ಜಿಲ್ಲಾಧಿಕಾರಿಯ ಚಾಲಕನೆಂದು ಹೇಳಿ ಫರ್ನೀಚರ್ ಪಡೆದು ವಂಚನೆ: ಆರೋಪಿ ನರಿ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Sep 10, 2021 | 8:35 AM

ನೆಲಮಂಗಲ: ಜಿಲ್ಲಾಧಿಕಾರಿಯ (ಡಿಸಿ) ಚಾಲಕನೆಂದು ಹೇಳಿಕೊಂಡು ಫರ್ನೀಚರ್ ಪಡೆದು ವಂಚನೆ ಎಸಗಿರುವ ಕೇಸ್ ದಾಖಲಾಗಿದೆ. ವಂಚಕ ಆರೋಪಿ ಬೆಂಗಳೂರಿನ ನರೇಶ್ ಅಲಿಯಾಸ್ ನರಿನನ್ನು ಅರೆಸ್ಟ್ ಮಾಡಲಾಗಿದೆ. ಈತ 50 ಸಾವಿರ ರೂ. ಮೌಲ್ಯದ ಫರ್ನೀಚರ್ ಪಡೆದು ವಂಚನೆ ಎಸಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಶಿವಗಂಗೆ ಸರ್ಕಲ್‌ನಲ್ಲಿನ ಪೀಠೋಪಕರಣ ಅಂಗಡಿಗೆ ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಬೆಂಗಳೂರಿನ ನರೇಶ್ ಫರ್ನೀಚರ್ ಖರೀದಿಸಿ ಬೇರೆಯವರ ಹೆಸರಿನ ಚೆಕ್ ನೀಡಿದ್ದ. ಆರೋಪಿ ನರಿ ಅಂಗಡಿ ಮಾಲೀಕನಿಗೆ ನಕಲಿ […]

ಜಿಲ್ಲಾಧಿಕಾರಿಯ ಚಾಲಕನೆಂದು ಹೇಳಿ ಫರ್ನೀಚರ್ ಪಡೆದು ವಂಚನೆ: ಆರೋಪಿ ನರಿ ಅರೆಸ್ಟ್
ಜಿಲ್ಲಾಧಿಕಾರಿಯ ಚಾಲಕನೆಂದು ಹೇಳಿ ಫರ್ನೀಚರ್ ಪಡೆದು ವಂಚನೆ ಆರೋಪಿ ನರಿ ಅರೆಸ್ಟ್
Follow us on

ನೆಲಮಂಗಲ: ಜಿಲ್ಲಾಧಿಕಾರಿಯ (ಡಿಸಿ) ಚಾಲಕನೆಂದು ಹೇಳಿಕೊಂಡು ಫರ್ನೀಚರ್ ಪಡೆದು ವಂಚನೆ ಎಸಗಿರುವ ಕೇಸ್ ದಾಖಲಾಗಿದೆ. ವಂಚಕ ಆರೋಪಿ ಬೆಂಗಳೂರಿನ ನರೇಶ್ ಅಲಿಯಾಸ್ ನರಿನನ್ನು ಅರೆಸ್ಟ್ ಮಾಡಲಾಗಿದೆ. ಈತ 50 ಸಾವಿರ ರೂ. ಮೌಲ್ಯದ ಫರ್ನೀಚರ್ ಪಡೆದು ವಂಚನೆ ಎಸಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಶಿವಗಂಗೆ ಸರ್ಕಲ್‌ನಲ್ಲಿನ ಪೀಠೋಪಕರಣ ಅಂಗಡಿಗೆ ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಬೆಂಗಳೂರಿನ ನರೇಶ್ ಫರ್ನೀಚರ್ ಖರೀದಿಸಿ ಬೇರೆಯವರ ಹೆಸರಿನ ಚೆಕ್ ನೀಡಿದ್ದ. ಆರೋಪಿ ನರಿ ಅಂಗಡಿ ಮಾಲೀಕನಿಗೆ ನಕಲಿ ಚೆಕ್ ನೀಡಿದ್ದ. 5 ಸಾವಿರ ರೂಪಾಯಿ ನೀಡಿ ಫರ್ನೀಚರ್ ಹೋಮ್ ಡೆಲಿವರಿ ಪಡೆದಿದ್ದ. ಬಳಿಕ ಆರೋಪಿ ನರೇಶ್ 2 ದಿನದಲ್ಲೇ ಮನೆ ಖಾಲಿ ಮಾಡಿದ್ದ.

ಫರ್ನೀಚರ್ ಅಂಗಡಿ ಮಾಲೀಕ ಆಕಾಶ್ ನರೇಶ್ ವಿರುದ್ಧ ವಂಚನೆ ದೂರು ನೀಡಿದ್ದ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಆರೋಪಿ ನರೇಶನನ್ನು ಪೊಲೀಸರು ಬಂಧಿಸಿದ್ದಾರೆ.

Also Read: ಸೊರಟೂರಿನಲ್ಲಿ ಬಡ ಕುಟುಂಬದ ಮೇಲೆ ದಬ್ಬಾಳಿಕೆ; ಮಹಿಳೆಯರ ಜೊತೆ ಅನುಚಿತ ವರ್ತನೆ, ಮನೆಗೆ ನುಗ್ಗಿ ಹಲ್ಲೆ

Also Read: ಕಾರು-ಲಾರಿ ಮುಖಾಮುಖಿ ಡಿಕ್ಕಿ: ಅಕ್ಕನಿಗೆ ಬಾಗಿನ ಕೊಟ್ಟು ತವರಿಗೆ ಕರೆದೊಯ್ಯುತ್ತಿದ್ದ ಬಿಎಸ್ಎಫ್ ಯೋಧ, ಅಕ್ಕನ ಮಗು ಸಾವು

(in the guise of deputy commissioner fraud cheat furniture owner in nelamangala)