ದೊಡ್ಡಬಳ್ಳಾಪುರ ಜನರಿಗೆ ಮೊಬೈಲ್ ಟವರ್ ರೆಡಿಯೆಷನ್ ಭಯ, ನಗರಸಭೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ

| Updated By: ಸಾಧು ಶ್ರೀನಾಥ್​

Updated on: Nov 24, 2023 | 5:22 PM

ದೊಡ್ಡಬಳ್ಳಾಪುರ ರಾಜೀವ್ ಗಾಂಧಿ‌ ಬಡಾವಣೆಯ ಜನರಿಗೆ ಮೊಬೈಲ್ ಟವರ್ ರೆಡಿಯೆಷನ್ ಭಯ ಶುರುವಾಗಿದ್ದು, ತೆರವು ಮಾಡಿಸುವಂತೆ ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ತೆರವು ಮಾಡಿಸದಿದ್ದಲ್ಲಿ ಏರಿಯಾ ಜನ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ

ದೊಡ್ಡಬಳ್ಳಾಪುರ ಜನರಿಗೆ ಮೊಬೈಲ್ ಟವರ್ ರೆಡಿಯೆಷನ್ ಭಯ, ನಗರಸಭೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ
ದೊಡ್ಡಬಳ್ಳಾಪುರ ಜನರಿಗೆ ಮೊಬೈಲ್ ಟವರ್ ರೆಡಿಯೆಷನ್ ಭಯ
Follow us on

ಅವರೆಲ್ಲಾ ಆ ಏರಿಯಾದಲ್ಲಿ ಇಷ್ಟು ದಿನ ನೆಮ್ಮದಿಯಿಂದ ಇದ್ರು. ಆದ್ರೆ ಇದೀಗ ಅವರ ನೆಮ್ಮದಿಯೇ ನಶಿಸಿದಂತೆ, ಆ‌ ಏರಿಯಾ ಜನ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರೋ ಮೊಬೈಲ್ ಟವರ್ (Mobile tower radiation) ವಿರುದ್ಧ ಸಿಡಿದೆದ್ದಿದ್ದಾರೆ. ರಾತ್ರೋರಾತ್ರಿ ನಿರ್ಮಾಣವಾದ ಮೊಬೈಲ್ ಟವರ್ ತೆರವಿಗೆ ಬಡಾವಣೆಯ ನೂರಾರು ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ. ಜನಸಂದಣಿ ಪ್ರದೇಶದಲ್ಲಿ ರಾತ್ರೋರಾತ್ರಿ ನಿರ್ಮಾಣವಾಗಿರೋ ಮೊಬೈಲ್ ಟವರ್……. ಇದನ್ನ ಕಂಡು ತೆರವು ಮಾಡುವಂತೆ ರೊಚ್ಚಿಗೆದ್ದು ಪ್ರತಿಭಟನೆ (Protest) ನಡೆಸುತ್ತಿರೋ ಬಡಾವಣೆ ಜನ….. ಹೌದು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆ ಸಮೀಪ (Doddaballapur City Municipal Council).

ಅಂದಹಾಗೆ ಇಲ್ಲಿನ ಬಡಾವಣೆ ಸುತ್ತಮುತ್ತ ನೂರಾರು ಕುಟುಂಬಗಳು ವಾಸ ಮಾಡ್ತಿವೆ. ಆದ್ರೆ ಇದೇ ಬಡಾವಣೆ ಕುಟುಂಬಗಳಿಗೆ ಇದೀಗ ಮೊಬೈಲ್ ಟವರ್ ರೆಡಿಯೆಷನ್ ಭಯ ಶುರುವಾಗಿದೆ. ಈ ಏರಿಯಾದಲ್ಲಿ ರಾತ್ರೋರಾತ್ರಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮುಂದಾಗಿರುವುದನ್ನ ಕಂಡ ಬಡಾವಣೆ ನಿವಾಸಿಗಳು ಟವರ್ ನಿರ್ಮಿಸದಂತೆ ತಡೆದು ನಿಲ್ಲಿಸಿದ್ದಾರೆ. ಹೀಗಿದ್ದೂ ರಾತ್ರೋರಾತ್ರಿ ಕೆಲಸ ಮಾಡಿರೋ ಮೊಬೈಲ್ ಟವರ್ ಸಿಬ್ಬಂದಿ ಟವರ್ ಸಂಪೂರ್ಣ ರೆಡಿಮಾಡಿ ನಿಲ್ಲಿಸಿದ್ದು ಬಡಾವಣೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮೊಬೈಲ್ ಟವರ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರೋ ನಿವಾಸಿಗಳು ನಗರಸಭೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿ ತೆರುವು ಮಾಡಿಸುವಂತೆ ಒತ್ತಾಯಿಸಿದ್ದಾರೆ.

ಈ ಏರಿಯಾದಲ್ಲಿ 150 ಕ್ಕೂ ಹೆಚ್ಚು ಮನೆಯಿದ್ದು 500ಕ್ಕು ಹೆಚ್ಚು ಜನ ವಾಸ ಮಾಡ್ತಿದ್ದಾರೆ. ಇದೀಗ ಜನಸಂದಣಿ ಇರೋ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣದಿಂದ ಆತಂಕ ಮನೆ ಮಾಡಿದೆ. ಟವರ್ ನ ರೆಡಿಯೆಷನ್ ನಿಂದ ಹಲವಾರು ಖಾಯಿಲೆಗಳು ಬಂದು, ಬ್ರೈನ್ ಡ್ಯಾಮೆಜ್ ಅಂತಹ ಆರೋಗ್ಯ ಸಮಸ್ಯೆಗಳೂ ಕಾಡುವ ಭೀತಿಯಲ್ಲಿದ್ದಾರೆ. ಜೊತೆಗೆ ಹೆಚ್ಚು ವಯಸ್ಸಾಗಿರೋ ಮಂದಿ ಇಲ್ಲಿ ಹೆಚ್ಚಾಗಿ ವಾಸವಿದ್ದು ಯಾವುದೇ ಕಾರಣಕ್ಕೂ ಇಲ್ಲಿ‌ಮೊಬೈಲ್ ಟವರ್ ಬೇಡ ಅಂತಾ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇನ್ನೂ ಮೊಬೈಲ್ ಟವರ್ ನಿರ್ಮಾಣಕ್ಕೆ ತಡೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಬಡಾವಣೆ ಜನ ದೂರು ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲವಂತೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮೊಬೈಲ್ ಟವರ್ ತೆರವು ಮಾಡಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.

ಒಟ್ಟಾರೇ ನೆಮ್ಮದಿಯಿಂದ‌ ಇದ್ದ ದೊಡ್ಡಬಳ್ಳಾಪುರ ರಾಜೀವ್ ಗಾಂಧಿ‌ ಬಡಾವಣೆಯ ಜನರಿಗೆ ಮೊಬೈಲ್ ಟವರ್ ರೆಡಿಯೆಷನ್ ಭಯ ಶುರುವಾಗಿದ್ದು, ತೆರವು ಮಾಡಿಸುವಂತೆ ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ತೆರವು ಮಾಡಿಸದಿದ್ದಲ್ಲಿ ಏರಿಯಾ ಜನ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ