ನೆಲಮಂಗಲ, ನ.24: ಸಿಕ್ಕಸಿಕ್ಕವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್‌ನಲ್ಲಿ ನಡೆದಿದೆ. ಹುಚ್ಚು ನಾಯಿ ಕಡಿತಕ್ಕೆ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ನೆಲಮಂಗಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಹುಚ್ಚು ನಾಯಿ ದಾಳಿಯಿಂದ ಪರಮೇಶ್, ಚೌಡಪ್ಪ, ಕೃಷ್ಣ, ಚೌಡರೆಡ್ಡಿ, ಮೊಹಮ್ಮದ್, ಕಿಶೋರ್, ರಾಧಾ, ತನ್ವೀರ್ ಸೇರಿದಂತೆ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಟೌನ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಜನನಿಬಿಡ ಚೆನ್ನೈ ರಸ್ತೆಯಲ್ಲಿ ಒಂದು ಗಂಟೆಯೊಳಗೆ 29 ಜನರಿಗೆ ಕಚ್ಚಿದ ಬೀದಿನಾಯಿ
ಅಲ್ಲದೆ, ಇನ್ಸ್‌ಪೆಕ್ಟರ್ ಶಶಿಧರ್ ನೇತೃತ್ವದಲ್ಲಿ ನಾಯಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲದೆ, ಸ್ಪೆಷಲ್ ಡಾಗ್ ಟೇಮ್ ಆಗಮಿಸುವಷ್ಟರಲ್ಲಿ ಸ್ಥಿಮಿತ ಕಳೆದುಕೊಂಡ ಸಾರ್ವಜನಿಕರು, ನೆಲಮಂಗಲ ಟಿಬಿ ಬಸ್ ನಿಲ್ದಾಣದ ಬಳಿ ಪತ್ತೆಯಾದ ಹುಚ್ಚು ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 pm, Fri, 24 November 23