ತನ್ನದೇ ಶಾಲಾವಾಹನಕ್ಕೆ ಸಿಲುಕಿ 4 ವರ್ಷದ ಮಗು ಸಾವು
ದಾವಣಗೆರೆ: ಶಾಲಾ ವಾಹನಕ್ಕೆ ಸಿಲುಕಿ 4 ವರ್ಷದ ಮಗು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾರಥಿ ಗ್ರಾಮದಲ್ಲಿ ನಡೆದಿದೆ. 4 ವರ್ಷದ ಪುಟ್ಟ ಮಗು ಅಜಯ್ ಶಾಲಾ ವಾಹನದಿಂದ ಇಳಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಜಯ್ ಸುಣಿಗೆರೆ ಗ್ರಾಮದ ಪದ್ಮದೀಪ ಶಾಲೆಯಲ್ಲಿ ಓದುತ್ತಿದ್ದ. ಶಾಲೆ ಮುಗಿಸಿ ತನ್ನದೇ ಶಾಲೆಯ ಬಸ್ನಲ್ಲಿ ಮನೆಗೆ ತೆರಳಿದ್ದಾನೆ. ಮನೆಯ ಬಳಿ ವಾಹನದಿಂದ ಬಾಲಕ ಇಳಿಯುತ್ತಿದ್ದ ವೇಳೆ ವಾಹನ ಮುಂದಕ್ಕೆ ಚಲಿಸಿದೆ. ವಾಹನದ ಚಕ್ರಕ್ಕೆ ಸಿಲುಕಿ […]
ದಾವಣಗೆರೆ: ಶಾಲಾ ವಾಹನಕ್ಕೆ ಸಿಲುಕಿ 4 ವರ್ಷದ ಮಗು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾರಥಿ ಗ್ರಾಮದಲ್ಲಿ ನಡೆದಿದೆ. 4 ವರ್ಷದ ಪುಟ್ಟ ಮಗು ಅಜಯ್ ಶಾಲಾ ವಾಹನದಿಂದ ಇಳಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಅಜಯ್ ಸುಣಿಗೆರೆ ಗ್ರಾಮದ ಪದ್ಮದೀಪ ಶಾಲೆಯಲ್ಲಿ ಓದುತ್ತಿದ್ದ. ಶಾಲೆ ಮುಗಿಸಿ ತನ್ನದೇ ಶಾಲೆಯ ಬಸ್ನಲ್ಲಿ ಮನೆಗೆ ತೆರಳಿದ್ದಾನೆ. ಮನೆಯ ಬಳಿ ವಾಹನದಿಂದ ಬಾಲಕ ಇಳಿಯುತ್ತಿದ್ದ ವೇಳೆ ವಾಹನ ಮುಂದಕ್ಕೆ ಚಲಿಸಿದೆ.
ವಾಹನದ ಚಕ್ರಕ್ಕೆ ಸಿಲುಕಿ ಮಗು ದುರ್ಮರಣ. ಸ್ಥಳದಲ್ಲೇ ಶಾಲಾ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಪ್ರಕರಣ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Published On - 7:09 pm, Wed, 27 November 19