ಬೆಂಗಳೂರು, ನ.26: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಹಾಗೂ ಪಕ್ಷದ ಹೈಕಮಾಂಡ್ ಪರಿಚಯ ಇದೆ ಎಂದು ಪರಿಚಯ ಮಾಡಿ ವಂಚನೆ ಎಸಗುತ್ತಿದ್ದ ಯೂಸೂಫ್ ಎಂಬಾತನ ಮುಖವಾಡ ಕಳಚಿಬಿದ್ದಿದೆ. ಉದ್ಯಮಿಗಳಿಗೆ ವಿವಿಧ ರೀತಿಯಲ್ಲಿ ವಂಚನೆ ಎಸಗುತ್ತಿದ್ದ ಯೂಸೂಫ್ ವಿರುದ್ಧ ಸಾಲುಸಾಲು ಪ್ರಕರಣಗಳು ದಾಖಲಾಗಿವೆ.
ಆರೋಪಿ ಯೂಸೂಫ್, ತನಗೆ ಬಿಜೆಪಿ ರಾಜ್ಯ ಅದ್ಯಕ್ಷ ವಿಜಯೇಂದ್ರ ಪರಿಚಯ ಇದೆ, ಬಿಜೆಪಿ ಹೈ ಕಮಾಂಡ್ ಪರಿಚಯ ಇದೆ, ಅವರನ್ನು ಪರಿಚಯ ಮಾಡಿಸುತ್ತೇನೆ. ನಂತರ ನಿಮಗೆ ರಾಜಕೀಯ ಕೆಲಸ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದು ವಿಜಯೇಂದ್ರಗೆ ನೀಡುತ್ತೇನೆ ಎಂದು ಹೇಳಿ ಹಣ ಪಡೆದು ವಂಚನೆ ಎಸಗಿದ್ದಾನೆ.
ಉದ್ಯಮಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ ಯೂಸೂಫ್, ಅವರ ವಿಚಾರವನ್ನು ತಿಳಿದುಕೊಂಡ ಅವರ ಅವಶ್ಯಕತೆಗೆ ತಕ್ಕಂತೆ ತನ್ನ ವೃತ್ತಿಯನ್ನು ಹೇಳಿಕೊಳ್ಳುತ್ತಿದ್ದನು. ಆರಂಭದಲ್ಲಿ ಉದ್ಯಮಗಳ ಪರಿಚಯ ಮಾಡಿಕೊಳ್ಳುತ್ತಿದ್ದ ಯೂಸೂಫ್, ಬಳಿಕ ಆ ಉದ್ಯಮಿಗಳಿಗೆ ಏನು ಯಾವ ವಿಚಾರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತಿದ್ದನು.
ಇದನ್ನೂ ಓದಿ; 100 ಕೋಟಿ ಹಣ ವಂಚನೆ ಪ್ರಕರಣ: ಪ್ರಕಾಶ್ ರೈಗೆ ಸಮನ್ಸ್
ನಂತರ ಉದ್ಯಮಿಗಳಿಗ ಅವಶ್ಯಕತೆಗೆ ತಕ್ಕಂತ ಯುಸೂಫ್ ತನ್ನ ವೃತಿಯನ್ನು ಹೇಳಿಕೊಳ್ಳುತ್ತಿದ್ದ. ಅದೇ ರೀತಿ, ಟ್ರಾವಲ್ ಕಂಪನಿ ಮಾಲಿಕರಿಗೆ ಜಿಎಸ್ಟಿ ಕಮಿಷನರ್ ಹೆಸರಲ್ಲಿ ವಂಚನೆ ಎಸಗಿದ್ದಾನೆ. ಹೌದು, ಟ್ರಾವಲ್ ಕಂಪನಿ ಮಾಲಿಕರು ಕೋಟ್ಯಾಂತರ ರೂಪಾಯಿ ಜಿಎಸ್ಟಿ ಕಟ್ಟಬೇಕಿತ್ತು. ಈ ಬಗ್ಗೆ ಯೂಸೂಫ್ ಜೊತೆ ಮಾಲೀಕರು ಮಾತಾನಾಡಿದ್ದರು.
ಈ ವೇಳೆ ಜಿಎಸ್ಟಿ ಕಮಿಷನರ್ ತನಗೆ ಪರಿಚಯ ಎಂದು ಕಚೇರಿಗೆ ಕರೆದುಕೊಂಡು ಹೋಗಿದ್ದ ಯುಸೂಫ್, ಸಾರ್ ಇವರು ನಮ್ಮ ಸ್ನೇಹಿತರು ಎಂದು ಪರಿಚಯ ಮಾಡಿಸಿದ್ದ. ಬಳಿಕ ಹೊರ ಬಂದ ಮೇಲೆ ತಾನು ಮಾತನಾಡಿದ್ದೇನೆ. ನಿಮ್ಮ ಜಿಎಸ್ಟಿ ಬಿಲ್ ಐವತ್ತು ಪರ್ಸೆಂಟ್ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದ. ಹೀಗೆ ಟ್ರಾವೆಲ್ ಕಂಪನಿ ಮಾಲೀಕರನ್ನು ನಂಬಿಸಿ ಅವರಿಂದ ಅಡ್ವಾನ್ಸ್ ಎಂದು 15 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಎಸಗಿದ್ದನು.
ಬ್ಯಾಂಕ್ ಲೋನ್ ಪಡೆಯಲು ಪ್ರಯತ್ನ ಮಾಡುತ್ತಿದ್ದವರು ಕೂಡ ಯೂಸಫ್ ಟಾರ್ಗೆಟ್ ಮಾಡಿಕೊಂಡಿದ್ದನು. ಲೋನ್ಗಾಗಿ ಯತ್ನಿಸುತ್ತಿದ್ದವರನ್ನು ಪರಿಚಯ ಮಾಡಿಕೊಂಡು ಬ್ಯಾಂಕ್ ಮ್ಯಾನೇಜರ್ ಪರಿಚಯ ಎಂದು ನಂಬಿಸುತ್ತಿದ್ದನು. ಬಳಿಕ ಬ್ಯಾಂಕ್ಗೆ ಕರೆದುಕೊಂಡು ಹೋಗಿ ಮ್ಯಾನೇಜರ್ ಜೊತೆ ಮಾತಾಡಿಸಿದ್ದ.
ಬಳಿಕ ಲೋನ್ ಮಾಡಿಸಿಕೊಡುತ್ತೇನೆ ಎಂದು ಹೇಳಿ ಸಹಿ ಪಡೆದುಕೊಂಡಿದ್ದನು. ಬಳಿಕ ಲೋನ್ ಮಾಡಿಸಿಕೊಡುತ್ತೇನೆ ಎಂದು ಹೇಳಿ ಸಹಿ ಪಡೆದುಕೊಂಡ. ಆದರೆ, ಆಗಿದ್ದೇ ಬೇರೆ. ಹೌದು, ಯುಸೂಫ್ ತಾನು ಹಣ ಪಡೆದು ಬ್ಯಾಂಕ್ಗೆ ಕರೆದುಕೊಂಡು ಹೋಗಿದ್ದವರನ್ನು ಎರಡು ಕೋಟಿ ನಲವತ್ತು ಲಕ್ಷ ಲೋನ್ಗೆ ಶುರುಟಿ ಮಾಡಿಸಿದ್ದ. ಬ್ಯಾಂಕ್ ನೋಟಿಸ್ ಬಂದಾಗಲೇ ಆ ವ್ಯಕ್ತಿಗೆ ತಾನು ವಂಚನೆಗೊಳಗಾಗಿರುವುದು ತಿಳಿದುಬಂದಿದೆ.
ಸದ್ಯ, ದೊಡ್ಡ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡುತ್ತಾ ಬಣ್ಣಬಣ್ಣದ ಮಾತುಗಳನ್ನಾಡಿ ಅವಶ್ಯಕತೆಗೆ ತಕ್ಕಂತೆ ವೃತ್ತಿಯನ್ನು ಹೇಳಿಕೊಳ್ಳುತ್ತಾ ನೆರವಾಗುವ ನೆಪದಲ್ಲಿ ಹಣ ಪಡೆದು ವಂಚನೆ ಎಸಗುತ್ತಿದ್ದ ಯೂಸೂಫ್ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಈತನ ವಿರುದ್ಧ ದಾಖಲಾದ ವಿವಿಧ ಪ್ರಕರಣದಲ್ಲಿ ಒಂದನ್ನು ಸಿಸಿಬಿಗೆ ವರ್ಗಾವಣೆಯಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:49 am, Sun, 26 November 23