ಒಂಟಿ ಮಹಿಳೆ ಕೊಲೆ ಕೇಸ್​: ಸುಪಾರಿ ಕೊಟ್ಟಿದ್ದ ಸಂಬಂಧಿ ಸೇರಿ ಇಬ್ಬರು ಸೆರೆ

|

Updated on: Jan 04, 2020 | 1:08 PM

ದೇವನಹಳ್ಳಿ: ಡಿಸೆಂಬರ್ 24ರಂದು ದೇವನಹಳ್ಳಿ ತಾಲೂಕಿನ ಕಗ್ಗಲಹಳ್ಳಿಯಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಗ್ಗಲಹಳ್ಳಿಯ ನಾಗೇಶ್, ಲಕ್ಷ್ಮೀಶ್ ಬಂಧಿತ ಆರೋಪಿಗಳು ಜಮೀನು ವಿವಾದ ಹಿನ್ನೆಲೆಯಲ್ಲಿ ರತ್ನಮ್ಮರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ರತ್ನಮ್ಮಳ ಸಂಬಂಧಿಯಾಗಿರುವ ನಾಗೇಶ್, ಮಹಿಳೆ ಹತ್ಯೆಗೆ ಲಕ್ಷ್ಮೀಶಗೆ 2 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಮಹಿಳೆಯನ್ನು ಕೊಲೆ ಮಾಡಿದ ಬಳಿಕ ಪ್ರಕರಣವನ್ನು ತಿರುಚಲು, ಮಹಿಳೆಯ ಚೈನ್ ಕಿತ್ತುಕೊಂಡು ಹೋಗಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ರತ್ನಮ್ಮರನ್ನು ಕೊಲೆ […]

ಒಂಟಿ ಮಹಿಳೆ ಕೊಲೆ ಕೇಸ್​: ಸುಪಾರಿ ಕೊಟ್ಟಿದ್ದ ಸಂಬಂಧಿ ಸೇರಿ ಇಬ್ಬರು ಸೆರೆ
Follow us on

ದೇವನಹಳ್ಳಿ: ಡಿಸೆಂಬರ್ 24ರಂದು ದೇವನಹಳ್ಳಿ ತಾಲೂಕಿನ ಕಗ್ಗಲಹಳ್ಳಿಯಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಗ್ಗಲಹಳ್ಳಿಯ ನಾಗೇಶ್, ಲಕ್ಷ್ಮೀಶ್ ಬಂಧಿತ ಆರೋಪಿಗಳು

ಜಮೀನು ವಿವಾದ ಹಿನ್ನೆಲೆಯಲ್ಲಿ ರತ್ನಮ್ಮರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ರತ್ನಮ್ಮಳ ಸಂಬಂಧಿಯಾಗಿರುವ ನಾಗೇಶ್, ಮಹಿಳೆ ಹತ್ಯೆಗೆ ಲಕ್ಷ್ಮೀಶಗೆ 2 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಮಹಿಳೆಯನ್ನು ಕೊಲೆ ಮಾಡಿದ ಬಳಿಕ ಪ್ರಕರಣವನ್ನು ತಿರುಚಲು, ಮಹಿಳೆಯ ಚೈನ್ ಕಿತ್ತುಕೊಂಡು ಹೋಗಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ರತ್ನಮ್ಮರನ್ನು ಕೊಲೆ ಮಾಡಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

Published On - 12:34 pm, Sat, 4 January 20