ಅವರೆಲ್ಲ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುವ ಹೈ ಫೈ ಮಂದಿ ಕೆಲವರು ಟೆಕ್ಕಿಗಳಾಗಿದ್ರೆ (techie) ಕೆಲವರು ವಾಯು ದಳದಲ್ಲಿರುವ ಅಧಿಕಾರಿಗಳಾಗಿದ್ದು ಏರ್ಪೋರ್ಟ್ ಸಮೀಪದಲ್ಲಿ ಲಕ್ಷ ಲಕ್ಷ ಸುರಿದು ಫ್ಲಾಟ್ (Flat) ಖರೀದಿಸಿದ್ದರು. ಆದ್ರೆ ಲಕ್ಷ ಲಕ್ಷ ಸುರಿದು ಖರೀದಿಸಿದ್ದ ಪ್ರತಿಷ್ಠಿತ ಗ್ರೂಪ್ ನಿಂದಲೆ ಇದೀಗ ನಿವಾಸಿಗಳಿಗೆ ಅನ್ಯಾಯವಾಗ್ತಿದ್ದು ಅನ್ಯಾಯದ ವಿರುದ್ದ ಹೈ ಫೈ ಮಂದಿ ಬೀದಿಗಿಳಿದು ಆಕ್ರೋಶ ಹೊರ ಹಾಕಿದ್ದಾರೆ. ನೋಡೊಕ್ಕೆ ಹೈ ಫೈಯಾಗಿರುವ ಬಾನೆತ್ತರದ ಕಟ್ಟಡಗಳು, ಪಕ್ಕದಲ್ಲೆ ಹಾದುಹೋಗಿರು ರಾಷ್ಟ್ರಿಯ ಹೆದ್ದಾರಿ ಜೊತೆಗೆ ಕೂಗಳತೆ ದೂರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣ. ಇನ್ನು ಇಷ್ಟೆಲ್ಲ ಹೈ ಫೈ ಸೌಲಭ್ಯಗಳಿದ್ದ ಮೇಲೆ ಇದರ ಬೆಲೆಯೂ ಹೆಚ್ಚಾಗಿರುವುದು ಸಹಜ. ಹೀಗಾಗಿ ಲಕ್ಷ ಲಕ್ಷ ಬಂಡಾವಳ ಹಾಕಿದ ಜನರು ಫ್ಲಾಟ್ಗಳನ್ನ ಖರೀದಿಸಿ ವಾಸ ಮಾಡ್ತಿದ್ದು ಇಂದು ಇದೇ ಪ್ರತಿಷ್ಠಿತ ಅಪಾರ್ಟ್ಮೆಂಟ್ (fraud) ವಿರುದ್ದವೇ ತಿರುಗಿಬಿದ್ದಿದ್ದು ರಸ್ತೆ ಮಧ್ಯೆ ಕುಳಿತು ಆಕ್ರೋಶ ಹೊರ ಹಾಕಿದ್ದಾರೆ.
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (devanahalli) ತಾಲೂಕಿನ ಕನ್ನಮಂಗಲ (kannamangala) ಬಳಿ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣದ ಸಮೀಪದಲ್ಲೆ ಒಜೋನ್ ಅರ್ಬನಾ ಇನ್ಫಾ ಡೆವಲಪರ್ಸ್ ಪ್ರಾಜೆಕ್ಟ್ ಮಾಡಿ ಪೆವಿಲಿಯನ್ ಹೆಸರಿನ ಅಪಾಟ್ಮೆಂಟ್ನಲ್ಲಿ ಸಾವಿರಾರು ಫ್ಲಾಟ್ಗಳನ್ನ ಮಾಡಲಾಗಿದೆ. ಜತೆಗೆ ಎರಡು ಮೂರು ಮತ್ತು ನಾಲ್ಕು ಬಿಹೆಚ್ಕೆ ಅಂತ ಹಲವು ಫ್ಲಾಟ್ಗಳನ್ನ ಮಾಡಿ ಬಿಲ್ಡರ್ಗಳು ಮಾರಾಟ ಮಾಡಿದ್ದು ಸಾಕಷ್ಟು ಜನ 40 ಲಕ್ಷದಿಂದ 80 ಲಕ್ಷದವರೆಗೂ ಬಂಡವಾಳ ಹಾಕಿ ಫ್ಲಾಟ್ ಖರೀದಿಸಿದ್ದಾರೆ.
ಆದ್ರೆ ಫ್ಲಾಟ್ ಖರೀದಿಸಿದ ಮಾಲೀಕರಿಗೆ ಬಿಲ್ಡರ್ಗಳು ಸಮರ್ಪಕ ಮೂಲ ಸೌಕರ್ಯವಾದ ನೀರು ವಿದ್ಯುತ್ ನೀಡದೆ ಹಲವು ವರ್ಷಗಳಿಂದ ವಂಚಿಸುತ್ತಿದ್ದಾರಂತೆ. ಹೀಗಾಗಿ ಪ್ರತಿನಿತ್ಯ ಸಾವಿರಾರು ಲೀಟರ್ ಡೀಸೆಲ್ ತಂದು ಜನರೇಟರ್ ಮೂಲಕ ಪ್ಲಾಟ್ಗಳಿಗೆ ವಿದ್ಯುತ್ ಕೊಡ್ತಿದ್ದು ಇತ್ತೀಚೆಗೆ ಅದನ್ನ ಕಡಿತ ಮಾಡಿದ್ದಾರಂತೆ. ಹೀಗಾಗಿ ಲಕ್ಷ ಲಕ್ಷ ಕೊಟ್ಟು ಫ್ಲಾಟ್ ಖರೀದಿಸಿದರೂ ಮೂಲಸೌಕರ್ಯ ನೀಡದೆ ಒಜೋನ್ ಗ್ರೂಪ್ ಅವರು ವಂಚಿಸಿದ್ದಾರೆ ಅಂತಾ ಸ್ಥಳೀಯರು ನಿನ್ನೆ ಭಾನುವಾರ ಒಜೋನ್ ಗ್ರೂಪ್ ನ ಮುಂಭಾಗ ಧರಣಿ ಕುಳಿತು ಆಕ್ರೋಶ ಹೊರ ಹಾಕಿದ್ರು.
2012 ರಲ್ಲಿ ಪ್ರಾಜೆಕ್ಟ್ ಆರಂಭಿಸಿ 2017 ರಲ್ಲಿ ಫ್ಲಾಟ್ಗಳನ್ನ ನೀಡಿದ್ದು ವಿದ್ಯುತ್, ನೀರು ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನ ಕೊಡುವುದಾಗಿ ಹಣವನ್ನ ನಿವಾಸಿಗಳಿಂದ ಪಡೆದುಕೊಂಡಿದ್ದಾರಂತೆ. ಜತೆಗೆ ಫ್ಲಾಟ್ ಮಾರಾಟ ಮಾಡಿರುವವರು ಖರೀದಿದಾರರಿಗೆ ಒಸಿ ಸರ್ಟಿಫಿಕೆಟ್ಗಳನ್ನ ಸಹ ಕೊಡದೆ ವಂಚಿಸುತ್ತಿದ್ದು ಪವರ್ ಕಟ್ ನಿಂದ ಮಕ್ಕಳು ವೃದ್ದರು ಪರದಾಡುವಂತಾಗಿದೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.
ಜತೆಗೆ ಕಸ ವಿಂಗಡನೆ ಘಟಕ ತ್ಯಾಜ್ಯ ನೀರು ಸಂಸ್ಕರಣ ಘಟಕ ಸಹ ಒಪನ್ ಮಾಡದೆ ಹಾಗೆಯೇ ಬಿಟ್ಟಿದ್ದು ಕೇಳಿದರೂ ಯಾರೂ ಸಹ ನಮಗೆ ಸ್ವಂದಿಸುತ್ತಿಲ್ಲ ಅಂತ ಆರೋಪಿಸಿದ್ದಾರೆ. ಇನ್ನು ವಾಸದ ಮನೆಗಳಿರುವ ಬಳಿ ಹಾಸ್ಟೆಲ್ ಸಹ ಮಾಡಿ ನಮಗೆ ಕಿರುಕುಳ ನೀಡ್ತಿದ್ದು ನಮಗೆ ನ್ಯಾಯ ಕೊಡಿಸಿ ಅಂತ ಒತ್ತಾಯಿಸಿದ್ದಾರೆ.
ಒಟ್ಟಾರೆ ಏರ್ಪೋಟ್ ಬಳಿ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ ಫ್ಲಾಟ್ ಖರೀದಿಸಿದರೆ ಎಲ್ಲ ಚೆನ್ನಾಗಿರುತ್ತೆ ಅಂತ ಕನಸಿನ ಮನೆ ಖರೀದಿಸಿದ ಟೆಕ್ಕಿಗಳಿಗೆ ಇದೀಗ ಅದೇ ಫ್ಲಾಟ್ಗಳು ತಲೆನೋವಾಗಿ ಪರಿಣಮಿಸಿದೆ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸ್ಥಳೀಯ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಿಕೊಡುವ ಕೆಲಸ ಮಾಡಬೇಕಿದೆ.
ವರದಿ: ನವೀನ್, ಟಿವಿ 9, ದೇವನಹಳ್ಳಿ