ಅಪಘಾತಕ್ಕೆ ಕಾರಣವಾದ ನಾಯಿ ಮೃತನ ಮನೆಗೆ ಹೋಗಿ ಪಶ್ಚಾತ್ತಾಪ ವ್ಯಕ್ತಪಡಿಸಿತೇ? ಈ ವಿಡಿಯೋ ನೋಡಿದರೆ ಹಾಗನ್ನಿಸುತ್ತದೆ!

ಅಪಘಾತಕ್ಕೆ ಕಾರಣವಾದ ನಾಯಿ ಮೃತನ ಮನೆಗೆ ಹೋಗಿ ಪಶ್ಚಾತ್ತಾಪ ವ್ಯಕ್ತಪಡಿಸಿತೇ? ಈ ವಿಡಿಯೋ ನೋಡಿದರೆ ಹಾಗನ್ನಿಸುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 22, 2023 | 12:36 PM

ನಾಯಿ ಅತ್ಯಂತ ನಂಬುಗೆಯ ಮತ್ತು ವಿಶ್ವಾಸಾರ್ಹ ಪ್ರಾಣಿ ಅಂತ ಎಲ್ಲರಿಗೂ ಗೊತ್ತು. ಆದರೆ ಹೀಗೆ ಅದು ತನ್ನ ವೇದನೆ, ಪಶ್ವಾತ್ತಾಪವನ್ನೂ ವ್ಯಕ್ತಪಡಿಸುತ್ತದೆಯೇ? ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ದುರಂತಕ್ಕೆ ನಾಯಿಯೇ ಕಾರಣ ಅಂತ ಗೊತ್ತಿದ್ದರೂ ಶೋಕತಪ್ತ ಕುಟುಂಬದ ಸದಸ್ಯರು ಅದರ ಮೇಲೆ ಕೋಪ, ಬೇಸರ ಮಾಡಿಕೊಂಡಿಲ್ಲ.

ದಾವಣಗೆರೆ: ಇದನ್ನು ವಿಸ್ಮಯ ಅನ್ನಬೇಕೋ ಅಥವಾ ಪವಾಡವೋ ಅಂತ ಗೊತ್ತಾಗುತ್ತಿಲ್ಲ ಮಾರಾಯ್ರೇ. ಜಿಲ್ಲೆಯ ಕ್ಯಾಸಿನಕೆರೆ ಗ್ರಾಮದಲ್ಲಿ (Kyasinakere) ನಡೆದಿರುವ ಘಟನೆ ಇದು. ಯುವಕನೊಬ್ಬ (a youth) ಬೈಕ್ ಮೇಲೆ ಹೋಗುತ್ತಿದ್ದಾಗ ಈ ನಾಯಿ (dog) ಅಡ್ಡಬಂದು ಅಪಘಾತ ಸಂಭವಿಸಿದೆ ಮತ್ತು ಯುವಕ ಮೃತಪಟ್ಟಿದ್ದಾನೆ. ಯುವಕನ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದ್ದಾಗ ಅಪಘಾತಕ್ಕೆ ಕಾರಣವಾಗಿದ್ದ ನಾಯಿ ಅವರ ಮನೆಗೆ ಬಂದು ರೋದಿಸುತ್ತಿದ್ದ ಯುವಕನ ತಾಯಿಗೆ ಸಮಾಧಾನ ಹೇಳುವಂತೆ ವರ್ತಿಸುತ್ತಿದೆ. ಮಹಿಳೆ ನೆಲದಲ್ಲಿ ಅಳುತ್ತಾ ಮಲಗಿದ್ದರೆ ಆಕೆಯ ಕೈಮೇಲೆ ನಾಯಿ ತನ್ನ ಮುಖವನ್ನಿಟ್ಟು ಆಗಿರೋ ಅನಾಹುತಕ್ಕೆ ಪಶ್ಚಾತ್ತಪಪಡುತ್ತಿದ್ದೇನೆ ಎಂಬಂತೆ ವರ್ತಿಸುತ್ತಿದೆ. ತನ್ನಿಂದ ತಪ್ಪಾಯ್ತು ದಯವಿಟ್ಟು ಕ್ಷಮಿಸಿ ಎಂಬ ಭಾವನೆಯನ್ನೂ ಇದು ವ್ಯಕ್ತಪಡಿಸುತ್ತಿದೆಯೇ? ನಾಯಿ ಅತ್ಯಂತ ನಂಬುಗೆಯ ಮತ್ತು ವಿಶ್ವಾಸಾರ್ಹ ಪ್ರಾಣಿ ಅಂತ ಎಲ್ಲರಿಗೂ ಗೊತ್ತು. ಆದರೆ ಹೀಗೆ ಅದು ತನ್ನ ವೇದನೆ, ಪಶ್ವಾತ್ತಾಪವನ್ನೂ ವ್ಯಕ್ತಪಡಿಸುತ್ತದೆಯೇ? ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ದುರಂತಕ್ಕೆ ನಾಯಿಯೇ ಕಾರಣ ಅಂತ ಗೊತ್ತಿದ್ದರೂ ಶೋಕತಪ್ತ ಕುಟುಂಬದ ಸದಸ್ಯರು ಅದರ ಮೇಲೆ ಕೋಪ, ಬೇಸರ ಮಾಡಿಕೊಂಡಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ