ಅಪಘಾತವಾದ್ರೆ ಇನ್ಮುಂದ್ರೆ ಪೊಲೀಸರಿಗೆ ಕರೆ ಮಾಡೋದೇ ಬೇಡ: ಹೊಸ ಟೆಕ್ನಾಲಜಿ ಪರಿಚಯಿಸಿದ BTP

ಸಣ್ಣಪುಟ್ಟ ಅಪಘಾತಗಳ ಬಗ್ಗೆ ಸುಲಭವಾಗಿ ದೂರು ದಾಖಲಿಸಲು ಪೊಲೀಸ್ ಇಲಾಖೆ BTP ASTraM ಅಪ್ಲಿಕೇಶನ್‌ನಲ್ಲಿ 'ಇ-ಆ್ಯಕ್ಸಿಡೆಂಟ್ ರಿಪೋರ್ಟ್' ಎಂಬ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಇದರಿಂದ ಸಾರ್ವಜನಿಕರು ಅಪಘಾತ ಸ್ಥಳದಿಂದಲೇ ದೂರನ್ನು ದಾಖಲಿಸಬಹುದಾಗಿದ್ದು, ತ್ವರಿತವಾಗಿ ಪೊಲೀಸ್ ನೆರವು ಪಡೆಯಬಹುದಾಗಿದೆ. ಅಲ್ಲದೆ, ದೂರು ದಾಖಲು ಬಗ್ಗೆ ಆ್ಯಪ್​ನಲ್ಲಿಯೇ ನಿಮಗೆ ಸಂಪೂರ್ಣ ಮಾಹಿತಿ ಸಿಗಲಿದೆ.

ಅಪಘಾತವಾದ್ರೆ ಇನ್ಮುಂದ್ರೆ ಪೊಲೀಸರಿಗೆ ಕರೆ ಮಾಡೋದೇ ಬೇಡ: ಹೊಸ ಟೆಕ್ನಾಲಜಿ ಪರಿಚಯಿಸಿದ BTP
ಅಪಘಾತ (ಸಾಂದರ್ಭಿಕ ಚಿತ್ರ)

Updated on: Oct 30, 2025 | 3:38 PM

ಬೆಂಗಳೂರು, ಅಕ್ಟೋಬರ್​ 30: ರಾಜಧಾನಿ ಬೆಂಗಳೂರಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಅಪಘಾತಗಳ  ಸಂಖ್ಯೆಯೂ ಡಬಲ್​ ಆಗಿದ್ದು, ಸಣ್ಣಪುಟ್ಟ ಅಪಘಾತಗಳು ದಿನನಿತ್ಯ ಮಾಮೂಲು ಎಂಬಂತಾಗಿವೆ. ಈ ಹಿನ್ನಲೆ ಸೇವೆಯನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಪೊಲೀಸ್​ ಇಲಾಖೆ ಮಹತ್ವದ ಬದಲಾವಣೆ ತಂದಿದ್ದು, ಇ-ಆ್ಯಕ್ಸಿಡೆಂಟ್​ ರಿಪೋರ್ಟ್​ ದಾಖಲಿಸಲು ಸಾರ್ವಜನಿಕರಿಗೆ ಅವಕಾಶ ಒದಗಿಸಿದೆ.

ಏನಿದು ಇ-ಆ್ಯಕ್ಸಿಡೆಂಟ್​ ರಿಪೋರ್ಟ್? ಪ್ರಯೋಜನ ಏನು?

ಸಣ್ಣಪುಟ್ಟ ಅಪಘಾತಗಳು ನಡೆದಾಗಲೂ ಪೊಲೀಸ್​ ಠಾಣೆಗೆ ತೆರಳಿ ಆ ಬಗ್ಗೆ ದೂರು ನೀಡುವುದು ಬಹಳ ತ್ರಾಸದಾಯಕ ಮತ್ತು ಸಮಯ ವ್ಯರ್ಥಕ್ಕೆ ಕಾರಣವಾಗಲಿದೆ. ಹೀಗಾಗಿ BTP ASTraM ಆ್ಯಪ್​ನಲ್ಲಿ ಇ-ಆ್ಯಕ್ಸಿಡೆಂಟ್​ ರಿಪೋರ್ಟ್​ ಎಂಬ ಆಯ್ಕೆಯನ್ನು ಪೊಲೀಸ್​ ಇಲಾಖೆ ಹೊಸದಾಗಿ ಪರಿಚಯಿಸಿದೆ. ಈ ಮೂಲಕ ಅಪಘಾತ ನಡೆದ ಜಾಗದಿಂದಲೇ ನೀವು ಆ ಬಗ್ಗೆ ದೂರು ದಾಖಲಿಸಬಹುದಾಗಿದ್ದು, ನಿಮ್ಮ ಕಂಪ್ಲೇಂಟ್​​ ಸ್ವೀಕರಿಸಿದ ಬಗ್ಗೆ ದಾಖಲೆಯೂ ಕೂಡಲೇ ಸಿಗಲಿದೆ.

ಇದನ್ನೂ ಓದಿ: ಸಾರ್ವಜನಿಕವಾಗಿ ಕ್ಯಾಬ್​ ಡ್ರೈವರ್​​ಗೆ​​​ ಕಪಾಳಮೋಕ್ಷ ಮಾಡಿದ ಟ್ರಾಫಿಕ್​​​ ಪೊಲೀಸ್

ಇ-ಆ್ಯಕ್ಸಿಡೆಂಟ್​ ರಿಪೋರ್ಟ್​ ದಾಖಲಿಸೋದು ಹೇಗೆ?

  • ಮೊದಲು BTP ASTraM ಆ್ಯಪನ್ನು ನಿಮ್ಮ ಮೊಬೈಲ್​ನಲ್ಲಿ ಡೌನ್​ಲೋಡ್​ ಮಾಡಿಕೊಳ್ಳಿ
  • ಆ್ಯಪ್​ನಲ್ಲಿ ನೀಡಲಾಗಿರುವ ಇ-ಆ್ಯಕ್ಸಿಡೆಂಟ್​ ರಿಪೋರ್ಟ್ ಆಯ್ಕೆ ಮೇಲೆ ಕ್ಲಿಕ್​ ಮಾಡಿ
  • ಅಪಘಾತದ ಫೋಟೋ ಜೊತೆಗೆ ಅಗತ್ಯ ಮಾಹಿತಿಯನ್ನು ದಾಖಲಿಸಿ
  • ನಿಮ್ಮ ದೂರು ಸ್ವೀಕೃತವಾದ ಬಗ್ಗೆ ದಾಖಲೆಯನ್ನು ಕೂಡಲೇ ಪಡೆಯಿರಿ

ಕೇವಲ ನಮ್ಮ ವಾಹನಗಳು ಅಪಘಾತವಾದಾಗ ಮಾತ್ರವಲ್ಲದೆ ಇತರ ಅಪಘಾತಗಳಿಗೆ ನಾವು ಸಾಕ್ಷಿಯಾದಾಗಲೂ ಆ ಬಗ್ಗೆ ದೂರು ದಾಖಲಿಸಬಹುದಾಗಿದೆ. Report My Accident ಮತ್ತು Report Accident I Witnesses ಎಂಬ ಎರಡು ಆಯ್ಕೆಯನ್ನು ಇಲ್ಲಿ ನೀಡಲಾಗಿದೆ. ದೂರು ದಾಖಲಿಸುವವರು ಅಪಘಾತವಾದ ವಾಹನಗಳ ರಿಜಿಸ್ಟ್ರೇಶನ್​ ನಂಬರ್ ಜೊತೆಗೆ ಅಪಘಾತದ ಸ್ಥಳವನ್ನ ಆಯ್ಕೆ ಮಾಡಬೇಕು. ಅಪಘಾತದ ದಿನಾಂಕ, ಘಟನೆ ಹೇಗೆ ಆಯಿತು ಎಂಬ ವಿವರಣೆ ಒಳಗೊಂಡ ಅಪಘಾತವಾದ ವಾಹನಗಳ ಫೋಟೋ ಅಪ್​ಲೋಡ್​ ಮಾಡಬೇಕು.  ಹೆಸರು, ದೂರವಾಣಿ ಸಂಪರ್ಕ ಸಂಖ್ಯೆಯನ್ನು ದಾಖಲಿಸಿ ರಿಪೋರ್ಟ್​ ಸಬ್​ಮಿಟ್​ ಮಾಡಿದರೆ ನಿಮ್ಮ ದೂರು ದಾಖಲಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.