ಮನೆಯಲ್ಲಿದ್ದವರನ್ನ ಕೂಡಿಹಾಕಿ ಉಸಿರುಗಟ್ಟಿಸಿ ವೃದ್ಧನ ಹತ್ಯೆ
ನೆಲಮಂಗಲ: ಮನೆಯಲ್ಲಿದ್ದವರನ್ನ ಕೂಡಿಹಾಕಿ ಉಸಿರುಗಟ್ಟಿಸಿ ವೃದ್ಧನ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ರೇಣುಕಾನಗರದ ಮನೆಯೊಂದರಲ್ಲಿ ನಡೆದಿದೆ. ವೃದ್ಧ ಶಫಿವುಲ್ಲಾ(60) ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ವೇಳೆ ಹೆಂಡತಿ ನಸ್ರೀನ್ ತಾಜ್ ಹಾಗೂ ಮಗಳು ಮುಷ್ಕನ್ ಮನೆಯಲ್ಲೇ ಇದ್ದರು. ಆದರೆ ಇವರಿಬ್ಬರನ್ನು ಅಡುಗೆ ಮನೆಯಲ್ಲಿ ಕೂಡಿಹಾಕಿ ವೃದ್ಧನ ಕೈಕಾಲುಗಳನ್ನ ಬಟ್ಟೆಯಿಂದ ಕಟ್ಟಿ ನಂತರ ಮುಖಕ್ಕೆ ಬಟ್ಟೆಯಿಂದ ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ. ಕೊಲೆ ಬಳಿಕ ಒಂದು ಲಕ್ಷ ನಗದು ಹಾಗೂ ಮನೆಯಲ್ಲಿದ್ದ ಆಸ್ತಿ […]
ನೆಲಮಂಗಲ: ಮನೆಯಲ್ಲಿದ್ದವರನ್ನ ಕೂಡಿಹಾಕಿ ಉಸಿರುಗಟ್ಟಿಸಿ ವೃದ್ಧನ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ರೇಣುಕಾನಗರದ ಮನೆಯೊಂದರಲ್ಲಿ ನಡೆದಿದೆ. ವೃದ್ಧ ಶಫಿವುಲ್ಲಾ(60) ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ವೇಳೆ ಹೆಂಡತಿ ನಸ್ರೀನ್ ತಾಜ್ ಹಾಗೂ ಮಗಳು ಮುಷ್ಕನ್ ಮನೆಯಲ್ಲೇ ಇದ್ದರು. ಆದರೆ ಇವರಿಬ್ಬರನ್ನು ಅಡುಗೆ ಮನೆಯಲ್ಲಿ ಕೂಡಿಹಾಕಿ ವೃದ್ಧನ ಕೈಕಾಲುಗಳನ್ನ ಬಟ್ಟೆಯಿಂದ ಕಟ್ಟಿ ನಂತರ ಮುಖಕ್ಕೆ ಬಟ್ಟೆಯಿಂದ ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ.
ಕೊಲೆ ಬಳಿಕ ಒಂದು ಲಕ್ಷ ನಗದು ಹಾಗೂ ಮನೆಯಲ್ಲಿದ್ದ ಆಸ್ತಿ ಕಾಗದ ಪತ್ರಗಳನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಆಸ್ತಿ ವಿವಾಧಕ್ಕೆ ಸಂಬಂಧಿಕರಿಂದಲೇ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ನೆಲಮಂಗಲ ವೃತ್ತ ನಿರೀಕ್ಷಿಕ ಶಿವಣ್ಣ ಹಾಗೂ ಡಿವೈಎಸ್ಪಿ ಮೋಹನ್ ಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನೆಲಮಂಗಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.