ದೇವನಹಳ್ಳಿ: ವಾಟರ್​ ಹೀಟರ್​​​ನಿಂದ ವಿದ್ಯುತ್​ ಪ್ರವಹಿಸಿ ತಾಯಿ, 4 ವರ್ಷದ ಮಗು ಸಾವು

ಶೌಚಾಲಯಕ್ಕೆ ಬಾಲಕ ಹೋಗಿದ್ದು ಹೀಟರನ್ನು ಮೈಮೇಲೆ ಬೀಳಿಸಿಕೊಂಡಿದ್ದಾನೆ. ಆಗ ಕರೆಂಟ್ ಶಾಕ್ ಹೊಡೆದಿದೆ. ಶಾಕ್​ನಿಂದ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್​ ಪ್ರವಹಿಸಿದ್ದು ತಾಯಿ-ಮಗ ಇಬ್ಬರೂ ಮೃತಪಟ್ಟಿದ್ದಾರೆ.

ದೇವನಹಳ್ಳಿ: ವಾಟರ್​ ಹೀಟರ್​​​ನಿಂದ ವಿದ್ಯುತ್​ ಪ್ರವಹಿಸಿ ತಾಯಿ, 4 ವರ್ಷದ ಮಗು ಸಾವು
ಸಾಂದರ್ಭಿಕ ಚಿತ್ರ

Updated on: Feb 27, 2023 | 10:16 AM

ದೇವನಹಳ್ಳಿ: ವಾಟರ್​ ಹೀಟರ್​​​ನಿಂದ ವಿದ್ಯುತ್​ ಪ್ರವಹಿಸಿ ತಾಯಿ, ಮಗು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನಡೆದಿದೆ. ರಾಯಚೂರು ಮೂಲದ ತಾಯಿ ಜ್ಯೋತಿ, ಮಗ ಜಯಾನಂದ್(4) ಮೃತ ದುರ್ದೈವಿಗಳು.

ನಿನ್ನೆ(ಫೆ.26) ಮಧ್ಯಾಹ್ನ ಜ್ಯೋತಿ ಅವರು ಶೌಚಾಲಯದಲ್ಲಿ ನೀರು ಕಾಯಿಸಲು ಹೀಟರ್ ಹಾಕಿದ್ದರು. ಈ ವೇಳೆ ಶೌಚಾಲಯಕ್ಕೆ ಬಾಲಕ ಹೋಗಿದ್ದು ಹೀಟರನ್ನು ಮೈಮೇಲೆ ಬೀಳಿಸಿಕೊಂಡಿದ್ದಾನೆ. ಆಗ ಕರೆಂಟ್ ಶಾಕ್ ಹೊಡೆದಿದೆ. ಶಾಕ್​ನಿಂದ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್​ ಪ್ರವಹಿಸಿದ್ದು ತಾಯಿ-ಮಗ ಇಬ್ಬರೂ ಮೃತಪಟ್ಟಿದ್ದಾರೆ. ದಂಪತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ, ಆನ್​​ಲೈನ್ ರಮ್ಮಿ ಚಟಕ್ಕೆ ಬ್ಯಾಂಕಿನ 2 ಕೋಟಿ ಹಣ ದುರ್ಬಳಕೆ -ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್​

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ, ಆರೋಪಿ ಅರೆಸ್ಟ್

ಬೆಂಗಳೂರು: ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ನೈಜೀರಿಯಾ ಪ್ರಜೆ ನೋಕೊಚಾ. ಯುಕೆಯಲ್ಲಿ ಉದ್ಯೋಗ ಕೊಡಿಸುವುದಾಗಿ ದೊಡ್ಡಗುಬ್ಬಿ ಮೂಲದ ಮಹಿಳೆ ಬಳಿ 37 ಲಕ್ಷ ಹಣ ಪಡೆದು ವಂಚಿಸಿದ್ದ. ಮಹಿಳೆ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ ಲ್ಯಾಪ್​ಟಾಪ್​​​​​, 6 ಮೊಬೈಲ್​, ಸಿಮ್​​ಕಾರ್ಡ್, ಪಾಸ್​ಪೋರ್ಟ್ ಜಪ್ತಿ ಮಾಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:11 am, Mon, 27 February 23