 17 ಅನರ್ಹ ಶಾಸಕರ ಪೈಕಿ ಎಂಟಿಬಿ ಮೇಲೆ ನನಗೆ ಹೆಚ್ಚು ಪ್ರೀತಿ ಇದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.