ಜನನಿಬಿಡ ಚೆನ್ನೈ ರಸ್ತೆಯಲ್ಲಿ ಒಂದು ಗಂಟೆಯೊಳಗೆ 29 ಜನರಿಗೆ ಕಚ್ಚಿದ ಬೀದಿನಾಯಿ
ದಾಳಿಗೊಳಗಾದವರಲ್ಲಿ 24 ಮಂದಿಗೆ ಮೂರನೇ ವರ್ಗದ ಕಡಿತ ಆಗಿದೆ. ಇದರರ್ಥ ಆಳವಾದ ಕಡಿತ ಮತ್ತು ರಕ್ತಸ್ರಾವದ ಜೊತೆಗೆ ನಾಯಿಯಿಂದ ಮನುಷ್ಯನಿಗೆ ಲಾಲಾರಸ ವರ್ಗಾವಣೆಯಾಗಬಹುದು. ಗಾಯಗೊಂಡವರಲ್ಲಿ ಹತ್ತು ಮಂದಿ ಶಾಲಾ ಮಕ್ಕಳು. ಕೆಲ ಹಿರಿಯ ನಾಗರಿಕರು ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾರೆ.
ಚೆನ್ನೈ ನವೆಂಬರ್ 23: ಮಂಗಳವಾರ ಸಂಜೆ ರಾಯಪುರಂ ಪ್ರದೇಶದಲ್ಲಿ ಬೀದಿ ನಾಯಿಯೊಂದು (stray dog) ಜನನಿಬಿಡ ಜಿಎ ರಸ್ತೆಯಲ್ಲಿ ಒಂದು ಗಂಟೆಯೊಳಗೆ 29 ಜನರನ್ನು ಕಚ್ಚಿದೆ. ಆತಂಕ ಸೃಷ್ಟಿಸಿದ ಈ ನಾಯಿಯನ್ನು(Dog Bite) ಸ್ಥಳೀಯರು ಹೊಡೆದು ಕೊಂದಿದ್ದಾರೆ. ಉತ್ತರ ಚೆನ್ನೈನ (Chennai) ವಾಣಿಜ್ಯ ಪ್ರದೇಶದಲ್ಲಿ ನಾಯಿ ಇದ್ದಕ್ಕಿದ್ದಂತೆ ಪಾದಚಾರಿಗಳ ಮೇಲೆ ದಾಳಿ ಮಾಡಿ, ಅವರ ಕಾಲು ಮತ್ತು ಪಾದಗಳನ್ನು ಕಚ್ಚಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಾಯಿಯನ್ನು ಹೊಡೆದು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತರಲ್ಲಿ ಕೆಲವರು ಹೇಳಿದ್ದಾರೆ.
ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಸತ್ತ ನಾಯಿಯನ್ನು ಮರಣೋತ್ತರ ಪರೀಕ್ಷೆಗಾಗಿ ಮದ್ರಾಸ್ ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಿದೆ. “ನಾಯಿಯು ಅಪ್ರಚೋದಿತ ಆಕ್ರಮಣವನ್ನು ತೋರಿಸಿರುವುದರಿಂದ ರೇಬೀಸ್ ಸೋಂಕಿಗೆ ಒಳಗಾಗಬಹುದು. ನಾವು ಎರಡು ದಿನಗಳಲ್ಲಿ ಪರೀಕ್ಷಾ ವರದಿಯನ್ನು ಪಡೆಯುತ್ತೇವೆ” ಎಂದು ಜಿಸಿಸಿ ಪಶುವೈದ್ಯ ಅಧಿಕಾರಿ ಡಾ.ಕಮಲ್ ಹುಸೇನ್ ಹೇಳಿದ್ದಾರೆ.
ದಾಳಿಗೊಳಗಾದವರಲ್ಲಿ 24 ಮಂದಿಗೆ ಮೂರನೇ ವರ್ಗದ ಕಡಿತ ಆಗಿದೆ. ಇದರರ್ಥ ಆಳವಾದ ಕಡಿತ ಮತ್ತು ರಕ್ತಸ್ರಾವದ ಜೊತೆಗೆ ನಾಯಿಯಿಂದ ಮನುಷ್ಯನಿಗೆ ಲಾಲಾರಸ ವರ್ಗಾವಣೆಯಾಗಬಹುದು. ಗಾಯಗೊಂಡವರಲ್ಲಿ ಹತ್ತು ಮಂದಿ ಶಾಲಾ ಮಕ್ಕಳು. ಕೆಲ ಹಿರಿಯ ನಾಗರಿಕರು ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾರೆ. ನಾಯಿ ಕಡಿತಕ್ಕೊಳಗಾದವರನ್ನು ರಾತ್ರೋರಾತ್ರಿ ಸಮೀಪದ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು.
ಸ್ಟಾನ್ಲಿ ಜಿಎಚ್‌ನ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಎಸ್.ಚಂದ್ರಶೇಖರ್ ಮಾತನಾಡಿ, “ನಾವು ಎಲ್ಲಾ ಸಂತ್ರಸ್ತರ ಅಂಗಗಳನ್ನು ಸ್ವಚ್ಛ ಮಾಡಿಮೆದುಳಿಗೆ ಸೋಂಕು ಹರಡುವುದನ್ನು ತಡೆಯಲು ಆಂಟಿ-ರೇಬಿಸ್ ಇಮ್ಯುನೊಗ್ಲಾಬ್ಯುಲಿನ್ ಔಷಧವನ್ನು ನೀಡಿದ್ದೇವೆ. ಇದರ ನಂತರ ನಾವು ಆಂಟಿ ರೇಬಿಸ್ ಲಸಿಕೆಯನ್ನು ನೀಡಿದ್ದೇವೆ. ಅದಕ್ಕಾಗಿ ಅವರು ಇನ್ನೂ ನಾಲ್ಕು ಡೋಸ್‌ಗಳಿಗೆ ಮತ್ತೆ ಬರಬೇಕು.”
ಘಟನೆಯ ನಂತರ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಪ್ರದೇಶದಿಂದ ಆರು ನಾಯಿಮರಿಗಳು ಸೇರಿದಂತೆ 32 ನಾಯಿಗಳನ್ನು ವಶ ಪಡೆದುಕೊಂಡಿದ್ದು ಅವುಗಳನ್ನು ರೇಬಿಸ್ಗಾಗಿ ವೀಕ್ಷಣೆಯಲ್ಲಿ ಇರಿಸಿದೆ.
ಇದನ್ನೂ ಓದಿ: ಅಪಘಾತಕ್ಕೆ ಕಾರಣವಾದ ನಾಯಿ ಮೃತನ ಮನೆಗೆ ಹೋಗಿ ಪಶ್ಚಾತ್ತಾಪ ವ್ಯಕ್ತಪಡಿಸಿತೇ? ಈ ವಿಡಿಯೋ ನೋಡಿದರೆ ಹಾಗನ್ನಿಸುತ್ತದೆ!
ಅಪ್ರಚೋದಿತ ನಾಯಿ ಕಡಿತಕ್ಕೆ ಒಳಗಾದವರು 12 ಗಂಟೆಯೊಳಗೆ ಆ್ಯಂಟಿ ರೇಬಿಸ್ ಇಮ್ಯುನೊಗ್ಲಾಬ್ಯುಲಿನ್ ಸೀರಮ್ ಮತ್ತು ಲಸಿಕೆ ಡೋಸ್‌ಗಳನ್ನು ಪಡೆಯಬೇಕು ಎಂದು ಪಶುವೈದ್ಯಕೀಯ ತಜ್ಞ ಮತ್ತು ತನುವಾಸ್ ಪ್ರಾಧ್ಯಾಪಕ ಎಂ ಬಾಲಗಂಗಾತರತಿಲಗರ್ ಹೇಳಿದರು. “ಬೀದಿ ನಾಯಿಗಳು ಸಾಮಾನ್ಯವಾಗಿ ಜತೆಯಾಗಿ ಇರುತ್ತವೆ. ವಾಹನಗಳನ್ನು ಗುಂಪುಗಳಲ್ಲಿ ಮಾತ್ರ ಬೆನ್ನಟ್ಟುತ್ತವೆ, ಅವುಗಳು ಇತರ ನಾಯಿಗಳ ಚಕ್ರಗಳಲ್ಲಿ ವಾಸನೆಯನ್ನು ಕಂಡರೆ ಅಥವಾ ಹಿಂದಿನ ಹಾನಿಯ ನೆನಪುಗಳನ್ನು ಹೊಂದಿದ್ದರೆ ಒಂಟಿಯಾಗಿದ್ದಾಗ ಮತ್ತು ಅಪ್ರಚೋದಿತವಾಗಿ ಯಾರಾದರೂ ದಾಳಿ ಮಾಡಿದರೆ ರೇಬೀಸ್ ಪಾಸಿಟಿವ್ ಆಗುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದ್ದಾರೆ.
ಹಿಪೊಕ್ಯಾಂಪಸ್ ಫ್ಲೋರೊಸೆಂಟ್ ಆಂಟಿಬಾಡಿ ಪರೀಕ್ಷೆಗಳ ಮೂಲಕ ಸತ್ತ ನಾಯಿಗಳಿಗೆ ಮಾತ್ರ ರೇಬೀಸ್ ಪರೀಕ್ಷೆಗಳನ್ನು ಮಾಡಬಹುದು, ಅಲ್ಲಿ ವೈರಸ್ ಅನ್ನು ಪರೀಕ್ಷಿಸಲು ಮೆದುಳಿನ ಒಂದು ಭಾಗವನ್ನು ತೆಗೆಯಬೇಕಾಗುತ್ತದೆ ಎಂದು ಪ್ರಾಧ್ಯಾಪಕರು ಹೇಳಿದರು. “ಜೀವಂತ ನಾಯಿಗಳಲ್ಲಿ, ಕಾರ್ನಿಯಾ ಸ್ಮೀಯರ್ ಪರೀಕ್ಷೆ ಅಥವಾ ಲಾಲಾರಸ ಪರೀಕ್ಷೆಯನ್ನು ಮಾಡಬಹುದು, ಆದರೆ ಇದು ಯಾವಾಗಲೂ ನಿರ್ಣಾಯಕವಲ್ಲ ಏಕೆಂದರೆ ಇಲ್ಲಿ ವೈರಲ್ ಲೋಡ್ ಕಡಿಮೆ ಇರಬಹುದು” ಎಂದು ಅವರು ಹೇಳಿರುವುಗಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ